ಈ ವಾರ OTTಯಲ್ಲಿ 20ಕ್ಕೂ ಅಧಿಕ ಸರಣಿ ಮತ್ತು ಸಿನಿಮಾಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ Binge Watchರೀತಿಯಲ್ಲಿ ಭಾಸವಾಗಲಿದೆ. ಜನಪ್ರಿಯ ಕಂಟೆಂಟ್‌ಗಳಿಂದ ಕೂಡಿರುವ ಕಥೆಗಳು ತೆರೆಕಂಡಿವೆ. ಇದು ಒಂದು ಬಗೆಯ ಗೊಂದಲ ಸೃಷ್ಟಿಸಿದೆ. ಯಾವ ಸಿನಿಮಾ ಅಥವಾ ಸರಣಿ ನೋಡುವುದು? ಪ್ರೇಕ್ಷಕರಿಗೆ ಎದುರು ಸಾಕಷ್ಟು ಆಯ್ಕೆಗಳಿವೆ!
ಸಲಾರ್ | ತೆಲುಗು | ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿರುವ ‘ಸಲಾರ್ ಭಾಗ -1’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಚಿತ್ರವು ಇಬ್ಬರು ಬಾಲ್ಯಸ್ನೇಹಿತರ ಸುತ್ತ ಸುತ್ತುತ್ತದೆ. ಚಿತ್ರವು ಖಾನ್ಸಾರ್ ಪ್ರಪಂಚ ಮತ್ತು ಅಲ್ಲಿ ವಾಸಿಸುವ ಜನರ ಜೀವನವನ್ನು ನಿಯಂತ್ರಿಸುವ ಪಾತ್ರಗಳ ಬಗ್ಗೆ ಒಂದು ನೋಟವನ್ನು ನೀಡಿದೆ. ಕೆಲವು ಆಕ್ಷನ್ ದೃಶ್ಯಗಳು ಘೋರ ಹಿಂಸಾಚಾರದ ರೂಪ ತಾಳಿವೆ. ಚಿತ್ರದಲ್ಲಿ ಶ್ರುತಿ ಹಾಸನ್, ಮೀನಾಕ್ಷಿ ಚೌಧರಿ, ಟಿನು ಆನಂದ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಗರುಡ ರಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದ್ದು, ಚಿತ್ರವನ್ನು Hombale Films ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಸಿನಿಮಾ ಜನವರಿ 20ರಿಂದ Netflix ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್ | ತೆಲುಗು | ನಿತಿನ್ ಮತ್ತು ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ವಕ್ಕಂತಂ ವಂಶಿ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಡಾ ರಾಜಶೇಖರ್, ಸುದೇವ್ ನಾಯರ್, ರಾವ್ ರಮೇಶ್,ರೋಹಿಣಿ, ಬ್ರಹ್ಮಾಜಿ, ಅಜಯ್, ಹರ್ಷ ವರ್ಧನ್, ಅನ್ನಪೂರ್ಣಮ್ಮ, ಪವಿತ್ರ ನರೇಶ್, ರವಿವರ್ಮ, ಹೈಪರ್ ಆದಿ, ವೆಂಕಟೇಶ್ ಮುಮ್ಮಿಡಿ, ಜಗದೀಶ್, ಸೋನಿಯಾ ಸಿಂಗ್, ಸತ್ಯಶ್ರೀ, ಹರಿ ತೇಜಾ, ಶ್ರೀಕಾಂತ್ ಅಯ್ಯಂಗರ್, ರೂಪಾ ಲಕ್ಷ್ಮಿ, ಪೃಧ್ವಿ, ಶಿವ ರಾಮಚಂದ್ರವರಪು ನಟಿಸಿದ್ದಾರೆ. ಈ ಚಿತ್ರವನ್ನು Sreshth Movies ಬ್ಯಾನರ್ ಅಡಿಯಲ್ಲಿ ಸುಧಾಕರ್ ರೆಡ್ಡಿ ಮತ್ತು ನಿಕಿತಾ ರೆಡ್ಡಿ ನಿರ್ಮಿಸಿದ್ದಾರೆ. ಚಲನಚಿತ್ರಕ್ಕೆ ಪ್ರವೀಣ್ ಪುಡಿ ಸಂಕಲನ, ಹ್ಯಾರಿಸ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಜನವರಿ 19ರಿಂದ Hotstar ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಓಡವುಂ ಮುಡಿಯಾದು ಒಲಿಯವುಂ ಮುಡಿಯಾದು | ತಮಿಳು | ಈ ಚಲನಚಿತ್ರವು ಹಾರರ್-ಕಾಮಿಡಿ ಥ್ರಿಲ್ಲರ್ ಕಥಾ ಹಂದರವಾಗಿದ್ದು, ರಮೇಶ್ ವೆಂಕಟ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸತ್ಯಮೂರ್ತಿ ವಿ ಮತ್ತು ಯಶಿಕಾ ಆನಂದ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವನ್ನು Akshaya Pictures ಬ್ಯಾನರ್ ಅಡಿಯಲ್ಲಿ ರಾಜನ್ ನಿರ್ಮಿಸಿದ್ದು, ಸಂಪೂರ್ಣ ಹಾಸ್ಯದಿಂದಲೇ ಕೂಡಿರುವ ಈ ಸಿನಿಮಾ ಸ್ನೇಹಿತರ ತರಲೆ, ತುಂಟಾಟಗಳಿಂದ ಕೂಡಿದೆ. ಸಿನಿಮಾ ಜನವರಿ 19ರಿಂದ Ahaದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರದಲ್ಲಿ ಸತ್ಯಮೂರ್ತಿ ವಿ ಎರುಮಾಸಾನಿ ವಿಜಯ್, ಹರಿಜಾ , ಪರಿಧಬಂಗಲ್, ಗೋಪಿಸುಧಾಕರ್, ಜಾರ್ಜ್ ಮರಿಯನ್, ಶಾರಾ, ಯಾಶಿಕಾ ಆನಂದ್, ಮುನಿಷ್ಕಾಂತ್, ರಿತ್ವಿಕಾ, ಮಧುಮಿತಾ, ಅಬ್ದುಲ್, ವಿಜೆ ಆಶಿಕ್, ಅಗಸ್ಟಿನ್, ನಂದ ಗೋಪಾಲ ಕೃಷ್ಣನ್, ಜೈಸೀಲನ್, ಅಜಿತ್ ಕುಮಾರೇಶ್ ಮತ್ತು ಅಜಿತ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಫಿಲಿಪ್ಸ್ | ಮಲಯಾಳಂ | ಈ ಕೌಟುಂಬಿಕ ಸಿನಿಮಾದಲ್ಲಿ ತಂದೆ-ಮಗಳ ಬಾಂಧವ್ಯವನ್ನು ತೋರಿಸಲಾಗಿದೆ. ತಾಯಿಯಲ್ಲದೇ ಬೆಳೆಯುವ ಮಗು ತನ್ನ ಸಂಪೂರ್ಣ ಗಮನವನ್ನು ಚೆಸ್ ಆಟದಲ್ಲಿ ಕೇಂದ್ರೀಕರಿಸುತ್ತಿರುತ್ತಾಳೆ. ಚೆಸ್ ಅಲ್ಲದೇ ಅವಳ ಗಮನವನ್ನು ಬೇರೆ ಕಡೆಗೂ ಸೆಳೆಯಲು ಅವಳ ತಂದೆ ಪ್ರಯತ್ನಿಸುತ್ತಿರುತ್ತಾನೆ. ಈ ಚಿತ್ರವನ್ನು ಆಲ್ಫ್ರೆಡ್ ಕುರಿಯನ್ ಜೋಸೆಫ್ ನಿರ್ದೇಶಿಸಿದ್ದಾರೆ. ಮಾತುಕುಟ್ಟಿ ಕ್ಸೇವಿಯರ್ ಚಿತ್ರಕಥೆ ಬರೆದಿದ್ದಾರೆ. Little Big Films ಬ್ಯಾನರ್ ಸುವಿನ್ ಕೆ ವರ್ಕಿ ಮತ್ತು ಪ್ರಶೋಭ್ ಕೃಷ್ಣ ನಿರ್ಮಿಸಿದ್ದಾರೆ. ಈ ಚಲನಚಿತ್ರ ಜನವರಿ.19ರಿಂದ Amazon Primeನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ಇಂಡಿಯನ್ ಪೊಲೀಸ್ ಫೋರ್ಸ್ | ಹಿಂದಿ | ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್ ಓಬೆರಾಯ್ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಮುಖ್ಯ ಭೂಮಿಕೆಯಲ್ಲಿರುವ ‘ಇಂಡಿಯನ್ ಪೋಲೀಸ್ ಫೋರ್ಸ್ ಸೀಸನ್ 1’ ಸರಣಿಯನ್ನು ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಸರಣಿಯಲ್ಲಿ ಸಿದ್ಧಾರ್ಥ್ ಮೇಲಾಧಿಕಾರಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದೇಶದ ಅಮಾಯಕ ಜನರಿಗೆ ತೊಂದರೆ ಕೊಡುತ್ತಿರುವ ಅಪರಾಧಿಗಳನ್ನು ಬಂಧಿಸುವುದೇ ದೊಡ್ಡ ಸವಾಲಾಗಿ ಮಾರ್ಪಡುತ್ತದೆ. ಎಲ್ಲೆಂದರಲ್ಲಿ ದಾಳಿ, ಬಾಂಬ್ ಅಟ್ಯಾಕ್‌ಗಳು ನಡೆಯುತ್ತಿರುತ್ತವೆ. ಇದರಿಂದ ಅಮಾಯಕರು ಸಾವನ್ನಪ್ಪುತ್ತಿರುತ್ತಾರೆ. ಅಪರಾಧಿಗಳನ್ನು ಸೆರೆಹಿಡಿಯುವಲ್ಲಿ ಪೊಲೀಸ್ ಪಡೆ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬುದೇ ಸರಣಿಯ ಕಥಾವಸ್ತು. ಏಳು ಕಂತುಗಳ ಈ ಆಕ್ಷನ್ ಥ್ರಿಲ್ಲರ್ ಸರಣಿಯು ಭಾರತೀಯ ಪೊಲೀಸ್ ಅಧಿಕಾರಿಗಳ ಬದ್ಧತೆಗೆ ಗೌರವ ಸಲ್ಲಿಸುವ ಒಂದು ಪ್ರಕಾರವಾಗಿದೆ. ದೇಶದ ಪ್ರಜೆಗಳನ್ನು ಸುರಕ್ಷಿತವಾಗಿಡಲು ತಮ್ಮ ಕರ್ತವ್ಯದಲ್ಲಿ ಎಲ್ಲವನ್ನೂ ಸಮತೋಲನದಲ್ಲಿರಿಸುವ ಭಾರತೀಯ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ದೇಶಭಕ್ತಿಗೆ ಈ ಸರಣಿಯು ಹೆಮ್ಮೆಯಿಂದ ಗೌರವ ಸಲ್ಲಿಸುತ್ತದೆ ಎಂದು ತಯಾರಕರು ತಿಳಿಸಿದ್ದಾರೆ. ಸರಣಿಯಲ್ಲಿ ಶ್ವೇತಾ ತಿವಾರಿ, ನಿಕಿತಿನ್ ಧೀರ್, ರಿತುರಾಜ್ ಸಿಂಗ್, ಮುಖೇಶ್ ರಿಷಿ, ರೋಹಿತ್ ಶೆಟ್ಟಿ, ಲಲಿತ್ ಪರಿಮೂ ಕೂಡ ಭಾರತೀಯ ಪೊಲೀಸ್ ಪಡೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿ, ಸುಶ್ವಂತ್ ಪ್ರಕಾಶ್, ಸಂದೀಪ್ ಸಾಕೇತ್, ಅನುಷಾ ನಂದಕುಮಾರ್, ಆಯುಷ್ ತ್ರಿವೇದಿ, ವಿಧಿ ಘೋಡಗಾಂವ್ಕರ್, ಸಂಚಿತ್ ಬೇಂದ್ರೆ ಸರಣಿಯನ್ನು ಸಹ ರಚಿಸಿದ್ದಾರೆ. ಈ ಸರಣಿಯು ಜನವರಿ 19ರಿಂದ Amazon Primeನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Hazbin Hotel | ಇಂಗ್ಲಿಷ್ | ವಿವಿಯೆನ್ನೆ ಮೆಡ್ರಾನೊ ನಿರ್ದೇಶಿಸಿರುವ ಈ ಅನಿಮೇಟೆಡ್ ಸಂಗೀತ ಹಾಸ್ಯ ಸರಣಿಯು ನರಕದ ರಾಜಕುಮಾರಿ ಚಾರ್ಲಿ ಮಾರ್ನಿಂಗ್ ಸ್ಟಾರ್ ಸುತ್ತ ಸುತ್ತುತ್ತದೆ. ಅವಳು ‘ಹ್ಯಾಪಿ ಹೋಟೆಲ್’ ಹೆಸರಿನ ಹೊಟೇಲ್ ಒಂದನ್ನು ಪ್ರಾರಂಭಿಸಿ, ಅಸಾಧ್ಯವಾದ ಕನಸನ್ನು ನನಸಾಗಿಸಲು ಹೊರಡುತ್ತಾಳೆ. ಈ ಹೋಟೆಲ್ ಪಾಪಿಗಳಿಗೆ ಪುನರ್ವಸತಿ ಕಲ್ಪಿಸುವ ಗುರಿಯನ್ನು ಹೊಂದಿರುತ್ತದೆ. ಸರಣಿ ಜನವರಿ 19ರಿಂದ Amazon Primeದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸರಣಿಯಲ್ಲಿ ಎರಿಕಾ ಹೆನ್ನಿಂಗ್‌ಸೆನ್, ಸ್ಟೆಫನಿ ಬೀಟ್ರಿಜ್, ಅಲೆಕ್ಸ್ ಬ್ರೈಟ್‌ಮ್ಯಾನ್, ಕೀತ್ ಡೇವಿಡ್, ಕಿಮಿಕೊ ಗ್ಲೆನ್, ಬ್ಲೇಕ್ ರೋಮನ್, ಅಮೀರ್ ತಲೈ, ಕ್ರಿಶ್ಚಿಯನ್ ಬೋರ್ಲೆ ಮತ್ತು ಜೋಯಲ್ ಪೆರೆಜ್. ಅತಿಥಿ ಪಾತ್ರದಲ್ಲಿ ಬ್ರಾಡ್‌ವೇ ಅನುಭವಿಗಳಾದ ಡ್ಯಾರೆನ್ ಕ್ರಿಸ್, ಜೆರೆಮಿ ಜೋರ್ಡಾನ್, ಡ್ಯಾಫ್ನೆ ರೂಬಿನ್-ವೇಗಾ, ಪಾಟಿನಾ ಮಿಲ್ಲರ್ ಮತ್ತು ಜೆಸ್ಸಿಕಾ ವೋಸ್ಕ್ ನಟಿಸಿದ್ದಾರೆ. ಎಮ್ಮಿನಾಮನಿರ್ದೇಶಿತ ಆಂಡ್ರ್ಯೂ ಅಂಡರ್ಬರ್ಗ್ ಸಂಗೀತ ಸಂಯೋಜಿಸಿದ್ದಾರೆ.
