‘ಬಾಹುಬಲಿ’ ಖ್ಯಾತಿಯ ಪ್ರಭಾಸ್‌ ಹುಟ್ಟುಹಬ್ಬವಿಂದು. ಈ ಸಂದರ್ಭದಲ್ಲಿ ‘ರಾಧೆ ಶ್ಯಾಮ್‌’ ಚಿತ್ರದಲ್ಲಿ ಅವರ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆಯಾಗಿದೆ.

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್‌’ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರಗಳಲ್ಲೊಂದು. ತೆಲುಗು ಮತ್ತು ಹಿಂದಿ ಭಾ‍ಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾದ ಬಹುಪಾಲು ಚಿತ್ರೀಕರಣ ಇಟಲಿಯಲ್ಲಿ ನಡೆದಿದೆ. ಹೀರೋ ಪ್ರಭಾಸ್ ಇಂದು 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನದ ಅಂಗವಾಗಿ ‘ರಾಧೆ ಶ್ಯಾಮ್‌’ ಚಿತ್ರದಲ್ಲಿನ ಅವರ ‘ವಿಕ್ರಮಾದಿತ್ಯ’ ಪಾತ್ರ ರಿವೀಲ್ ಮಾಡುವ ಟೀಸರ್ ಬಿಡುಗಡೆಯಾಗಿದೆ. ಆಕರ್ಷಕ ಟೀಸರ್‌ನಲ್ಲಿ ಪ್ರಭಾಸ್‌ ಬೇಸ್ ವಾಯ್ಸ್‌ ಇದ್ದು, ಪ್ರೇಮಕತೆಯ ಜೊತೆಗೆ ಥ್ರಿಲ್ಲಿಂಗ್ ಅಂಶಗಳೂ ಚಿತ್ರದಲ್ಲಿರುತ್ತವೆ ಎಂದೆನಿಸುವುದು ಹೌದು.

ಆಕರ್ಷಕ ಛಾಯಾಗ್ರಹಣವಿರುವ ಟೀಸರ್‌ನಲ್ಲಿ ‘ವಿಕ್ರಮಾದಿತ್ಯ’ ಪ್ರಭಾಸ್‌ ಪಾತ್ರ ಪರಿಚಯವಾಗಿದೆ. ದೃಶ್ಯದ ಹಿನ್ನೆಲೆಯಲ್ಲಿ, “ನಾನು ನಿನ್ನನ್ನು ಬಲ್ಲೆ, ಆದರೆ ನಾನು ಹೇಳೋಲ್ಲ. ನಿನ್ನ ಹಾರ್ಟ್‌ಬೀಟ್ ನಾನು ಫೀಲ್ ಮಾಡಬಲ್ಲೆ, ಅದರೆ ನಾನು ಹೇಳೋಲ್ಲ. ನಾನು ನಿನ್ನ ಸೋಲುಗಳನ್ನು ನೋಡಬಲ್ಲೆ, ಆದರೆ ನಾನು ಹೇಳೋಲ್ಲ. ನಾನು ನಿನ್ನ ಸಾವನ್ನು ಸೆನ್ಸ್ ಮಾಡಬಲ್ಲೆ, ಅದರೆ ನಾನು ಹೇಳೋಲ್ಲ. ನನಗೆ ಎಲ್ಲವೂ ಗೊತ್ತಿದೆ, ಆದರೆ ನಾನು ಹೇಳೋಲ್ಲ. ಏಕೆಂದರೆ ಅದು ನಿನಗೆ ಅರ್ಥವಾಗುವುದಿಲ್ಲ” ಎನ್ನುವ ಪ್ರಭಾಸ್ ಮಾತುಗಳಿವೆ. ಇದು ಯೂರೋಪ್‌ನಲ್ಲಿ ನಡೆಯುವ 70ರ ದಶಕದ ಕತೆ ಎನ್ನಲಾಗಿದೆ. 2022ರ ಸಕ್ರಾಂತಿಗೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here