ಮಮ್ಮೂಟಿ ಅಭಿನಯದ ‘CBI 5 The Brain’ ಥ್ರಿಲ್ಲರ್‌ – ಡ್ರಾಮಾ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಕೆ.ಮಧು ನಿರ್ದೇಶನದಲ್ಲಿ ತಯಾರಾಗಿರುವ ಸಿನಿಮಾ CBI ಸಿನಿಮಾ ಫ್ರಾಂಚೈಸ್‌ಗಳ ಸಾಲಿನಲ್ಲಿ ಐದನೇ ಪ್ರಯೋಗ.

CBI ಕತೆಗಳ ಸರಣಿಯಲ್ಲಿ ‘CBI 5 The Brain’ ಐದನೇ ಸಿನಿಮಾ. 1988ರಲ್ಲಿ ಮೊದಲ ಸಿನಿಮಾ ಆಗಿ ‘ಒರು CBI ಡೈರಿ ಕುರಿಪ್ಪು’ ತೆರೆಗೆ ಬಂದಿತ್ತು. 1989ರ ಸೀಕ್ವೆಲ್‌ಗೆ ‘ಜಾಗ್ರತಾ’ ಎಂದು ನಾಮಕರಣವಾಗಿತ್ತು. ಇದಾಗಿ ದಶಕದ ನಂತರ 2004ರಲ್ಲಿ ‘ಸೇತುರಾಮಾ ಅಯ್ಯರ್‌ CBI’ ತೆರೆಕಂಡಿತ್ತು. ಮರುವರ್ಷ ‘ನೇರಾರಿಯನ್‌ CBI’ (2005) ಬಿಡುಗಡೆಯಾಗಿತ್ತು. ಇದೀಗ ಈ ಫ್ರಾಂಚೈಸ್‌ನ ಐದನೇ ಚಿತ್ರವಾಗಿ ‘CBI 5 The Brain’ ಸಿದ್ಧವಾಗಿದ್ದು, ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಸಿಬಿಐ ಅಧಿಕಾರಿ ಸೇತುರಾಮ ಅಯ್ಯರ್‌ ಅವರು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸಂಜಯ್‌ ಗಾಂಧಿ ಅವರ ಹತ್ಯೆಗಳನ್ನು ಪತ್ತೇದಾರಿಕೆ ಮಾಡುವಂತೆ ತೋರಿಸಲಾಗಿದೆ. ಫ್ರಾಂಚೈಸ್‌ನ ಈ ಹಿಂದಿನ ಸಿನಿಮಾಗಳ ಟ್ರೇಡ್‌ಮಾರ್ಕ್‌ ವಾಕಿಂಗ್‌ ಶೈಲಿ, ಥೀಮ್‌ ಮ್ಯೂಸಿಕ್‌ ಟೀಸರ್‌ನಲ್ಲಿದೆ. ಕೆ.ಮಧು ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರೆಂಜಿ ಪಣಿಕ್ಕರ್‌, ಸಾಯಿ ಕುಮಾರ್‌, ಜಗತಿ ಶ್ರೀಕುಮಾರ್‌, ಸೌಬಿನ್‌ ಶಾಹಿರ್‌, ಮುಖೇಶ್‌, ರಮೇಶ್‌ ಪಿಶಾರಡಿ, ಅನೂಪ್‌ ಮೆನನ್‌ ಇದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

LEAVE A REPLY

Connect with

Please enter your comment!
Please enter your name here