Brawn: The Impossible Formula 1 Story | English | ನಾಲ್ಕು ಕಂತುಗಳ ಈ ಸರಣಿಯು ಬ್ರೌನ್ (Brawn) ತಂಡದ ಇತಿಹಾಸವನ್ನು ಹೇಳಲಿದೆ. 2008ರಲ್ಲಿ ಮಾಜಿ ಹೋಂಡಾ ತಂಡವನ್ನು ರಕ್ಷಿಸುವಲ್ಲಿ ರಾಸ್ ಬ್ರಾನ್‌ನ ಪ್ರಮುಖ ಪಾತ್ರವನ್ನು ವಹಿಸಿದ್ದರ ಬಗ್ಗೆ ಹೇಳಲಿದೆ. ಬ್ರೌನ್ ತಂಡವು ಹೋಂಡಾವನ್ನು ಕೇವಲ £1 (ಸಣ್ಣ ಪ್ರಮಾಣದ ಮೊತ್ತ)ಕ್ಕೆ ಸ್ವಾಧೀನಪಡಿಸಿಕೊಂಡಿತು. 2008ರಲ್ಲಿ ನಡೆದ ಹೋಂಡಾದ ರೇಸಿಂಗ್ ತಂಡದ ಕುರಿತಾಗಿಯೂ ಈ ಸರಣಿ ಹೇಳಲಿದೆ. ಸರಣಿಯನ್ನು ಕೀನು ರೀವ್ಸ್ ನಿರ್ದೇಶಿಸಿ ನಟಿಸಿದ್ದಾರೆ. ರಾಸ್ ಬ್ರಾನ್ ಮತ್ತು ಜೆನ್ಸನ್ ಬಟನ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿಯು ಜನವರಿ 19ರಿಂದ Netflixನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
Coleen Rooney: The Real Wagatha Story | ಇಂಗ್ಲಿಷ್| ಸರಣಿಯಲ್ಲಿ X (Twitter) ನ ಹಗರಣವೊಂದರಲ್ಲಿ ಸಿಲುಕಿಕೊಳ್ಳುವ ಮಹಿಳೆಯೊಬ್ಬಳು ಹೇಗೆ ತೊಂದರೆಗೆ ಸಿಲುಕಿ ಹೋರಾಡುತ್ತಾಳೆ ಎಂಬುದನ್ನು ತೋರಿಸಲಾಗಿದೆ. ಈ ಸರಣಿಯನ್ನು ಲೂಸಿ ಬೌಡೆನ್ ನಿರ್ದೇಶಿಸಿದ್ದಾರೆ. ಸರಣಿಯಲ್ಲಿ ವೇಯ್ನ್ ರೂನೇ, ಕೋಲೀನ್ ರೂನೇ, ಲೂಸಿ ಬೌಡೆನ್ ಮತ್ತು ಗ್ರಹಾಂ ಸ್ಮಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿಯು ಜನವರಿ 19ರಿಂದ Amazon Prime ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Cristóbal Balenciaga | ಇಂಗ್ಲಿಷ್ | ಕೇವಲ ಹನ್ನೆರಡನೇ ವಯಸ್ಸಿನಲ್ಲಿ ಫ್ಯಾಶನ್ ರೆಸಾರ್ಟ್‌ನ ಸ್ಯಾನ್ ಸೆಬಾಸ್ಟಿಯನ್‌ನ ಹತ್ತಿರ ಟೈಲರ್ ವೃತ್ತಿಯನ್ನು ಕಲಿಯಲು ಪ್ರಾರಂಭಿಸಿ, ನಂತರ ಟೈಲರ್ ತರಬೇತಿ ಕೇಂದ್ರವನ್ನು ಶುರುಮಾಡಿ 1917 ರಲ್ಲಿ ತಮ್ಮ ಮೊದಲ ಫ್ಯಾಶನ್ ಹೌಸ್ ಅನ್ನು ಸ್ಥಾಪಿಸಿದ ಸಾಧಕರೊಬ್ಬರ ಕಥೆಯನ್ನು ಈ ಸರಣಿ ಹೇಳಲಿದೆ. ಈ ಫ್ಯಾಶನ್ ಹೌಸ್ ಗೆ ಐಸಾ ಎಂದು ತಮ್ಮ ತಾಯಿಯ ಹೆಸರಿಟ್ಟು, 1937 ರಲ್ಲಿ ಪ್ಯಾರಿಸ್ ಗೆ ತೆರಳುವ ಸಂದರ್ಭದಲ್ಲಿ ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್ ನಲ್ಲಿ 2 ಪಟ್ಟಣಗಳಲ್ಲಿ ಫ್ಯಾಶನ್ ಸಂಸ್ಥೆಗಳನ್ನು ತೆರೆದು ಜನಪ್ರಿಯತೆ ಗಳಿಸಿದ ಕಥಾಹಂದರ ಈ ಸರಣಿ. ಸರಣಿಯಲ್ಲಿ ಆಡಮ್ ಕ್ವಿಂಟೆರೊ, ಸಿಸಿಲಿಯಾ ಸೊಲಾಗುರೆನ್, ಆಲ್ಬರ್ಟೊ ಸ್ಯಾನ್ ಜುವಾನ್ ಮತ್ತು ಜೋಕ್ಸಿಯಾನ್ ಬೆಂಗೊಯೆಟ್ಸಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ಇಂದಿನಿಂದ ಜನವರಿ 19ರಿಂದ Hotstarನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Snakes SOS: Goa’s Wildest Season 2 | ಇಂಗ್ಲಿಷ್ | ವನ್ಯಜೀವಿಗಳ ಕುರಿತಾಗಿ ಆಸಕ್ತಿ ಹೊಂದಿರುವ ಬೆನ್‌ಹೇಲ್ ಆಂಟಾವೊ ಮತ್ತು ಲೂಯಿಸ್ ರೆಮಿಡಿಯೊಸ್ ದಂಪತಿಗಳ ಸುತ್ತ ಈ ಸರಣಿ ಸುತ್ತುತ್ತದೆ. ಅವರು ವಿವಾಹ ನಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹಾವುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅವರು ಹೆಬ್ಬಾವೊಂದನ್ನು ಬಾವಿಯಿಂದ ರಕ್ಷಿಸಲು ಸುಮಾರು ಐದು ಭಾರಿ ಪ್ರಯತ್ನ ಪಡುತ್ತಾರೆ. ಈ ಕುರಿತಾದ ಕಥೆಯನ್ನು ಈ ಸರಣಿ ಹೇಳಲಿದೆ. 14 ಸಂಚಿಕೆಗಳ ಈ ಸರಣಿಯನ್ನು ಡೋಯಲ್ ತ್ರಿವೇದಿ ಬರೆದು, ನಿರ್ದೇಶಿಸಿದ್ದು, ಬಂಡ ರಾಜು ಸಂಗೀತ ಸಂಯೋಜಿಸಿದ್ದಾರೆ. Riverbank Studios ಬ್ಯಾನರ್ ಅಡಿಯಲ್ಲಿ ದರ್ಶನ್ ಶಾ ನಿರ್ಮಿಸಿದ್ದಾರೆ. ಈ ಸರಣಿಯು ಇಂದಿನಿಂದ ಜನವರಿ 19ರಿಂದ Hotstar ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
LOL: Last One Laughing Ireland | ಇಂಗ್ಲಿಷ್ | ಐರ್ಲೆಂಡ್‌ನ ಹತ್ತು ಬಹು ಬೇಡಿಕೆಯ ಹಾಸ್ಯ ತಾರೆಗಳನ್ನು ಪರಸ್ಪರ ನಗಿಸಲು ಒಟ್ಟಿಗೆ ಸೇರಿಸಲಾಗುತ್ತದೆ. ಅವರು ಅನೇಕ ವಸ್ತುಗಳನ್ನು ಬಳಸಿಕೊಂಡು ಹೇಗೆ ಪ್ರೇಕ್ಷಕರನ್ನು ನಗಿಸುತ್ತಾರೆ ಎಂಬುದನ್ನು ಈ ಸರಣಿ ಒಳಗೊಂಡಿದೆ. ಈ ಸರಣಿಯಲ್ಲಿ ಐಸ್ಲಿಂಗ್ ಬೀ, ಆಮಿ ಹ್ಯೂಬರ್‌ಮನ್, ಕ್ಯಾಥರೀನ್ ಬೋಹಾರ್ಟ್, ಡೇವಿಡ್ ಮೆಕ್‌ಸಾವೇಜ್, ಡೀರ್ಡ್ರೆ ಓʼಕೇನ್, ಎಮ್ಮಾ ಡೋರನ್, ಜೇಸನ್ ಬೈರ್ನೆ, ಮಾರ್ಟಿನ್ ಅಂಗೋಲೊ, ಪಾಲ್ ಟೈಲಾಕ್ ಮತ್ತು ಟೋನಿ ಕ್ಯಾಂಟ್‌ವೆಲ್ ಅಭಿನಯಿಸಿದ್ದಾರೆ. ಈ ಸರಣಿಯು Amazon Prime ನಲ್ಲಿ ಜನವರಿ 19ರಿಂದ Hotstarನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Love on the Spectrum U.S. | ಇಂಗ್ಲಿಷ್ | Emmy ಪ್ರಶಸ್ತಿ ವಿಜೇತ Docu Series ಸ್ಪೆಕ್ಟ್ರಮ್ ಮೇಲಿನ ಪ್ರೀತಿಯಿಂದ ನ್ಯೂರೋಟಿಪಿಕಲ್ ಜಗತ್ತಿನಲ್ಲಿ ಈ ಜನರು ಪ್ರೀತಿ, ಪ್ರೇಮದಂತಹ ಹಗರಣಗಳು, ಡೇಟಿಂಗ್ ಮತ್ತು ದೈಹಿಕ ಸಂಬಂಧಗಳಿಂದ ಎದುರಿಸುತ್ತಿರುವ ತೊಂದರೆಗಳು ಹಾಗೂ ಜನಸಂಖ್ಯೆಯ ಹೆಚ್ಚಳದ ಕುರಿತಾಗಿಯೂ ಈ ಸರಣಿ ಹೇಳಲಿದೆ. ಈ ಸರಣಿಯನ್ನು