ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS)ನ ಆಡಳಿತ ಮಂಡಳಿಯು ಆಸ್ಕರ್‌ಗೆ ಹೊಸ ವರ್ಗವನ್ನು ಸೇರಿಸುವುದಾಗಿ ಹೇಳಿದೆ. 2025ರಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳಿಗೆ ಪ್ರಶಸ್ತಿ ನೀಡುವ 98ನೇ ಆವೃತ್ತಿಯ ಸಂದರ್ಭದಲ್ಲಿ ಕಾಸ್ಟಿಂಗ್‌ ವಿಭಾಗಕ್ಕೆ ಪ್ರಶಸ್ತಿ ನೀಡಿ ಗೌರವಿಸುವುದಾಗಿ Oscar ಘೋಷಿಸಿದೆ.

ಕಾಸ್ಟಿಂಗ್ ನಿರ್ದೇಶಕರಿಗಾಗಿ ಆಸ್ಕರ್‌ ಹೊಸ ಪ್ರಶಸ್ತಿ ಘೋಷಿಸಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS)ನ ಆಡಳಿತ ಮಂಡಳಿಯು ಆಸ್ಕರ್‌ಗೆ ಹೊಸ ವರ್ಗವನ್ನು ಸೇರಿಸುವುದಾಗಿ ಹೇಳಿದೆ. 2025ರಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳಿಗೆ ಪ್ರಶಸ್ತಿ ನೀಡುವ 98ನೇ ಆವೃತ್ತಿಯ ಸಂದರ್ಭದಲ್ಲಿ ಕಾಸ್ಟಿಂಗ್‌ ವಿಭಾಗದ ನಿರ್ದೇಶನದಲ್ಲಿ ಸಾಧನೆ ಮಾಡಿದವರಿಗೆ ಅಕಾಡೆಮಿ ಪ್ರಶಸ್ತಿ ನೀಡುವುದಾಗಿ ಮಾಹಿತಿ ಹಂಚಿಕೊಂಡಿದೆ. ‘ಹೊಸದಾಗಿ ಈ ವಿಭಾಗದಲ್ಲಿ ಘೋಷಿಸಿರುವ ಮೊದಲ ಪ್ರಶಸ್ತಿಯನ್ನು 2026ರಲ್ಲಿ ವಿತರಿಸಲಾಗುವುದು. ಇದೊಂದು ಮೈಲುಗಲ್ಲಾಗಲಿದೆ. ಈ ಪ್ರಕ್ರಿಯೆಯಲ್ಲಿ ಕಾಸ್ಟಿಂಗ್ ನಿರ್ದೇಶಕ ಸದಸ್ಯರ ಬದ್ಧತೆ ಮತ್ತು ಶ್ರದ್ಧೆಗಾಗಿ ನಾವು ಅವರನ್ನು ಅಭಿನಂದಿಸುತ್ತೇವೆ’ ಎಂದು ಅಕಾಡೆಮಿ CEO ಬಿಲ್ ಕ್ರಾಮರ್ ಮತ್ತು ಅಕಾಡೆಮಿ ಅಧ್ಯಕ್ಷ ಜಾನೆಟ್ ಯಾಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಕಾಡೆಮಿಯು ಜುಲೈ 2013ರಲ್ಲಿ ಕಾಸ್ಟಿಂಗ್ ನಿರ್ದೇಶಕರ ಶಾಖೆಯನ್ನು ಪ್ರಕಟಿಸಿತ್ತು, ಇದು ಪ್ರಸ್ತುತ ಸುಮಾರು 160 ಸದಸ್ಯರನ್ನು ಒಳಗೊಂಡಿದೆ. ಅಕಾಡೆಮಿ ಕಾಸ್ಟಿಂಗ್ ನಿರ್ದೇಶಕರ ಶಾಖೆಯ ಗವರ್ನರ್‌ಗಳಾದ ರಿಚರ್ಡ್ ಹಿಕ್ಸ್, ಕಿಮ್ ಟೇಲರ್ – ಕೋಲ್ಮನ್ ಮತ್ತು ಡೆಬ್ರಾ ಜೇನ್ ಈ ಕುರಿತು ‘ಈ ಪ್ರಶಸ್ತಿಯು ನಮ್ಮ ಕಾಸ್ಟಿಂಗ್ ನಿರ್ದೇಶಕರ ಪ್ರತಿಭೆಯನ್ನು ಗೌರವಿಸುವ ವಿಧಾನವಾಗಿದೆ’ ಎಂದಿದ್ದಾರೆ. ಈ ಹಿಂದೆ ಅಕಾಡೆಮಿಯು 2001ರಲ್ಲಿ ‘ಅತ್ಯುತ್ತಮ ಅನಿಮೇಟೆಡ್ ಚಿತ್ರ’ ಮತ್ತು 2018ರಲ್ಲಿ ‘ಅತ್ಯುತ್ತಮ ಜನಪ್ರಿಯ ಚಲನಚಿತ್ರ’ ಅಕಾಡೆಮಿ ಪ್ರಶಸ್ತಿಗಳನ್ನು ಹೊಸದಾಗಿ ಘೋಷಿಸಿತ್ತು.

LEAVE A REPLY

Connect with

Please enter your comment!
Please enter your name here