ಅಪರೂಪದ ವೆಬ್ ಸರಣಿ, ಸಿನಿಮಾಗಳಿಗೆ ಜೂನ್ ತಿಂಗಳು ಸಾಕ್ಷಿಯಾಗಲಿದೆ. ಹಲವು ಆಸಕ್ತಿಕರ ಕಂಟೆಂಟ್ ವಿವಿಧ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಮೂಡಿಬರಲಿದೆ.
Chris Hemsworth ಅವರ ‘Extraction 2’ (Netflix), School of Lies (Disney+ Hotstar) ಸೇರಿದಂತೆ ಹಲವು ಆಸಕ್ತಿಕರ ವೆಬ್ ಸರಣಿ, ಸಿನಿಮಾಗಳು ಜೂನ್ ತಿಂಗಳಲ್ಲಿ ಸ್ಟ್ರೀಮ್ ಆಗಲಿವೆ. ಹನ್ಸಲ್ ಮೆಹ್ತಾ ನಿರ್ದೇಶನದ ಥ್ರಿಲ್ಲರ್ ‘Scoop’ ನೆಟ್ಫ್ಲಿಕ್ಸ್ನಲ್ಲಿ ಈಗಾಗಲೇ ಸ್ಟ್ರೀಮ್ ಆಗುತ್ತಿದೆ. ಸಂತೋಷ್ ಶಿವನ್ ನಿರ್ದೇಶನದಲ್ಲಿ ವಿಜಯ್ ಸೇತುಪತಿ ನಟಿಸಿರುವ ‘ಮುಂಬೈಕರ್’ JioCinemaದಲ್ಲಿ ಬರಲಿದೆ.
Bloody Daddy (JioCinema) – June 9
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಶಾಹೀದ್ ಕಪೂರ್ ನಟಿಸಿರುವ ‘Bloody Daddy’ ಸಿನಿಮಾ ಜೂನ್ 9ರಿಂದ ಸ್ಟ್ರೀಮ್ ಆಗಲಿದೆ. ಚಿತ್ರದ ಟ್ರೈಲರ್ ಹೇಳುವಂತೆ ಶಾಹೀದ್ ಇಲ್ಲಿ ಭರ್ಜರಿ ಆಕ್ಷನ್ ಮಾಡಿದ್ದಾರೆ. ರೋನಿತ್ ರಾಯ್, ಸಂಜಯ್ ಕಪೂರ್, ಡಯಾನಾ ಪೆಂಟಿ, ರಾಜೀವ್ ಖಂಡೇಲ್ವಾಲ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Scoop (Netflix) – June 2
‘Scam 1992: The Harshad Mehta Story’ ಸರಣಿ ನಂತರ ಹನ್ಸಲ್ ಮೆಹ್ತಾ ‘Scoop’ ವೆಬ್ ಸರಣಿಯೊಂದಿಗೆ ಮರಳಿದ್ದಾರೆ. ಇಲ್ಲಿ ನಟಿ ಕರಿಷ್ಮಾ ತನ್ನಾ ವರು ಕ್ರೈಂ ರಿಪೋರ್ಟರ್ ‘ಜಾಗೃತಿ ವೋರಾ’ ಪಾತ್ರದಲ್ಲಿ ನಟಿಸಿದ್ದಾರೆ. ಸಹೋದ್ಯೋಗಿ ಕೊಲೆಯ ಹಿನ್ನೆಲೆಯಲ್ಲಿ ಆಕೆ ಮೀಡಿಯಾ, ಪೊಲೀಸ್ ಮತ್ತು ಭೂಗತ ಜಗತ್ತಿನ ಸುಳಿಗೆ ಸಿಲುಕುತ್ತಾಳೆ. ಈ ನೆಟ್ಫ್ಲಿಕ್ಸ್ ಒರಿಜಿನಲ್ ಸರಣಿ ಜಿಗ್ನಾ ವೋರಾ ಕೃತಿ ‘Behind Bars in Byculla: My Dasy in Prison’ ಆಧರಿಸಿದ್ದು ಎನ್ನುವುದು ವಿಶೇಷ. ಸರಣಿ ನಿನ್ನೆ ಜೂನ್ 2ರಿಂದ ಸ್ಟ್ರೀಮ್ ಆಗುತ್ತಿದೆ.
