ಶಕ್ತಿ ಪ್ರತಾಪ್ ಸಿಂಗ್ ಹಡಾ ನಿರ್ದೇಶನದ ‘ಆಪರೇಷನ್ ವ್ಯಾಲೆಂಟೇನ್’ ತೆಲುಗು ಮತ್ತು ಹಿಂದಿ ದ್ವಿಭಾಷಾ ಸಿನಿಮಾದ ಟ್ರೇಲರ ಬಿಡುಗಡೆಯಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟ ಚಿತ್ರದ ಕಥಾವಸ್ತು. ವರುಣ್ ತೇಜ್ ಮತ್ತು ಮಾನುಷಿ ಛಿಲ್ಲರ್ ನಟನೆಯ ಸಿನಿಮಾ ಮಾರ್ಚ್ 1ರಂದು ತೆರೆಕಾಣಲಿದೆ.
ವರುಣ್ ತೇಜ್ ಮತ್ತು ಮಾನುಷಿ ಛಿಲ್ಲರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಆಪರೇಷನ್ ವ್ಯಾಲೆಂಟೇನ್’ ತೆಲುಗು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಹಿಂದಿ ಅವತರಣಿಕೆಯನ್ನು ಸಲ್ಮಾನ್ ಖಾನ್ ಮತ್ತು ತೆಲುಗು ಅವತರಣಿಕೆಯನ್ನು ರಾಮ್ ಚರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರವನ್ನು ಶಕ್ತಿ ಪ್ರತಾಪ್ ಸಿಂಗ್ ಹಡಾ ನಿರ್ದೇಶಿಸಿದ್ದು, ತೆಲುಗು ಮತ್ತು ಹಿಂದಿ ಎರಡೂ ಭಾಷೆಗಳಲ್ಲೂ ಏಕಕಾಲಕ್ಕೆ ಚಿತ್ರೀಕರಿಸಲಾಗಿದೆ. ಸಿನಿಮಾ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ. ಟ್ರೇಲರ್ ರೋಚಕ ಯುದ್ಧ ವಿಮಾನಗಳಿಂದ ಕೂಡಿದೆ. ವರುಣ್ ಫೈಲಟ್ ರುದ್ರನಾಗಿ ಪಾತ್ರ ನಿರ್ವಹಿಸಿದ್ದು, ಮಾನುಷಿ ಛಿಲ್ಲರ್ ರುದ್ರನ ಪ್ರೇಯಸಿ, ರಾಡಾರ್ ಅಧಿಕಾರಿ ಸೋನಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದನೆಯ ವಿರುದ್ಧದ ರೋಚಕ ಕದನವನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ನವದೀಪ್, ಅಲಿ ರೆಜಾ ಮತ್ತು ರುಹಾನಿ ಶರ್ಮಾ ಐಎಎಫ್ ಪೈಲಟ್ಗಳಾಗಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವನ್ನು Sony Pictures International ಬ್ಯಾನರ್ ಅಡಿಯಲ್ಲಿ ಸಂದೀಪ್ ಮುದ್ದ ನಿರ್ಮಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ‘ಗಾಂಡೀವಧಾರಿ ಅರ್ಜುನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವರುಣ್ ತೇಜ್ ಈ ದ್ವಿಭಾಷಾ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಮಿಕ್ಕಿ ಜೆ ಮೇಯರ್ ಸಂಗೀತ, ಹರಿ ಕೆ ವೇದಾಂತಂ ಛಾಯಾಗ್ರಹಣ, ಸಾಯಿ ಮಾಧವ್ ಬುರ್ರಾ ಸಂಭಾಷಣೆ, ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ. ಮಾರ್ಚ್ 1ರಂದು ಸಿನಿಮಾ ತೆರೆಕಾಣಲಿದೆ.