ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ‘OG’ ತೆಲುಗು ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಸುಜೀತ್ ನಿರ್ದೇಶನದ ಈ ಆಕ್ಷನ್ – ಡ್ರಾಮಾ ಸಿನಿಮಾದ ನಾಯಕಿ ಪ್ರಿಯಾಂಕಾ ಮೋಹನ್. ಮುಂಬಯಿ ಮಾಫಿಯಾ ಹಿನ್ನೆಲೆಯಲ್ಲಿ ನಿರ್ದೇಶಕರು ಚಿತ್ರಕಥೆ ರಚಿಸಿದ್ದಾರೆ.
ಪವನ್ ಕಲ್ಯಾಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘OG’ ತೆಲುಗು ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸುಜೀತ್ ನಿರ್ದೇಶನದ ಈ ಆಕ್ಷನ್ ಡ್ರಾಮಾ ಇದೇ ವರ್ಷ ಸೆಪ್ಟೆಂಬರ್ 27ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಚಲನಚಿತ್ರವು ಮುಂಬಯಿ ಮಾಫಿಯಾ ಹಿನ್ನೆಲೆಯನ್ನು ಒಳಗೊಂಡಿದೆ. 2023ರ ಏಪ್ರಿಲ್‌ನಲ್ಲಿ ಚಿತ್ರೀಕರಣ ಶುರುವಾಗಿತ್ತು. ಇಮ್ರಾನ್ ಹಶ್ಮಿ ಅವರು ಈ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಅವರು ಚಿತ್ರದಲ್ಲಿ ಖಳನಾಕಯನಾಗಿ ಅಭಿನಯಿಸಲಿದ್ದು, ಪ್ರಿಯಾಂಕಾ ಮೋಹನ್ ಚಿತ್ರದ ನಾಯಕಿ.
ಸಿನಿಮಾದಲ್ಲಿ ಅರ್ಜುನ್ ದಾಸ್, ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಹರೀಶ್ ಉತ್ತಮನ್, ಅಭಿಮನ್ಯು ಸಿಂಗ್, ಅಜಯ್ ಘೋಷ್ ಮತ್ತು ಶುಭಲೇಖಾ ಸುಧಾಕರ್ ನಟಿಸಿದ್ದಾರೆ. ಸುಜೀತ್ ಅವರು ಈ ಹಿಂದೆ ನಿರ್ದೇಶಿಸಿದ್ದ ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ನಟಿಸಿದ್ದರು. ಈ ಆಕ್ಷನ್ ಡ್ರಾಮಾ 2019ರಲ್ಲಿ ಬಿಡುಗಡೆಯಾಗಿತ್ತು. ‘OG’ ಚಲನಚಿತ್ರವನ್ನು DVV Entertainment ನಿರ್ಮಿಸುತ್ತಿದೆ. ರವಿ ಕೆ ಚಂದ್ರನ್ ಛಾಯಾಗ್ರಹಣ ಮತ್ತು ಥಮನ್ ಎಸ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಥಮನ್ ಅವರು ಈ ಹಿಂದೆ ಪವನ್ ಕಲ್ಯಾಣ್ ಅವರ ‘ವಕೀಲ್ ಸಾಬ್’, ‘ಭೀಮ್ಲಾ ನಾಯಕ್’ ಮತ್ತು ‘ಬ್ರೋ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
The #OG will arrive on 27th September 2024. #TheyCallHimOG #OGonSept27th pic.twitter.com/4PZTUZe2db
— DVV Entertainment (@DVVMovies) February 6, 2024