School Of Lies (Disney+ Hotstar) – June 2
ನಿಮ್ರತ್ ಕೌರ್ ನಟನೆಯ ಈ ಸರಣಿಯ ಕೇಂದ್ರಬಿಂದು ಪುಟ್ಟ ಹುಡುಗ. ಸ್ಕೂಲ್ನಿಂದ ಕಾಣೆಯಾಗುವ ಶಕ್ತಿ ಸಲಗಾಂವ್ಕರ್ ಕುರಿತು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಆ ಬೋರ್ಡಿಂಗ್ ಸ್ಕೂಲ್ಗೆ ಬರುವ ಗೈಡೆನ್ಸ್ ಕೌನ್ಸೆಲರ್ ಪಾತ್ರದಲ್ಲಿ (ನಂದಿತಾ ಮೆಹ್ರಾ) ನಿಮ್ರತ್ ನಟಿಸಿದ್ದಾರೆ. BBC Studios ನಿರ್ಮಾಣದ ಈ ಸರಣಿಗೆ ನೈಜ ಘಟನೆ ಸ್ಫೂರ್ತಿ. ಆಮೀರ್ ಬಷೀರ್, ಗೀತಿಕಾ ವಿದ್ಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸರಣಿ ಮೊನ್ನೆ ಜೂನ್ 2ರಿಂದ ಸ್ಟ್ರೀಮ್ ಆಗುತ್ತಿದೆ.
Extraction 2 (Netflix) – June 16
2020ರ ಆಕ್ಷನ್ ಸಿನಿಮಾ ‘Extraction’ ಸರಣಿಯಿದು. Chris Hemswroth ನಟನೆಯ ಸರಣಿಯಲ್ಲಿ high-octane ಆಕ್ಷನ್ಗಳಿವೆ. Joe Russo ಮತ್ತು Anthony Russo ನಿರ್ಮಾಣದ ಸರಣಿಯನ್ನು Sam Hargrave ನಿರ್ದೇಶಿಸಿದ್ದಾರೆ. 2020ರ ಏಪ್ರಿಲ್ನಲ್ಲಿ ತೆರೆಕಂಡದ್ದ ಪ್ರೀಕ್ವೆಲ್ನಲ್ಲಿ ಭಾರತೀಯ ಮೂಲದ ರುದ್ರಾಕ್ಷ ಜೈಸ್ವಾಲ್, ರಣದೀಪ್ ಹೂಡಾ, ಪಂಕಜ್ ತ್ರಿಪಾಠಿ, ಪ್ರಿಯಾನ್ಶು ಪನ್ಯೂಲಿ ನಟಿಸಿದ್ದರು.
Mumbaikar (JioCinema) – June 2
2017ರಲ್ಲಿ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ತೆರೆಕಂಡಿದ್ದ ‘ಮಾನಗರಂ’ ಹಿಂದಿ ರೀಮೇಕ್ ಇದು. ಈ ಚಿತ್ರದೊಂದಿಗೆ ವಿಜಯ್ ಸೇತುಪತಿ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ವಿಕ್ರಾಂತ್ ಮೆಸ್ಸಿ, ತಾನ್ಯಾ ಮನಿಕ್ತಲಾ, ಸಂಜಯ್ ಮಿಶ್ರಾ, ರಣವೀರ್ ಶೌರಿ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಿಡ್ನಾಪ್ನಲ್ಲಾಗುವ ಅತಾಚುರ್ಯದಿಂದ ಎದುರಾಗುವ ಸನ್ನಿವೇಶಗಳೇ ಚಿತ್ರದ ಕಥಾವಸ್ತು.
