ಖ್ಯಾತ ಚಿತ್ರನಿರ್ದೇಶಕ ಮಣಿರತ್ನಂ ನಿರ್ಮಾಣದ ‘ಪ್ಯಾರಡೈಸ್’ ಮಲಯಾಳಂ ಸಿನಿಮಾ ಬುಸಾನ್ ಚಿತ್ರೋತ್ಸವದಲ್ಲಿ ‘ಕಿಮ್ ಜಿಸೋಕ್’ ಪ್ರಶಸ್ತಿಗೆ ಭಾಜನವಾಗಿದೆ. ಯುವ ದಂಪತಿಯ ಬದುಕಿನ ಪಲ್ಲಟಗಳ ಸುತ್ತ ಹೆಣೆದ ಕಥಾವಸ್ತು ಇದು. ಇಂಗ್ಲೀಷ್, ಮಲಯಾಳಂ, ತಮಿಳು, ಹಿಂದಿ ಮತ್ತು ಸಿಂಹಳ ಭಾಷೆಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಮಣಿರತ್ನಂ ನಿರ್ಮಾಣದ ‘ಪ್ಯಾರಡೈಸ್’ ಮಲಯಾಳಂ ಚಿತ್ರ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಕಿಮ್ ಜಿಸೋಕ್’ ಪ್ರಶಸ್ತಿ ಗೆದ್ದಿದೆ. ಮಣಿರತ್ನಂ ಅವರ Madras Talkies ಪ್ರಸ್ತುತಪಡಿಸಿದ Newton Cinema ನಿರ್ಮಿಸಿದ ‘ಪ್ಯಾರಡೈಸ್’ ಮಲಯಾಳಂ ಚಿತ್ರವನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲಾಗಿದೆ. ‘ಪ್ಯಾರಡೈಸ್’ ಸಿನಿಮಾವು ಯುವ ಮಲಯಾಳಿ ದಂಪತಿಗಳ ಕಥೆಯಾಗಿದ್ದು, ಅವರಿಬ್ಬರು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ದ್ವೀಪ ರಾಷ್ಟ್ರವೊಂದಕ್ಕೆ ಪ್ರವಾಸಕ್ಕೆ ತೆರಳುತ್ತಾರೆ. ಅನಿರೀಕ್ಷಿತ ಘಟನೆಗಳಿಂದಾಗಿ ಅವರಿಬ್ಬರ ಬದುಕಿನಲ್ಲಿ ಮನಸ್ತಾಪಗಳಾಗಿ ಅವರ ಪರಸ್ಪರ ಸಂಬಂಧ ಪರೀಕ್ಷೆಗೆ ಒಳಪಡುತ್ತದೆ. ಪ್ರೀತಿ, ವಂಚನೆ ಮತ್ತು ಅಪರಾಧದ ಕುರಿತು ಈ
ಚಿತ್ರದಲ್ಲಿದೆ.
‘ಕಿಮ್ ಜಿಸೋಕ್ ಅವರ ಹೆಸರಿನ ಈ ಪ್ರಶಸ್ತಿ ಲಭಿಸಿರುವುದು ಒಂದು ಗೌರವ. ಏಷ್ಯಾದ ಎಲ್ಲಾ ಚಲನಚಿತ್ರ ನಿರ್ಮಾಪಕರಿಗೆ ಕಿಮ್ ಆತ್ಮೀಯ ಸ್ನೇಹಿತರಾಗಿದ್ದರು. ಕಿಮ್, ನಿಮ್ಮನ್ನು ನನ್ನ ಮನೆಗೆ ಕರೆದೊಯ್ಯಲು ನನಗೆ ಗೌರವವಿದೆ. ನನ್ನ ಪ್ರೀತಿಯ ನಿರ್ಮಾಪಕ, ಆಂಟೊ ಚಿಟ್ಟಿಲಪಿಲ್ಲಿ ಮತ್ತು ನ್ಯೂಟನ್ ಸಿನಿಮಾ, ನಮ್ಮ ನಿರೂಪಕರಾದ ಮಣಿರತ್ನಂ, ಮದ್ರಾಸ್ ಟಾಕೀಸ್ ಮತ್ತು ಚಿತ್ರದ ಕಲಾವಿದರು ಮತ್ತು ತಂತ್ರಜ್ಞರೆಲ್ಲರಿಗೂ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಈ ಪ್ರಶಸ್ತಿ ನಿಮಗೆ ಸೇರಿದ್ದು’ ಎಂದಿದ್ದಾರೆ ನಿರ್ದೇಸಕ ಪ್ರಸನ್ನ ವಿಥನಗೆ. ನಿರ್ಮಾಪಕ ಮಣಿರತ್ನಂ ಅವರು ‘ಪ್ಯಾರಡೈಸ್’ ಅನ್ನು ‘ದೂರದೃಷ್ಟಿಯ ಚಿತ್ರ’ ಎಂದು ಕರೆದಿದ್ದಾರೆ. ಶ್ರೀಲಂಕಾ ಮೂಲದ ಪ್ರಸನ್ನ ವಿಥನಗೆ ನಿರ್ದೇಶನದ ಈ ಚಿತ್ರಕ್ಕೆ ರಾಜೀವ್ ರವಿ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ, ತಪಸ್ ನಾಯಕ್ ಧ್ವನಿ ವಿನ್ಯಾಸ ಮತ್ತು ಸಂಗೀತ ನಿರ್ದೇಶವವಿದೆ. ಚಿತ್ರದಲ್ಲಿ ಶ್ಯಾಮ್ ಫೆರ್ನಾಂಡೋ ಮತ್ತು ಮಹೇಂದ್ರ ಪೆರೇರಾ ಪೋಷಕ ಪಾತ್ರಗಳಲ್ಲಿದ್ದಾರೆ. ಇಂಗ್ಲೀಷ್, ಮಲಯಾಳಂ, ತಮಿಳು, ಹಿಂದಿ ಮತ್ತು ಸಿಂಹಳ ಭಾಷೆಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.