‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಕತೆ ಬರೆದು ನಿರ್ಮಿಸುತ್ತಿರುವ ಹೊಸ ಸಿನಿಮಾ ಸೆಟ್ಟೇರಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್‌ ಜೊತೆಗೂಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ದೀಪಕ್‌ ಮಧುವನಹಳ್ಳಿ ನಿರ್ದೇಶಿಸುತ್ತಿದ್ದಾರೆ.

ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಸತ್ಯಪ್ರಕಾಶ್‌ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ಸತ್ಯ ಅವರಿಗೆ ಮಯೂರ ಪಿಕ್ಚರ್ಸ್‌ ಜೊತೆಯಾಗಿದೆ. ಈ ಹಿಂದೆ ಇವರಿಬ್ಬರೂ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾ ನಿರ್ಮಾಣ ಮಾಡಿದ್ದು, ಇದೀಗ ಮತ್ತೊಂದು ಹೊಸ ಸಿನಿಮಾಗೆ ಜೊತೆಯಾಗಿದ್ದಾರೆ. ಸಿನಿಮಾದ ನಿರ್ಮಾಣದ ಹೊಣೆಯ ಜೊತೆ ಬರವಣಿಗೆಯಲ್ಲೂ ಸತ್ಯ ಅವರ ಪಾಲ್ಗೊಳ್ಳುವಿಕೆಯಿದೆ.

‘ಭಾಗ್ಯರಾಜ್’, ‘ಕಳ್ಳಬೆಟ್ಟರ ದರೋಡೆಕೋರರು’, ‘ರಾಜು ಜೇಮ್ಸ್ ಬಾಂಡ್’ ಸಿನಿಮಾಗಳ ನಿರ್ದೇಶಕ ದೀಪಕ್ ಮಧುವನಹಳ್ಳಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಲವಿತ್ ಕ್ಯಾಮೆರಾ, ಅಜಯ್ ಕುಮಾರ್ ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕೆ ಇರಲಿದೆ. ಸದ್ಯ ಸಿನಿಮಾಗೆ ಪ್ರೊಡಕ್ಷನ್ ನಂಬರ್ 2 ಎಂದು ಕರೆದಿದ್ದು ಮುಂದಿನ ದಿನಗಳಲ್ಲಿ ಚಿತ್ರದ ಕುರಿತಂತೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ರವಿಶಂಕರ್, ಸಾಧುಕೋಕಿಲ ಅವರೂ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿ ಸಿಗುತ್ತಿದೆ. ಈ ತಿಂಗಳಾಂತ್ಯಕ್ಕೆ ಉಳಿದ ಸ್ಟಾರ್ ಕಾಸ್ಟ್ ಜೊತೆಗೆ ಟೈಟಲ್ ಮೂಲಕ ಇಡೀ ಚಿತ್ರತಂಡದ ಬಗ್ಗೆ ಮಾಹಿತಿ ಸಿಗಲಿದೆ. ಮುಂದಿನ ತಿಂಗಳ ಎರಡನೇ ವಾರದಿಂದ ಶೂಟಿಂಗ್ ಆರಂಭವಾಗಲಿದ್ದು, 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

Previous article‘Black Adam’ ಟ್ರೈಲರ್‌; ಅಕ್ಟೋಬರ್‌ 21ಕ್ಕೆ Dwayne Johnson ಸಿನಿಮಾ
Next articleನಟ ಸಲ್ಮಾನ್‌ಗೆ ಬೆದರಿಕೆ; ಇದು ಲಾರೆನ್ಸ್‌ ಬಿಶ್ನಾಯ್‌ ಗ್ಯಾಂಗ್‌ ಪಬ್ಲಿಸಿಟಿ ಸ್ಟಂಟ್‌!

LEAVE A REPLY

Connect with

Please enter your comment!
Please enter your name here