ಮನೆಯಿಂದ ದೂರವಿದ್ದ ಕಣ್ಣನ್ ಮತ್ತು ಉನ್ನಿ ಎಂಬ ಇಬ್ಬರು ಚಿಕ್ಕ ಹುಡುಗರ ನಡುವಿನ ಸ್ನೇಹ ಮತ್ತು ಬಾಂಧವ್ಯದ ಕತೆ ‘ಪಲ್ಲೊಟ್ಟಿ 90ʼs ಕಿಡ್ಸ್’. 90ರ ದಶಕದ ಕಾಲಘಟ್ಟದ ಚಿತ್ರಣ. ಜಿತಿನ್‌ ರಾಜ್‌ ನಿರ್ದೇಶನದ ಸಿನಿಮಾ ಜನವರಿ 5, 2024 ರಂದು ಸಿನಿಮಾ ತೆರೆಕಾಣಲಿದೆ.

ಜಿತಿನ್ ರಾಜ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಪಲ್ಲೊಟ್ಟಿ 90ʼs ಕಿಡ್ಸ್’ (Pallotty 90’s Kids) ಮಲಯಾಳಂ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಲಿಜೋ ಜೋಸ್ ಪೆಲ್ಲಿಸ್ಸೆರಿ ಪ್ರಸ್ತುತಪಡಿಸಿದ ಚಿತ್ರವು ಈ ವರ್ಷದ ಆರಂಭದಲ್ಲಿ ‘ಅತ್ಯುತ್ತಮ ಬಾಲನಟ’, ‘ಅತ್ಯುತ್ತಮ ಮಕ್ಕಳ ಚಲನಚಿತ್ರ’ ಮತ್ತು ‘ಅತ್ಯುತ್ತಮ ಹಿನ್ನೆಲೆ ಗಾಯಕ’ ಸೇರಿದಂತೆ ಮೂರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದು 1990ರ ದಶಕದಲ್ಲಿ ನಡೆದ ಮನೆಯಿಂದ ದೂರವಿದ್ದ ಕಣ್ಣನ್ ಮತ್ತು ಉನ್ನಿ ಎಂಬ ಇಬ್ಬರು ಚಿಕ್ಕ ಹುಡುಗರ ನಡುವಿನ ಸ್ನೇಹ ಮತ್ತು ಬಾಂಧವ್ಯದ ಕಥೆ. ಚಿತ್ರದಲ್ಲಿ ಮಾಸ್ಟರ್ ಡಾವಿನ್ಸಿ ಸಂತೋಷ್ ಮತ್ತು ಮಾಸ್ಟರ್ ನೀರಜ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಮಾಸ್ಟರ್ ಡಾವಿನ್ಸಿ ‘ಅತ್ಯುತ್ತಮ ಬಾಲನಟ’ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಟೀಸರ್‌ನಲ್ಲಿ ಸ್ಥಳೀಯ ಅಂಗಡಿಯೊಂದರಲ್ಲಿ ಗಮ್ ಅನ್ನು ಖರೀದಿಸುವಾಗ ಇಬ್ಬರು ಮಕ್ಕಳು ಸಚಿನ್ ತೆಂಡೂಲ್ಕರ್ ಟ್ರೇಡಿಂಗ್ ಕಾರ್ಡ್ ಪಡೆಯುತ್ತಾರೆ. ಇದರಿಂದ ಅವರಿಗೆ ಆಗುವ ಸಂತೋಷವನ್ನು ತೋರಿಸಲಾಗಿದೆ. ಅರ್ಜುನ್ ಅಶೋಕನ್, ಬಾಲು ವರ್ಗೀಸ್, ಸೈಜು ಕುರುಪ್, ಸುಧಿ ಕೊಪ್ಪ, ದಿನೇಶ್ ಪ್ರಭಾಕರ್, ನಿರಂಜನ ಅನೂಪ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ 40ಕ್ಕೂ ಹೆಚ್ಚು ಹೊಸ ಕಲಾವಿದರು ಕಾರ್ಯ ನಿರ್ವಹಿಸಿದ್ದಾರೆ. ಜನವರಿ 5, 2024 ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here