‘ಚಂದ್ರಯಾನ – 3’ ಯಶಸ್ಸಿಗೆ ಭಾರತೀಯ ಸಿನಿಮಾರಂಗದ ಹಲವರು ಶುಭ ಹಾರೈಸಿದ್ದಾರೆ. ವಿಜ್ಞಾನಿಗಳ ಪರಿಶ್ರಮವನ್ನು ಕೊಂಡಾಡಿರುವ ಅವರು ಜಾಗತಿಕ ವಲಯದಲ್ಲಿ ಭಾರತವನ್ನು ಎತ್ತರದ ಸ್ಥಾನಕ್ಕೇರಿಸಿದ ಸಾಧಕರಿಗೆ ಟ್ವೀಟ್‌ಗಳ ಮೂಲಕ ಅಭಿನಂದನೆ ಹೇಳಿದ್ದಾರೆ.

‘ಚಂದ್ರಯಾನ – 3’ ಮಿಷನ್‌ ಯಶಸ್ಸಿನ ಬಗ್ಗೆ ಚಿತ್ರರಂಗದ ಸೆಲೆಬ್ರಿಟಿಗಳು ಭಾರತೀಯ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. ಜೊತೆಗೆ ಈ ಐತಿಹಾಸಿಕ ಸಾಧನೆಯ ಕುರಿತು ಸಿನಿರಂಗದ ಅನೇಕ ತಾರೆಯರು ಸಂತಸವನ್ನು ಹಂಚಿಕೊಂಡಿದ್ದಾರೆ. ‘ಚಂದ್ರಯಾನ-3’ (ಭಾರತದ ಮೂರನೇ ಚಂದ್ರಯಾನ) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ದಕ್ಷಿಣ ಧ್ರುವದಲ್ಲಿ ತನ್ನ ಹೆಜ್ಜೆ ಮೂಡಿಸಿರುವ ವಿಶ್ವದ ಏಕೈಕ ದೇಶ ಭಾರತ. ಈ ಐತಿಹಾಸಿಕ ಸಾಧನೆ ಮಾಡುವಲ್ಲಿ ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ನಂತರ ಭಾರತವು ವಿಶ್ವದ ನಾಲ್ಕನೇ ರಾಷ್ಟ್ರವಾಗಿದೆ. ಈ ಐತಿಹಾಸಿಕ ಸಾಧನೆಗೆ ನಟರಾದ ಅಮಿತಾಬ್‌ ಬಚ್ಚನ್‌, ಶಾರುಖ್ ಖಾನ್, ರಜಿನೀ ಕಾಂತ್, ಸಲ್ಮಾನ್‌ ಖಾನ್‌, ರಾಕಿಂಗ್ ಸ್ಟಾರ್‌ ಯಶ್‌, ರಿಷಬ್‌ ಶೆಟ್ಟಿ, ಪ್ರಭಾಸ್‌, ವಿಕ್ಕಿ ಕೌಶಲ್, ಜೂನಿಯರ್‌ NTR, ಅಕ್ಷಯ್‌ ಕುಮಾರ್‌, ಆಲಿಯಾ ಭಟ್, ಶ್ರದ್ಧಾ ಕಪೂರ್, ನಿರ್ದೇಶಕರಾದ ರಾಜಮೌಳಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸಂದರ್ಭದಲ್ಲಿ ISRO ವಿಜ್ಞಾನಿಗಳಿಗೆ ಮತ್ತು ಎಲ್ಲಾ ಭಾರತೀಯರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. SpaceX (Twitter) ಮಾಲೀಕ Elon Mask ಮತ್ತು Amazon ಸ್ಥಾಪಕ Jeff Bezos ಭಾರತಕ್ಕೆ ಶುಭಾಶಯ ಕೋರಿದ್ದಾರೆ.

Previous articleಶಿವಣ್ಣ – ಪ್ರಭುದೇವ ‘ಕರಟಗ ದಮನಕ’ | ತೆರೆಗೆ ಸಿದ್ಧವಾದ ಯೋಗರಾಜ್‌ ಭಟ್ಟರ ಸಿನಿಮಾ
Next articleLyca Productions ಸಿನಿಮಾದಲ್ಲಿ ನಿಖಿಲ್‌ ಕುಮಾರಸ್ವಾಮಿ | ದೇವೇಗೌಡರಿಂದ ಚಾಲನೆ

LEAVE A REPLY

Connect with

Please enter your comment!
Please enter your name here