Cian OʼClery ನಿರ್ದೇಶಿಸಿದ್ದಾರೆ. ಡ್ಯಾನಿ ಬೊಮನ್, ಸುಬೋಧ್‌ಗಾರ್ಗ್, ಕೆಲ್ಲಿ ಜೋನ್ಸ್, ಡಾನಿ, ಅಬ್ಬೆ, ಜೇಮ್ಸ್, ಕೇಲಿನ್, ಸುಬೋಧ್, ಮತ್ತು ಸ್ಟೀವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ಜನವರಿ 19ರಿಂದ Netflix ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Full Circle | English Cinema | ಈ ಚಲನಚಿತ್ರವು ಅಮೇರಿಕನ್ ಬರಹಗಾರ ಪೀಟರ್ ಸ್ಟ್ರಾಬ್ ಅವರ ‘ಜೂಲಿಯಾ’ ಕಾದಂಬರಿಯನ್ನು ಆಧರಿಸಿದೆ. ಈ ಸಿನಿಮಾ ಅವರ ಪುಸ್ತಕಗಳನ್ನು ಆಧರಿಸಿ ತಯಾರಾದ ಮೊದಲ ಚಿತ್ರ ಎನ್ನುವುದು ವಿಶೇಷ. ಸಿನಿಮಾವು ಒಬ್ಬ ಮಹಿಳೆ ಸುತ್ತ ಸುತ್ತುತ್ತದೆ. ಆಕೆಯ ಮಗಳ ಮರಣದ ನಂತರ ಒಬ್ಬ ಚಿಕ್ಕ ಹುಡುಗಿಯ ಪ್ರೇತ ಪ್ರತೀಕಾರ ತೀರಿಸಕೊಳ್ಳುವ ಕಥಾಹಂದರ. ಸಿನಿಮಾದಲ್ಲಿ ಕ್ಲೇರ್ ಡೇನ್ಸ್, ಝಾಜಿ ಬೀಟ್ಜ್, ತಿಮೋತಿ ಒಲಿಫಾಂಟ್, ಡೆನ್ನಿಸ್ ಕ್ವೈಡ್, ಜರೆಲ್ ಜೆರೋಮ್, CCH ಪೌಂಡರ್ ಸುಝೇನ್ ಸವೊಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ ಜುಲೈ, 13. 2023 (USA)ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಸಿನಿಮಾವನ್ನು ಸ್ಟೀವನ್ ಸೋಡರ್‌ಬರ್ಗ್ ನಿರ್ದೇಶಿಸಿದ್ದು, ಝಾಕ್ ರಯಾನ್ ಅಣಗೀತ ಸಂಯೋಜಿಸಿದ್ದಾರೆ. ಸಿನಿಮಾ Prime Video ದಲ್ಲಿ ಇಂದಿನಿಂದ (ಜನವರಿ.19) ಸ್ಟ್ರೀಮಿಂಗ್ ಆರಂಭಿಸಿದೆ.
Mi Soledad Tien Alas | Spainish Cinema | ಈ ಸ್ಪಾನಿಷ್ ಚಲನಚಿತ್ರವು ಡಾನ್ ಎಂಬ ಪ್ರತಿಭಾವಂತ ಸ್ಥಳೀಯ (Street) ಕಲಾವಿದನೊಬ್ಬ ಸ್ಮ್ಯಾಶ್ ಮತ್ತು ಗ್ರಬ್ ಪ್ರಕಾರಗಳ ಹಾಸ್ಯಗಳ ಮೂಲಕ ಗುರುತಿಸಿಕೊಳ್ಳುತ್ತಾನೆ. ಅವನ ತಂದೆಯು ಸೆರೆಮನೆಯಲ್ಲಿ ಬಂದಿತನಾಗಿರುತ್ತಾನೆ. ಅವನ ತಂದೆ ಜೈಲಿನಿಂದ ಮರಳಿದಾಗ ಅವನಲ್ಲಿರುವ ರಾಕ್ಷಸತ್ವ ಮರಳುತ್ತದೆ. ನಂತರ ಅವನು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಚಿತ್ರವನ್ನು ಮಾರಿಯೋ ಕಾಸಾಸ್ ನಿರ್ದೇಶಿಸಿದ್ದು, Nostromo Pictures ಬ್ಯಾನರ್ ಅಡಿ ನಿರ್ಮಾಣವಾಗಿದೆ. ಸಿನಿಮಾದಲ್ಲಿ ಆಸ್ಕರ್ ಕಾಸಾಸ್, ಕ್ಯಾಂಡೆಲಾ ಗೊನ್ಜಾಲೆಜ್, ಫ್ರಾನ್ಸಿಸ್ಕೊಬೊಯಿರಾ, ಫರಿದ್ ಬೆಚರ, ಮಾರ್ಟಾ ಬಾಯಾರಿ ಮತ್ತು ನುರಿಸ್ ಬ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ Amazon Prime ನಲ್ಲಿ ಇಂದಿನಿಂದ ಸ್ಟ್ರೀಮಿಂಗ್ ಆರಂಭಿಸಿದೆ.
