ಪ್ರಭಾಸ್‌ ಅಭಿನಯದ ಮೆಗಾ ಮೂವಿ ‘ಪ್ರಾಜೆಕ್ಟ್‌ K’ ಇನ್ನು ಮುಂದೆ ‘ಕಲ್ಕಿ 2898’ ಎಂದಾಗಲಿದೆ. USನ San Diegoದ Comic-Con ಕಾರ್ಯಕ್ರಮದಲ್ಲಿ ನೂತನ ಶೀರ್ಷಿಕೆ ಅನಾವರಣಗೊಂಡಿದೆ. ಅಮಿತಾಭ್‌ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ, ಪಶುಪತಿ, ದಿಶಾ ಪಟಾನಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 2024ರ ಜನವರಿ 24ರಂದು ಸಿನಿಮಾ ತೆರೆಕಾಣಲಿದೆ.

ನಾಗ್‌ ಅಶ್ವಿನ್‌ ನಿರ್ದೇಶನದ ‘ಪ್ರಾಜೆಕ್ K’ ಚಿತ್ರಕ್ಕೆ ‘ಕಲ್ಕಿ 2898 AD’ ಶೀರ್ಷಿಕೆಯನ್ನು USನ San Diegoದ Comic-Con ಕಾರ್ಯಕ್ರಮದಲ್ಲಿ ಚಿತ್ರತಂಡ ಅನಾವರಣಗೊಳಿಸಿದೆ. ಇದೇ ಮೊದಲ ಬಾರಿಗೆ ಭಾರತೀಯ ಚಿತ್ರವೊಂದು ಅಮೇರಿಕಾದ Comic-Conನಲ್ಲಿ ಬಿಡುಗಡೆಯಾಗಿದೆ. ಇದುವರೆಗೂ ‘Project K’ ಹೆಸರಿನಿಂದ ಕರೆಯಲಾಗುತ್ತಿದ್ದ ಸಿನಿಮಾ ಇನ್ನು ಮುಂದೆ ‘ಕಲ್ಕಿ 2898 AD’ ಎಂದಾಗಲಿದೆ. ಮೊನ್ನೆ ಜುಲೈ 19ರಂದು ಚಿತ್ರದಲ್ಲಿನ ಪ್ರಭಾಸ್‌ ಫಸ್ಟ್‌ಲುಕ್‌ ಅನಾವರಣಗೊಂಡಿತ್ತು. ಈ ಪೋಸ್ಟರ್‌ ನೋಡಿದ ನೆಟ್ಟಿಗರು ಪ್ರಭಾಸ್‌ ಲುಕ್ ಕಾಮಿಕ್‌ ರೂಪವನ್ನು ಹೋಲುವಂತಿದೆ. ಹಾಲಿವುಡ್ ಚಿತ್ರ ‘ಡ್ಯೂನ್‌’ನ ಐರನ್ ಮ್ಯಾನ್ ಪಾತ್ರ ಹೋಲುವ ರೀತಿಯಲ್ಲಿದೆ’ ಎಂದು ಟ್ರೋಲ್‌ ಮಾಡುತ್ತಾ ಟ್ವೀಟ್‌ ಮಾಡಿದರು. ಅದೇ ರೀತಿಯಲ್ಲಿ ಚಿತ್ರದ ಶೀರ್ಷಿಕೆ ಮತ್ತು ಟ್ರೈಲರ್‌ಗೂ ಸಹ ಹಾಲಿವುಡ್‌ ‘ಡೂನ್‌’ ಚಿತ್ರದ ‘ಚೀಪರ್‌ ಕಾಪಿ’ ಎಂದು ಟ್ರೋಲ್‌ ಮಾಡಿದ್ದರು.

