‘ದಸರಾ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು ಹೀರೋ ನಾನಿ ರಗಡ್‌ ಲುಕ್‌ ಅನಾವರಣಗೊಂಡಿದೆ. ನಾಯಕಿ ಕೀರ್ತಿ ಸುರೇಶ್‌ ಪಾತ್ರಕ್ಕೆ ಹೆಚ್ಚಿನ ಸ್ಕೋಪ್‌ ಇರುವ ಸೂಚನೆ ಸಿಗುತ್ತದೆ. ಕನ್ನಡ ಮೂಲದ ನಟ ದೀಕ್ಷಿತ್‌ ಶೆಟ್ಟಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

ನಾನಿ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಟ್ರೈಲರ್‌ ಬಿಡುಗಡೆಯಾಗಿದೆ. ಇದೊಂದು ಮಾಸ್ ಆಕ್ಷನ್ ಸಿನಿಮಾ. ‘ಧರಣಿ’ ಪಾತ್ರದಲ್ಲಿ ನಾನಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಸಿಗರೇಣಿ ಕಲ್ಲಿದ್ದಲಿನ ರಕ್ತಸಿಕ್ತ ಅಧ್ಯಾಯ ಸಿನಿಮಾಸಕ್ತರಲ್ಲಿ ಕುತೂಹಲ ಹುಟ್ಟುಹಾಕಿದೆ. ತೆಲಂಗಾಣದ ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ತೆರೆಯ ಮೇಲೆ ತರುತ್ತಿದೆ ಸಿನಿಮಾ.

ಚಿತ್ರದ ಟ್ರೈಲರ್‌ನಲ್ಲಿ ಗಮನ ಸೆಳೆದ ಮತ್ತೊಬ್ಬ ನಟ ದೀಕ್ಷಿತ್‌ ಶೆಟ್ಟಿ. ಕನ್ನಡ ಮೂಲದ ಈ ಹುಡುಗ ‘ದಿಯಾ’ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದರು. ‘ದಸರಾ’ದಲ್ಲಿ ನಾಯಕನ ಜೊತೆಗಿರುವ ಬಹುಮುಖ್ಯ ಪಾತ್ರ ಸಿಕ್ಕಿತೆ ದೀಕ್ಷಿತ್‌ರಿಗೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ಚಿತ್ರದ ನಾಯಕಿ. ಡಿ-ಗ್ಲ್ಯಾಮ್‌ ಲುಕ್‌ನಲ್ಲಿ ಚಿತ್ರದ ಪ್ರಮುಖ ಪಾತ್ರವಾಗಿ ಅವರು ಕಾಣಿಸಿದ್ದಾರೆ. ಸುಧಾಕರ್ ಚೆರುಕುರಿ ನಿರ್ಮಾಣದ ಚಿತ್ರವನ್ನು ಶ್ರೀಕಾಂತ್‌ ಒಡೆಲಾ ನಿರ್ದೇಶಿಸಿದ್ದಾರೆ. ಟೀಸರ್‌ನೊಂದಿಗೆ ಸದ್ದು ಮಾಡಿದ್ದ ಸಿನಿಮಾ ಟ್ರೈಲರ್‌ ಮೂಲಕ ಕ್ರೇಜ್‌ ಸೃಷ್ಟಿಸಿದೆ. ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಸಂತೋಷ್ ನಾರಾಯಣನ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ ಚಿತ್ರಕ್ಕಿದೆ. ಮಾರ್ಚ್‌ 30ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

Previous articleOscars 2023 ಪ್ರಶಸ್ತಿ ಪಟ್ಟಿ | ‘Everything Everywhere’ ಅತ್ಯುತ್ತಮ ಸಿನಿಮಾ
Next articleಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ಏಷಿಯನ್ ವಿಭಾಗ ಸ್ಪರ್ಧೆಯಲ್ಲಿ ‘ವಿರಾಟಪುರ ವಿರಾಗಿ’

LEAVE A REPLY

Connect with

Please enter your comment!
Please enter your name here