Sixty Minutes | German Cinema | ತನ್ನ ಮಗಳ ಹುಟ್ಟು ಹಬ್ಬದ ದಿನದಂದು ಮಗಳನ್ನು ನೋಡಲು ಹಾತೋರೆಯುವ ತಂದೆಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ತನ್ನ ಮಗಳನ್ನು ನೋಡಲು ಕೇವಲ ಒಂದು ಗಂಟೆ (60 ನಿಮಿಷ) ಮಾತ್ರ ಸಮಯವಿದ್ದಾಗ ಪೊಲೀಸರು ಮತ್ತು ಸೆಕ್ಯುರಿಟಿಗಳಿಂದ ಹೇಗೆ ತಪ್ಪಿಸಿಕೊಂಡು ಬಂದು ಅವನ ಮಗಳು ಇರುವ ಸ್ಥಳವನ್ನು ತಲುಪುತ್ತಾನೆ ಎಂಬುದನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ಎಮಿಲಿಯೊ ಸಕ್ರಯಾ, ಆಕ್ಟೇವಿಯೋ ಬರ್ಗ್‌ಮನ್, ಡೆನ್ನಿಸ್ ಮೊಜೆನ್, ಪಾಲ್ ಲೆಹ್ಮನ್, ಮೇರಿ ಮೌರಮ್, ಕೋಸಿಮಾ, ಫ್ಲೋರಿಯನ್ ಸ್ಕಿಮಿಡ್ಕೆ, ವಿಂಕ್ಲರ್, ಪಾಲ್ ವೊಲಿನ್, ಅರಿಸ್ಟೊ ಲೂಯಿಸ್, ಅಲೈನ್ ಬ್ಲೇಜೆವಿಕ್ ಮತ್ತು ಮೊರಿಕ್ ಹೇಡೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಜನವರಿ 19ರಿಂದ Netflixನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
The Greatest Night in Pop’ | English Cinema | 46 ದೊಡ್ಡ ಪಾಪ್ ಸಂಗೀತ ತಾರೆಗಳು ಆಫ್ರಿಕಾದಲ್ಲಿ ಕ್ಷಾಮವನ್ನು ನಿವಾರಿಸಲು ಕೇವಲ ಒಂದು ರಾತ್ರಿಯ ಕಾಲಾವಕಾಶವನ್ನು ಹೊಂದಿದ್ದರು. ಆ ತಾರೆಯರು ಆಫ್ರಿಕಾದಲ್ಲಿ ಕ್ಷಾಮ ಪರಿಹಾರಕ್ಕಾಗಿ ಲಕ್ಷಾಂತರ ಹಣವನ್ನು ಸಂಗ್ರಹಿಸಲು 2 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲಬೇಕು ಎಂದು ಪಣ ತೊಟ್ಟು ಜಾಗತಿಕವಾಗಿ ಎಲ್ಲರ ಮನಮುಟ್ಟಲು ಅದ್ಭುತ ಹಾಡನ್ನು ಬರೆದು, ರೆಕಾರ್ಡ್ ಮಾಡಲು ಒಂದು ರಾತ್ರಿಯಲ್ಲಿಯೇ ರೆಕಾರ್ಡ್ ಮಾಡಿದ ಸಾಹಸದ ಕಥಾಹಂದರ. ಈ ಚಿತ್ರವನ್ನು ಬಾವೊ ನ್ಗುಯೆನ್ ನಿರ್ದೇಶಿಸಿದ್ದು, ಲಿಯೋನೆಲ್ ರಿಚಿ, ಬ್ರೂಸ್ ಸ್ಪ್ರಿಂಗ್‌ಸ್ಟೀನ್, ಸ್ಮೋಕಿ ರಾಬಿನ್ಸನ್, ಸಿಂಡಿ ಲಾಪರ್, ಕೆನ್ನಿ ಲಾಗಿನ್ಸ್, ಡಿಯೋನೆ ವಾರ್ವಿಕ್, ಹ್ಯೂ ಲೆವಿಸ್ ಮತ್ತು ಬಾವೊ ನ್ಗುಯೆನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವು ಜನವರಿ 19ರಿಂದ Netflixನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
The Kitchen | English Cinema | 8ನೇ ಅವೆನ್ಯೂ ಮತ್ತು ಹಡ್ಸನ್ ನದಿಯ ನಡುವೆ, ಐರಿಶ್ ಮಾಫಿಯಾ ಹೆಲ್ಸ್ ಕಿಚನ್ ಎಂದು ಕರೆಯಲ್ಪಡುವ ನ್ಯೂಯಾರ್ಕ್ ನಗರದ ನೆರೆಹೊರೆಯ 20 ರಾಷ್ಟ್ರಗಳ ನಡುವೆ ನಡೆಯುವ ಹೋರಾಟದ ಕಥಾಹಂದರ. ಅಲ್ಲಿನ ಜನಸಮೂಹದ ಕೆಲವರ ಹೆಂಡತಿಯರಾದ ಕ್ಯಾಥಿ, ರೂಬಿ ಮತ್ತು ಕ್ಲೇರ್ ತಮ್ಮ ಗಂಡಂದಿರನ್ನು FBI ಜೈಲಿಗೆ ಕಳುಹಿಸಿದಾಗ ಈ ಮೂವರು ಮಹಿಳೆಯರು ರಾಕೆಟ್‌ಗಳನ್ನು ಹಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು, ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ರೋಚಕ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಈ ಚಿತ್ರವನ್ನು ಆಂಡ್ರಿಯಾ ಬರ್ಲೋಫ್ ನಿರ್ದೇಶಿಸಿದ್ದು, Warner Bros ವಿತರಿಸಿದ್ದಾರೆ. ಬ್ರೈಸ್ ಡೆಸ್ನರ್ ಸಂಗೀತ ಸಂಯೋಜಿಸಿದ್ದಾರೆ. ಕೇನ್ ರಾಬಿನ್ಸನ್ ಮತ್ತು ಜೇಡಯ್ ಬ್ಯಾನರ್‌ಮ್ಯಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ ಜನವರಿ 19ರಿಂದ Amazon Prime ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Captivating the King | Korean Cinema | ರಾಜಕೀಯ ಬಿಕ್ಕಟ್ಟಿನಲ್ಲಿರುವ ಸಿಂಹಾಸನಕ್ಕಾಗಿ ಹೋರಾಡುತ್ತಿರುವ ಕಿಂಗ್ ಯಿ ಇನ್ ಮತ್ತು ಸೇಡು ತೀರಿಸಿಕೊಳ್ಳಲು ಯಿ ಇನ್ ಅನ್ನು ಸಂಪರ್ಕಿಸುವ ರಹಸ್ಯ ಏಜೆಂಟ್ ಕಾಂಗ್ ಹೀ-ಸೂ ಅವರ ಕ್ರೂರ ಪ್ರೇಮಕಥೆಯ ಕಥಾನಕ ಈ ಸಿನಿಮಾ. ಈ ಚಿತ್ರವನ್ನು ಜೋ ನಾಮ್-ಗುಕ್ ನಿರ್ದೇಶಿಸಿದ್ದು, ಶಿನ್ ಸೆ-ಕ್ಯುಂಗ್, ಜೋ ಜಂಗ್-ಸುಕ್ ಮತ್ತು ಲೀ ಶಿನ್ ಯುವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಜನವರಿ 24ರಿಂದ Netflix ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
Law & Order: Special Victims Unit Season 25 | English Series | ಸಮಾರಂಭವೊಂದರಲ್ಲಿ ಎಲ್ಲರೂ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ಹದೆಹರೆಯದ ಯುವತಿಯೊಬ್ಬಳು ಹಗಲಿನಲ್ಲೇ ನಿಗೂಡವಾಗಿ ಕಣ್ಮರೆಯಾಗುತ್ತಾಳೆ. ನಂತರ ಅವಳನ್ನು ಹುಡುಕಲು ಕಾರ್ಯಾಚರಣೆಗಳು ನಡೆಯುತ್ತವೆ ಆ ಸಂದರ್ಭದಲ್ಲಿ ಅನೇಕ ರಹಸ್ಯಗಳು ಬಯಲಾಗುತ್ತಾ ಹೋಗುತ್ತವೆ ಪೊಲೀಸ್ ಕಾರ್ಯವಿಧಾನದ ಕಾನೂನು, ಆಕ್ಷನ್ ಥ್ರಿಲ್ಲರ್ ಸರಣಿಯನ್ನು ಡಿಕ್ ವುಲ್ಫ್ ಅವರು ರಚಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸರಣಿಯಲ್ಲಿ ಕ್ರಿಸ್ಟೋಫರ್ ಮೆಲೋನಿ, ಮರಿಸ್ಕಾ ಹರ್ಗಿಟೇ, ರಿಚರ್ಡ್ ಬೆಲ್ಜರ್,,ಡ್ಯಾನ್ ಫ್ಲೋರೆಕ್, ಮಿಚೆಲ್ ಹರ್ಡ್, ಸ್ಟೆಫನಿ ಮಾರ್ಚ್, ಐಸ್-ಟಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿ Amazon Prime ದಲ್ಲಿ ಜನವರಿ 19ರಿಂದ ಸ್ಟ್ರೀಮಿಂಗ್ ಆರಂಭಿಸಿದೆ.
All Fun And Games | English Film | ಸೆಲಂ ಎಂಬ ಪಟ್ಟಣದಲ್ಲಿ ಹದಿಹರೆಯದ ಗುಂಪೊಂದು ಅಪಾಯಕಾರಿ ಆಯುಧವೊಂದನ್ನು ಕಂಡುಹಿಡಿಯುತ್ತಾರೆ. ಅದನ್ನು ಉಪಯೋಗಿಸುತ್ತಾ ಬೇರೆ ವರ್ಗದ ಯುವಕರಿಗೆ ವಿಚಿತ್ರ ಆಟಗಳನ್ನು ಆಡಲು ಒತ್ತಾಯಿಸಿ ಬೆದರಿಸುತ್ತಾರೆ. ಇದಕ್ಕೆ ಹೆದರಿ ಈ ಆಟಗಳನ್ನು ಆಡಲು ಒಪ್ಪಿಕೊಳ್ಳುವ ಯುವಕರ ಗುಂಪು ಸಂಕಷ್ಟಕ್ಕೆ ಸಿಲುಕುತ್ತಿರುತ್ತಾರೆ. ಏಕೆಂದರೆ ಆಟದ ನಿಯಮದ ಪ್ರಕಾರ ವಿಜೇತರಾಗಲು ಸಹ ಸ್ಪರ್ಧಿಗಳನ್ನು ಸಾಯಲು ಪ್ರೇರೆಪಿಸಬೇಕು. ಈ ಚಿತ್ರವನ್ನು ಎರೆನ್ ಸೆಲೆಬೊಗ್ಲು ಮತ್ತು ಆರಿ ಕೋಸ್ಟಾ ನಿರ್ದೇಶಿಸಿದ್ದಾರೆ. ಏಂಜೆಲಾ ರುಸ್ಸೋ-ಒಟ್ಸ್ಟಾಟ್, ಜೇಕ್ ಆಸ್ಟ್ ಮತ್ತು ಕಸ್ಸೀ ವೈಟಿಂಗ್ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಮಾರ್ಕಸ್ ಫ್ಲೆಚರ್ ಪಾತ್ರದಲ್ಲಿ ಆಸಾ ಬಟರ್‌ಫೀಲ್ಡ್ ಬಿಲ್ಲಿ ಫ್ಲೆಚರ್ ಪಾತ್ರದಲ್ಲಿ, ನಟಾಲಿಯಾ ಡೈಯರ್, ಜೋನಾ ಫ್ಲೆಚರ್ ಆಗಿ, ಬೆಂಜಮಿನ್ ಇವಾನ್ ಐನ್ಸ್‌ವರ್ತ್ ಆಗಿ, ಸೋಫಿ ಫ್ಲೆಚರ್ ಆಗಿ, ಲಾರೆಲ್ ಮಾರ್ಸ್ಡೆನ್ ಕ್ಯಾಥಿ ಫ್ಲೆಚರ್ ಆಗಿ, ಅನ್ನಾಬೆತ್ ಗಿಶ ಜೋನ್ನಾ ಗುಡ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ Amazon Prime ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.