‘ದಿ ಹಾಲಿವುಡ್‌ ರಿಪೋರ್ಟ್’ಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ನಾಗ್‌ ಅಶ್ವಿನ್‌ ‘ಕಲ್ಕಿ’ ಚಿತ್ರದ ಅರ್ಥ ವಿವರಿಸಿದ್ದಾರೆ. ‘ನಮ್ಮ ಪುರಾಣದಲ್ಲಿ ವಿಷ್ಣುವಿನ 10 ಅವತಾರಗಳಿವೆ. ಕೊನೆಯ ಮತ್ತು ಅಂತಿಮ ಅವತಾರವೇ ‘ಕಲ್ಕಿ’ ಅವತಾರ. ಹಿಂದು ಪುರಾಣದಲ್ಲಿ (ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ ಮತ್ತು ಕಲಿಯುಗ) ನಾಲ್ಕು ಯುಗಗಳಿವೆ ಎಂದು ನಂಬಲಾಗಿದೆ. ಇವುಗಳಲ್ಲಿ ಒಂದಾದ ಕಲಿಯುಗವನ್ನು ಅಂತ್ಯಗೊಳಿಸಲು ವಿಷ್ಣು ‘ಕಲ್ಕಿ’ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ಭಾರತೀಯ ಪುರಾಣ ಹೇಳುತ್ತದೆ. ‘ಕಲ್ಕಿ’ಯು ದುಷ್ಟರನ್ನು ನಾಶಪಡಿಸುವ ಮೂಲಕ ಅಧರ್ಮ ತೊಡೆದುಹಾಕುತ್ತಾನೆ. ಇದು ಮುಂದಿನ ಹೊಸ ಯುಗ – ‘ಸತ್ಯ ಯುಗ’ದ ಆರಂಭವನ್ನು ಸೂಚಿಸುತ್ತದೆ ಎಂದು ಪುರಾಣಗಳಲ್ಲಿ ನಂಬಲಾಗಿದೆ” ಎಂದಿದ್ದಾರೆ.

ಈ ಬಿಗ್ ಬಜೆಟ್ ಚಿತ್ರವು ಬಿಡುಗಡೆಗೂ ಮುನ್ನವೇ ನಾನಾ ರೀತಿಯಲ್ಲಿ ಸಂಚಲನ ಮೂಡಿಸುತ್ತಿದೆ. ಎಲ್ಲಾ ಅಂಶಗಳನ್ನು ಗಮನಿಸಿದರೆ, ಭಾರತೀಯ ಚಿತ್ರವನ್ನು ಅಮೇರಿಕಾದ ಪ್ರೇಕ್ಷಕರಿಗೂ ಕನೆಕ್ಟ್‌ ಆಗುವ ರೀತಿಯಲ್ಲಿ ಚಿತ್ರಿಸಲಾಗುತ್ತಿದೆಯೇ? ಎಂಬ ಪ್ರಶ್ನೆ ಏಳುತ್ತದೆ. ಅಥವಾ ಅಮೇರಿಕಾದ ಜನರು ಚಿತ್ರವನ್ನು ಭಾರತೀಯ ಶೈಲಿಯಲ್ಲಿಯೇ ವೀಕ್ಷಿಸಲು ಇಷ್ಟಪಡುತ್ತಾರೆಯೇ ಕಾದು ನೋಡಬೇಕಿದೆ. ಈ ಪೌರಾಣಿಕ-ವೈಜ್ಞಾನಿಕ-ಕಾಲ್ಪನಿಕ ಚಲನಚಿತ್ರದಲ್ಲಿ ಅಮಿತಾಭ್‌ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ, ಪಶುಪತಿ ಮತ್ತು ದಿಶಾ ಪಟಾನಿ ಸೇರಿದಂತೆ ಭಾರತದ ದೊಡ್ಡ ತಾರಾಬಳಗವೇ ಇದೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಮಿತಾಬ್‌ ಬಚ್ಚನ್ ತಮ್ಮ ಟ್ವಿಟರ್‌ನಲ್ಲಿ ಚಿತ್ರದ ಮಾಹಿತಿ ಹಂಚಿಕೊಂಡು, ‘what an honor and privilege to be in the company of stratospheric GREATS of our cinema World !!! 𝐏𝐑𝐎𝐉𝐄𝐂𝐓-𝐊 is now #Kalki2898AD’ ಎಂದು ಟ್ವೀಟ್‌ ಮಾಡಿದ್ದಾರೆ. ಚಿತ್ರವನ್ನು ವೈಜಯಂತಿ ಪ್ರೊಡಕ್ಷನ್‌ ಬ್ಯಾನರ್‌ನಡಿ ಸಿ ಅಶ್ವಿನ್‌ ದತ್‌ ನಿರ್ಮಿಸುತ್ತಿದ್ದು, ಸಂತೋಷ್‌ ನಾರಾಯಣನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. 2024ರ ಜನವರಿ 24ರಂದು ಸಿನಿಮಾ ತೆರೆಕಾಣಲಿದೆ.

Previous articleತಮಿಳು ಸಿನಿಮಾಗಳಲ್ಲಿ ತಮಿಳು ಕಲಾವಿದರಷ್ಟೇ ನಟಿಸಬೇಕು | ವಿವಾದಕ್ಕೀಡಾದ FEFSI ನಿಯಮ
Next articleಕ್ರಿಸ್ಟೋಫರ್ ನೋಲನ್‌ನ ಅತೀ ಪ್ರಬುದ್ಧ ಚಿತ್ರ – Oppenheimer

LEAVE A REPLY

Connect with

Please enter your comment!
Please enter your name here