ಬಿ ಎಸ್‌ ಅಭಿಲಾಷ್‌ ನಿರ್ದೇಶನದ ‘ಓಳಂ’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಅರ್ಜುನ್‌ ಅಶೋಕನ್‌ ಮತ್ತು ಲೆನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾ ಜುಲೈ 7ರಂದು ಬಿಡುಗಡೆಯಾಗಲಿದೆ.

ಅರ್ಜುನ್ ಅಶೋಕನ್‌ ಮತ್ತು ಲೆನಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ‘ಓಳಂ’ ಮಲಯಾಳಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿ ಎಸ್ ಅಭಿಲಾಷ್ ನಿರ್ದೇಶನದ ಜೊತೆಗೆ ಲೆನಾರೊಟ್ಟಿಗೆ ಚಿತ್ರಕಥೆ ರಚಿಸಿದ್ದಾರೆ. ಪೂಣಥಿಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನೌಫಲ್ ಪೂಣಥಿಲ್ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಬಿನು ಪಪ್ಪು, ಹರಿಶ್ರೀ ಅಶೋಕನ್, ನೋಬಿ ಮಾರ್ಕೋಸ್, ಸುರೇಶ್ಚಂದ್ರ ಮೆನನ್, ಪಾಲಿ ವತ್ಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯು ಫ್ಯಾಂಟಸಿ ಮತ್ತು ನೈಜತೆ ಮಿಶ್ರಿತವಾಗಿದ್ದು, ನೀರಜ್ ರವಿ ಛಾಯಾಗ್ರಹಣ, ಅಶ್ಕರ್ ಸೌದನ್, ಶಮ್ಜಿತ್ ಮೊಹಮ್ಮದ್ ಸಂಕಲನ, ಅರುಣ್ ಥಾಮಸ್ ಸಂಗೀತ ನಿರ್ದೇಶನವಿದೆ. ಇದೇ ಜುಲೈ 7ರಂದು ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಅರ್ಜುನ್ ಅಶೋಕನ್ ಈ ವರ್ಷ ‘ರೋಮಾಂಚಮ್’, ‘ಪ್ರಣಯ ವಿಲಾಸಂ’, ‘ತುರಮುಖಂ’ ಮತ್ತು ‘ತ್ರಿಶಂಕು’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ‘ಎಣ್ಣಿಟ್ಟು ಅವಸನಂ’, ‘ನ್ಯಾನ್ಸಿ ರಾಣಿ’, ‘ಚಾವೆರ್’, ‘ಥಟ್ಟಸೇರಿ ಕೂಟಂ’, ‘ಖಜುರಾಹೊ ಡ್ರೀಮ್ಸ್’, ‘ತೀಪ್ಪೋರಿ ಬೆನ್ನಿ’, ‘ಸಂಭವಂ ನಾದನ್ನ ರಾತ್ರಿಯಿಲ್’, ಮತ್ತು ‘ಅಂತಪ್ಪನ್ ವೆಡ್ಸ್ ಆನ್ಸಿ’ ಒಳಗೊಂಡ ಅವರ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ನಟಿ ಲೆನಾ ಈ ವರ್ಷ ‘ಅನುರಾಗಂ’, ‘ಓ ಮೈ ಡಾರ್ಲಿಂಗ್’ ಮತ್ತು ‘ಎನ್ನಲುಮ್ ಎಂಟೆ ಅಲಿಯಾ’ದಲ್ಲಿ ಕಾಣಿಸಿಕೊಂಡಿದ್ದರು.

Previous articlePRK ಪ್ರೊಡಕ್ಷನ್ಸ್‌ನ ‘ಆಚಾರ್‌ & ಕೋ’ ಜುಲೈ 28ಕ್ಕೆ ತೆರೆಗೆ | ಇದು ಮಹಿಳೆಯರ ಸಿನಿಮಾ!
Next articleವಿದ್ಯಾ ಬಾಲನ್‌ ‘ನೀಯತ್‌’ | ಅನು ಮೆನನ್‌ ನಿರ್ದೇಶನದ ಮರ್ಡರ್‌ ಮಿಸ್ಟರಿ ಜುಲೈ 7ಕ್ಕೆ ತೆರೆಗೆ

LEAVE A REPLY

Connect with

Please enter your comment!
Please enter your name here