ನಟಿ ರಾಗಿಣಿ ದ್ವಿವೇದಿ ಮತ್ತೊಂದು ನಾಯಕಿಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾಗೆ ‘ಶೀಲ’ ಎಂದು ನಾಮಕರಣವಾಗಿದೆ. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿರುವ ಚಿತ್ರದ ನಿರ್ದೇಶಕರು ಬಾಲು ನಾರಾಯಣನ್‌.

ನಟಿ ರಾಗಿಣಿ ದ್ವಿವೇದಿ ಅಭಿನಯದ ನೂತನ ಕನ್ನಡ – ಮಲಯಾಳಂ ದ್ವಿಭಾಷಾ ಸಿನಿಮಾಗೆ ‘ಶೀಲ’ ಎಂದು ನಾಮಕರಣವಾಗಿದೆ. ಬಾಲು ನಾರಾಯಣನ್‌ ನಿರ್ದೇಶನದ ಇದು ಸಸ್ಪೆನ್ಸ್‌ – ಥ್ರಿಲ್ಲರ್‌ ಜಾನರ್‌ ಸಿನಿಮಾ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಕೆಲವು ಸ್ಟಿಲ್‌ಗಳು ಬಿಡುಗಡೆಯಾಗಿವೆ. ‘ಇದು ಸಸ್ಪೆನ್ಸ್ – ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಹಿಳಾ ಪ್ರಧಾನ ಚಿತ್ರ. ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಹೆಣ್ಣೊಬ್ಬಳು ಹೇಗೆ ನಿಭಾಯಿಸುತ್ತಾಳೆ ಎಂಬುದು ಕಥಾಸಾರಾಂಶ‌. ಈ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದ್ದು, ಸದ್ಯದಲ್ಲೇ ಟ್ರೈಲರ್‌ ಬರಲಿದೆ’ ಎಂದಿದ್ದಾರೆ ನಟಿ ರಾಗಿಣಿ ದ್ವಿವೇದಿ. ಡಿ ಎಂ ಪಿಳ್ಳೆ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಅಭಿನಯಿಸಿದ್ದಾರೆ.

Previous articleನಟ ವಿಜಯ್‌ ಬರ್ತ್‌ಡೇ | ‘ಲಿಯೋ’ ಸಿನಿಮಾ ಫಸ್ಟ್‌ ಲುಕ್‌ ಬಿಡುಗಡೆ
Next articleOTTಗೆ ನರೇಶ್‌ – ಪವಿತ್ರಾ ‘ಮತ್ತೆ ಮದುವೆ’ | ಜೂನ್‌ 23ರಿಂದ Amazon Primeನಲ್ಲಿ ಸಿನಿಮಾ

LEAVE A REPLY

Connect with

Please enter your comment!
Please enter your name here