ಮಾಧುರಿ ದೀಕ್ಷಿತ್‌ ನಟನೆಯ ‘ದಿ ಫೇಮ್‌ ಗೇಮ್‌’ ವೆಬ್‌ ಸರಣಿ ಟ್ರೈಲರ್‌ ರಿಲೀಸ್‌ ಆಗಿದೆ. ಸಂಜಯ್‌ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸರಣಿ ಫೆಬ್ರವರಿ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ನೆಟ್‌ಫ್ಲಿಕ್ಸ್‌ ಇಂದು ‘ದಿ ಫೇಮ್‌ ಗೇಮ್‌’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆ ಮಾಡಿದೆ. ಕರಣ್‌ ಜೋಹರ್‌ ನಿರ್ಮಾಣದಲ್ಲಿ ಮಾಧುರಿ ದೀಕ್ಷಿತ್‌ ನಟಿಸುತ್ತಿರುವ ಸರಣಿಯ ಶೀರ್ಷಿಕೆ ಮೊದಲು ‘ಫೈಂಡಿಂಗ್‌ ಅನಾಮಿಕ’ ಎಂದಿತ್ತು. ಬದಲಾದ ಶೀರ್ಷಿಕೆಯೊಂದಿಗೆ ಇದೀಗ ಟ್ರೈಲರ್‌ ಬಿಡುಗಡೆಯಾಗಿದ್ದು ಫೆಬ್ರವರಿ 25ರಿಂದ ಸರಣಿ ಸ್ಟ್ರೀಮ್‌ ಆಗಲಿದೆ. ಸರಣಿಯಲ್ಲಿ ಮಾಧುರಿ ದೀಕ್ಷಿತ್‌ ಜನಪ್ರಿಯ ಸಿನಿಮಾ ತಾರೆ ಅನಾಮಿಕಾ ಆನಂದ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ಬೇಡುವ ಗ್ಲಾಮರ್‌, ಸಿನಿಮಾ ಹಿನ್ನೆಲೆಯ ಸನ್ನಿವೇಶಗಳ ಜೊತೆ ಥ್ರಿಲ್ಲರ್‌ ಕತೆಯ ಸೂಚನೆ ಟ್ರೈಲರ್‌ನಲ್ಲಿ ಸಿಗುತ್ತದೆ. ಮಾನವ್‌ಕೌಲ್‌, ಲಕ್ಷ್ಯವೀರ್‌ ಶರಣ್‌, ಮಸ್ಕಾನ್‌ ಜಾಫರಿ, ಸುಹಾಸಿನಿ ಮುಲೇ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ನಿರ್ಮಾಪಕ ಕರಣ್‌ ಜೋಹರ್‌, “”ಸ್ಟಾರ್‌ಡಮ್‌ ಮತ್ತು ಖ್ಯಾತಿಯ ಹಿಂದೆ ಸಾಕಷ್ಟು ಗುಟ್ಟುಗಳಿರುತ್ತವೆ. ಬಾಲಿವುಡ್‌ನ ದೊಡ್ಡ ಸ್ಟಾರ್‌ ಅನಾಮಿಕಾ ಆನಂದ್‌ ಬದುಕಿನಲ್ಲಿ ಅಂತಹ ಏನೆಲ್ಲಾ ರಹಸ್ಯಗಳಿವೆ? ಶೀಘ್ರದಲ್ಲೇ ನೀವು ನೋಡಲಿದ್ದೀರಿ..” ಎನ್ನುವ ಒಕ್ಕಣಿಯೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ ಶೇರ್‌ ಮಾಡಿದ್ದರು. ಈ ವೆಬ್‌ಸರಣಿ ಮೂಲಕ ಸುಮಾರು ಎರಡು ದಶಕಗಳ ನಂತರ ಮಾಧುರಿ ದೀಕ್ಷಿತ್‌ ಮತ್ತು ಸಂಜಯ್‌ಕಪೂರ್‌ ಜೊತೆಯಾಗಿ ನಟಿಸುತ್ತಿದ್ದಾರೆ. 1997ರಲ್ಲಿ ಇವರಿಬ್ಬರೂ ‘ಮೊಹಬ್ಬತ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತೊಂಬತ್ತರ ದಶಕದಲ್ಲಿ ಇವರು ಜೋಡಿಯಾಗಿ ನಟಿಸಿದ್ದ ‘ರಾಜ’ ಯಶಸ್ವಿಯಾಗಿತ್ತು. ಬೆಜಾಯ್‌ ನಂಬಿಯಾರ್‌ ಮತ್ತು ಕರಿಶ್ಮಾ ಕೊಹ್ಲಿನಿ ರ್ದೇಶನದ ಸರಣಿ ಫೆಬ್ರವರಿ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here