The Night Manager 2 (Disney+ Hotstar) – June 30
ಅನಿಲ್ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್ ನಟನೆಯ ‘The Night Manager’ ಸೆಕೆಂಡ್ ಸೀಸನ್ ತಿಂಗಳ ಕೊನೆಯಲ್ಲಿ ಸ್ಟ್ರೀಮ್ ಆಗಲಿದೆ. ಈ ವೆಬ್ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಶೋಭಿತಾ ಧುಲಿಪಾಲಾ, ತಿಲೋತ್ತಮಾ ಶೋಮ್, ಶಾಶ್ವತಾ ಚಟರ್ಜೀ, ರವಿ ಬೆಹ್ಲ್ ನಟಿಸಿದ್ದಾರೆ. ಇದೇ ಹೆಸರಿನ ಜನಪ್ರಿಯ ಬ್ರಿಟಿಷ್ ಶೋನ ಹಿಂದಿ ಅವತರಣಿಕೆ ಇದು. ಸಂದೀಪ್ ಮೋದಿ ಸೆಕೆಂಡ್ ಸೀಸನ್ ನಿರ್ದೇಶಿಸಿದ್ದಾರೆ.
ಅಸುರ್ 2 (JioCinema) – June 1
2020ರಲ್ಲಿ ಬಂದಿದ್ದ ‘ಅಸುರ್’ ಸರಣಿಯ ಸೀಕ್ವೆಲ್ ಇದು. ಈ ಕ್ರಿಮಿನಲ್ – ಡ್ರಾಮಾದಲ್ಲಿ ಅರ್ಷದ್ ವಾರ್ಸಿ ನಟಿಸಿದ್ದಾರೆ. ಮೊದಲ ಸೀಸನ್ VOOTನಲ್ಲಿ ಮೂಡಿಬಂದಿತ್ತು. ಇದೀಗ ಎರಡನೇ ಸೀಸನ್ JioCinemaದಲ್ಲಿ ಸ್ಟ್ರೀಮ್ ಆಗಲಿದೆ. ಸೀಕ್ವೆಲ್ನಲ್ಲಿ ಅರ್ಷದ್ ಪಾತ್ರ ‘ಧನಂಜಯ್ ರಜಪೂತ್’ ಬರೂನ್ ಸೋಬ್ತಿ ನಟಿಸಿರುವ ‘ನಿಖಿಲ್ ನಾಯರ್’ ಪಾತ್ರದ ಜೊತೆ ಕಾಣಿಸುತ್ತದೆ.
Taj : Reign Of Revenge season 2 (Zee5) – June 2
‘Taj: Divided By Blood’ ಮೊದಲ ಸರಣಿಯಲ್ಲಿದ್ದ ತಾರಾಬಳಗವೇ ಸೀಕ್ವೆಲ್ನಲ್ಲಿ ಇರಲಿದೆ. ನಾಸಿರುದ್ದೀನ್ ಷಾ (ಅಕ್ಬರ್ ಪಾತ್ರದಲ್ಲಿ), ಧರ್ಮೇಂದ್ರ (ಸಲೀಂ ಚಿಸ್ತಿ), ರಾಹುಲ್ ಬೋಸ್ (ಮಿರ್ಝಾ ಹಕೀಂ), ಸಂಧ್ಯಾ ಮೃದುಲ್ (ಜೋಧಾ ಬಾಯಿ), ಝರೀನಾ ವಹಾಬ್ (ಸಲೀಂ ಬೇಗಂ) ಮತ್ತು ಪದ್ಮಾ ದಾಮೋಧರನ್ (ರುಕಿಯಾ ಬೇಗಂ) ಮರಳುತ್ತಿದ್ದಾರೆ. ಸೆಕೆಂಡ್ ಸೀಸನ್ ನಿನ್ನೆ ಜೂನ್ 2ರಿಂದ ಸ್ಟ್ರೀಮ್ ಆಗುತ್ತಿದೆ.
ಜೂನ್ನಲ್ಲಿ ಸ್ಟ್ರೀಮ್ ಆಗಲಿರುವ ಇತರೆ ಸರಣಿಗಳು – Lego Ninjago (Netflix), The Perfect Find (Part 2, Netflix), Never Have I Ever (Season 4, Netflix), Break Pint (Part 2, Netflix), Jack Ryan (Season 4, Netflix), Emily In Paris (Season 4, Netflix), Human Reources (Season 2, Netflix)