ಬಾಲಿವುಡ್‌ನ ಖ್ಯಾತ ನಟ ಡ್ಯಾನಿ ಡೆನ್‌ಜೋಂಗ್‌ಪಾ ಪುತ್ರ ರಿನ್‌ಝಿಂಗ್‌ ನಟನೆಯ ‘ಸ್ಕ್ವಾಡ್‌’ ಆಕ್ಷನ್ ಹಿಂದಿ ಸಿನಿಮಾ ZEE5ನಲ್ಲಿ ನವೆಂಬರ್‌ 12ರಿಂದ ಸ್ಟ್ರೀಮ್ ಆಗಲಿದೆ. ನೀಲೇಶ್ ಸಹಾಯ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು.

‘ಸ್ಕ್ವಾಡ್‌’ ಆಕ್ಷನ್ ಹಿಂದಿ ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆಯಾಗಿದೆ. ಮೂರು ನಿಮಿಷಗಳ ಈ ವೀಡಿಯೋದಲ್ಲಿ ಭರ್ಜರಿ ಆಕ್ಷನ್‌ ಸನ್ನಿವೇಶಗಳಿವೆ. ಹಿರಿಯ ಬಾಲಿವುಡ್ ನಟ ಡ್ಯಾನಿ ಡೆನ್‌ಝೋಂಗ್‌ಪಾ ಪುತ್ರ ರಿನ್‌ಝಿಂಗ್‌ ಈ ಚಿತ್ರದೊಂದಿಗೆ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಾಳವಿಕಾ ರಾಜ್ ನಟಿಸಿದ್ದಾರೆ. ಸೂಪರ್‌ಹಿಟ್‌ ‘ಕಭಿ ಖುಷಿ ಕಭಿ ಘಮ್‌’ ಚಿತ್ರದಲ್ಲಿ ಟೀನೇಜ್ ವಯಸ್ಸಿನ ಕರೀನಾ ಕಪೂರ್‌ ಪಾತ್ರ ನಿರ್ವಹಿಸಿದ್ದಾಕೆ ಈ ಮಾಳವಿಕಾ. ಲೆಥಲ್‌ ಸೈಬರ್ಗ್‌ ಪ್ರೋಗ್ರಾಮ್‌ನ ಬ್ಲ್ಯೂಪ್ರಿಂಟ್‌ ಹೊಂದಿರುವ ಖ್ಯಾತ ವಿಜ್ಞಾನಿಯ ಆರು ವರ್ಷದ ಮೊಮ್ಮಗಳ ರಕ್ಷಣೆಯ ಹೊಣೆ ಎಸ್‌ಟಿಎಫ್ ಕಮ್ಯಾಂಡೋ ಭೀಮ್ ರಾಣಾ ಹೆಗಲಿಗೆ ಬೀಳುತ್ತದೆ. ಪುಟ್ಟ ಬಾಲಕಿಯ ರಕ್ಷಿಸುವ ಎಳೆಯೊಂದಿಗೆ ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕ ನೀಲೇಶ್ ಸಹಾಯ್‌. ನಟಿ ಪೂಜಾ ಬಾತ್ರಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಮೋಹನ್ ಕಪೂರ್, ಅಮಿತ್ ಗೌರ್, ತನಿಷಾ ದಿಲ್ಲಾನ್‌, ದಿಶಿತಾ ಜೈನ್ ಸಿನಿಮಾದ ಇತರೆ ಪ್ರಮುಖ ಕಲಾವಿದರು. ZEE5ನಲ್ಲಿ ನವೆಂಬರ್‌ 12ರಿಂದ ‘ಸ್ಕ್ವಾಡ್‌’ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here