‘Everything Everywhere’, ಅತ್ಯುತ್ತಮ ಸಿನಿಮಾ ಸೇರಿದಂತೆ ಒಟ್ಟು ಏಳು ಪ್ರಶಸ್ತಿಗಳೊಂದಿಗೆ ಮೇಲುಗೈ ಸಾಧಿಸಿದೆ. ಮಲೇಷ್ಯಾದ Michelle Yeoh ಅತ್ಯುತ್ತಮ ನಾಯಕನಟಿ ಪ್ರಶಸ್ತಿ ಪಡೆದು, ಈ ಗೌರವಕ್ಕೆ ಪಾತ್ರವಾದ ಏಷ್ಯಾದ ಮೊಲದ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Surreal sci-fi ಸಿನಿಮಾ ‘Everything Everywhere’, ಅತ್ಯುತ್ತಮ ಸಿನಿಮಾ ಸೇರಿದಂತೆ ಒಟ್ಟು ಏಳು ಪ್ರಶಸ್ತಿಗಳೊಂದಿಗೆ ಮೇಲುಗೈ ಸಾಧಿಸಿದೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಾಯಕನಟಿ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಪೋಷಕ ನಟ – ನಟಿ ವಿಭಾಗಗಳಲ್ಲಿ ಸಿನಿಮಾಗೆ ಆಸ್ಕರ್‌ ಪುರಸ್ಕಾರಗಳು ಸಂದಿವೆ. ಮಲೇಷ್ಯಾದ Michelle Yeoh ಅತ್ಯುತ್ತಮ ನಾಯಕನಟಿ ಪ್ರಶಸ್ತಿ ಪಡೆದು, ಈ ಗೌರವಕ್ಕೆ ಪಾತ್ರವಾದ ಏಷ್ಯಾದ ಮೊಲದ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘The Whale’ ಚಿತ್ರದ ಉತ್ತಮ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ Brendan Fraser ಚಿತ್ರದ ನಿರ್ದೇಶಕ Darren Aronofsky ಅವರಿಗೆ ಪ್ರಶಸ್ತಿ ಅರ್ಪಿಸಿದರು. ಜಾಗತಿಕ ಸಿನಿಮಾ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡಿದ ‘Everything Everywhere’ ಅತ್ಯುತ್ತಮ ಸಿನಿಮಾ ಆಗಿ ಆಯ್ಕೆಯಾಗಿ ಸಿನಿಮಾ ವಿಶ್ಲೇಷಕರ ಊಹೆಯನ್ನು ನಿಜವಾಗಿಸಿತು. ‘Guillermo del Toro’s Pinocchio’ ಅತ್ಯುತ್ತಮ ಅನಿಮೇಷನ್‌ ಸಿನಿಮಾ ಆಗಿ ಆಯ್ಕೆಯಾದರೆ, ‘Avatar: The Way of Water’ ವಿಶ್ಯುಯೆಲ್‌ ಎಫೆಕ್ಟ್ಸ್‌ಗೆ ಪ್ರಶಸ್ತಿ ಪಡೆಯಿತು.

95ನೇ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

ಅತ್ಯುತ್ತಮ ಸಿನಿಮಾ : Everything Everywhere All at Once
ನಾಯಕನಟಿ : Michelle Yeoh, (Everything Everywhere All at Once)
ನಾಯಕನಟ : Brendan Fraser (The Whale)
ಪೋಷಕ ನಟ : Ke Huy Quan (Everything Everywhere All at Once)
ಪೋಷಕ ನಟಿ : Jamie Lee Curtis (Everything Everywhere All at Once)
ಒರಿಜಿನಲ್‌ ಸಾಂಗ್‌ : ನಾಟು ನಾಟು (RRR)
ಸಂಕಲನ : Everything Everywhere All at Once
ನಿರ್ದೇಶಕ : Daniel Kwan and Daniel Scheinert (Everything Everywhere All at Once)
ಅನಿಮೇಟೆಡ್‌ ಫೀಚರ್‌ : Guillermo del Toro’s Pinocchio
ಇಂಟರ್‌ನ್ಯಾಷನಲ್‌ ಫೀಚರ್‌ ಸಿನಿಮಾ : All Quiet on the Western Front (Germany)
ಡಾಕ್ಯುಮೆಂಟರಿ ಫೀಚರ್‌ : Navalny
ಲೈವ್‌ ಆಕ್ಷನ್‌ ಶಾರ್ಟ್‌ : An Irish Goodbye
ಸಿನೆಮಾಟೊಗ್ರಫಿ : James Friend (All Quiet on the Western Front)
ಮೇಕಪ್‌ ಮತ್ತು ಹೇರ್‌ಸ್ಟೈಲಿಂಗ್‌ : The Whale
ಕಾಸ್ಟ್ಯೂಮ್‌ ಡಿಸೈನ್‌ : Black Panther: Wakanda Forever
ಡಾಕ್ಯುಮೆಂಟರಿ ಶಾರ್ಟ್‌ : The Elephant Whisperers
ಅನಿಮೇಟೆಡ್‌ ಶಾರ್ಟ್‌ : The Boy, the Mole, the Fox and the Horse
ಪ್ರೊಡಕ್ಷನ್‌ ಡಿಸೈನ್‌ : All Quiet on the Western Front
ಮ್ಯೂಸಿಕ್‌ (ಒರಿಜಿನಲ್‌ ಸ್ಕೋರ್‌) : Volker Bertelmann (All Quiet on the Western Front)
ವಿಶ್ಯುಯೆಲ್‌ ಎಫೆಕ್ಟ್ಸ್‌ : Avatar: The Way of Water
ಒರಿಜಿನಲ್‌ ಸ್ಕ್ರೀನ್‌ಪ್ಲೇ : Everything Everywhere All at Once
ಅಡಾಪ್ಟೆಡ್‌ ಸ್ಕ್ರೀನ್‌ಪ್ಲೇ : Women Talking
ಬೆಸ್ಟ್‌ ಸೌಂಡ್‌ : Top Gun: Maverick

LEAVE A REPLY

Connect with

Please enter your comment!
Please enter your name here