ತರುಣ್‌ ಭಾಸ್ಕರ್‌ ನಟಿಸಿ, ನಿರ್ದೇಶಿಸಿರುವ ‘ಕೀಡಾ ಕೋಲಾ’ ಕ್ರೈಮ್‌ – ಕಾಮಿಡಿ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಚೈತನ್ಯ ರಾವ್‌, ರಾಗ್‌ ಮಯೂರ್‌, ಬ್ರಹ್ಮಾನಂದಂ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ನವೆಂಬರ್‌ 3ರಂದು ಸಿನಿಮಾ ತೆರೆಕಾಣಲಿದೆ.

ಚೈತನ್ಯ ರಾವ್, ರಾಗ್ ಮಯೂರ್ ಮತ್ತು ಬ್ರಹ್ಮಾನಂದಂ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕೀಡಾ ಕೋಲಾ’ ಹಾಸ್ಯ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ತರುಣ್ ಭಾಸ್ಕರ್ ನಟಿಸಿ, ನಿರ್ದೇಶಿಸಿರುವ ಕ್ರೈಮ್ ಕಾಮಿಡಿ ಚಿತ್ರವಿದು. ರಾಣಾ ದಗ್ಗುಬಾಟಿ ಮತ್ತು ಸುರೇಶ್ ಬಾಬು ಅವರು ಹೈದರಾಬಾದ್‌ನಲ್ಲಿ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಮೂವರು ಆತ್ಮೀಯ ಸ್ನೇಹಿತರ ಜೀವನದ ಪರಿಸ್ಥಿತಿಗಳೇ ಚಿತ್ರದ ಕಥಾಹಂದರ. ಈ ಮೂವರು ಸ್ನೇಹಿತರಲ್ಲಿ ಒಬ್ಬ ವಿಕಲಾಂಗ ಚೇತನನಾಗಿರುತ್ತಾನೆ. ಇವರೆಲ್ಲರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿರುತ್ತಾರೆ. ಚಿತ್ರವು ಅವರ ಜೀವನ, ಹೋರಾಟ ಹಾಗೂ ಆರ್ಥಿಕ ಪರಿಸ್ಥಿತಿಗಳನ್ನು ತೆರೆದಿಟ್ಟಿದೆ.

ಮೂವರು ಸ್ನೇಹಿತರಲ್ಲಿ ಒಬ್ಬ ವಕೀಲ. ಅವರ ಮನೆಯ ಕೋಲಾ ಬಾಟಲಿಯೊಂದರಲ್ಲಿ ಜಿರಲೆ ವಾಸಿಸುತ್ತಿರುತ್ತದೆ. ಆ ಜಿರಲೆಯು ಅವರನ್ನೆಲ್ಲಾ ಶ್ರೀಮಂತರನ್ನಾಗಿ ಮಾಡುತ್ತದೆ ಎಂಬ ನಂಬಿಕೆಯಿಂದ ಅದನ್ನು ಜೋಪಾನ ಮಾಡುತ್ತಿರುತ್ತಾರೆ. ಟ್ರೇಲರ್‌ ದ್ವಿತೀಯಾರ್ಧವು ಕಾರ್ಪೊರೇಟರ್ ಒಬ್ಬನ ಮತ್ತು ಅವನ ಅಧೀನದಲ್ಲಿ ಕೆಲಸ ಮಾಡುವ ಜನಗಳ ಆಂತರಿಕ ರಾಜಕೀಯ ಸಮಸ್ಯೆಗಳನ್ನು ಹೇಳುತ್ತದೆ. ಕಾರ್ಪೊರೇಟರ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ ಇದರ ಮಧ್ಯದಲ್ಲಿ ಅನೇಕ ಗಲಭೆ, ಹಿಂಸೆ, ಕೊಲೆಗಳು ನಡೆಯತ್ತವೆ. ವಿಭಿನ್ನ ಚಿತ್ರಕಥೆಗಳ ಆಯ್ಕೆಯಲ್ಲಿ ತರುಣ್‌ ಅವರು ಯಾವಾಗಲೂ ಒಂದು ಹೆಜ್ಜೆ ಮುಂದು. ‘ಪೆಲ್ಲಿ ಚೂಪುಲು’ ಮತ್ತು ‘ಈ ನಾಗಾರಾಣಿಕಿ ಏಮೈಂದಿ’ ಚಿತ್ರಗಳ ನಂತರ ವಿಭಿನ್ನ ಹಾಸ್ಯ ಕಥೆಯೊಂದನ್ನು ಇವರು ತೆರೆಮೆಲೆ ತರಲು ಸಜ್ಜಾಗಿದ್ದಾರೆ. Suresh Productions ಬ್ಯಾನರ್‌ ಅಡಿಯಲ್ಲಿ ರಾಣಾ ದಗ್ಗುಬಾಟಿ ಚಿತ್ರವನ್ನು ಪ್ರಸ್ತುತ ಪಡಿಸಿದ್ದು, ಕೆ ವಿವೇಕ್ ಸುಧಾಂಶು, ಸಾಯಿಕೃಷ್ಣ ಗದ್ವಾಲ್, ಶ್ರೀನಿವಾಸ್ ಕೌಶಿಕ್ ನಂದೂರಿ, ಶ್ರೀಪಾದ್ ನಂದಿರಾಜ್ ಮತ್ತು ಉಪೇಂದ್ರ ವರ್ಮ ನಿರ್ಮಿಸಿದ್ದಾರೆ. ವಿವೇಕ್ ಸಾಗರ್ ಸಂಗೀತ ಸಂಯೋಜಿಸಿದ್ದಾರೆ. ಇದೇ ನವೆಂಬರ್‌ 3, 2023ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here