ವಿನು ವೆಂಕಟೇಶ್‌ ನಿರ್ದೇಶನದ ‘ವುಲ್ಫ್‌’ ಟೀಸರ್‌ ಬಿಡುಗಡೆಯಾಗಿದೆ. ಪ್ರಭುದೇವ ನಟನೆಯ ಸೂಪರ್‌ನ್ಯಾಚುರಲ್‌ ಹಾರರ್‌ ಚಿತ್ರವಿದು. ಇದು ಸಂದೇಶ್‌ ಪ್ರೊಡಕ್ಷನ್ಸ್‌ನ 30ನೇ ಹಾಗೂ ಪ್ರಭುದೇವ ನಟನೆಯ 60ನೇ ಸಿನಿಮಾ.

ಡ್ಯಾನ್ಸಿಂಗ್‌ ಸ್ಟಾರ್‌ ಪ್ರಭುದೇವ ಅಭಿನಯದ 60ನೇ ಸಿನಿಮಾ ‘ವುಲ್ಫ್‌’ ಟೀಸರ್‌ ಬಿಡುಗಡೆಯಾಗಿದೆ. ಇದೊಂದು ಸೂಪರ್‌ನ್ಯಾಚುರಲ್‌ ಹಾರರ್‌ – ಥ್ರಿಲ್ಲರ್‌ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನು ವೆಂಕಟೇಶ್‌. ಟೀಸರ್‌ನಲ್ಲಿ ಚಿತ್ರದ ಎಲ್ಲಾ ಪಾತ್ರಗಳೂ ಪರಿಚಯವಾಗುತ್ತವೆ. ಅನುಸೂಯ ಭಾರದ್ವಾಜ್, ಲಕ್ಷ್ಮಿ ರೈ, ವಸಿಷ್ಠ ಸಿಂಹ, ಅಂಜು ಕುರಿಯನ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಸಂದೇಶ್‌ ಪ್ರೊಡಕ್ಷನ್ಸ್‌ನ 30ನೇ ಚಿತ್ರವಿದು. ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರು ಆಗಸ್ಟ್‌ 16ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು ಚಿತ್ರಕ್ಕೆ ವಿಜಯ ಸೇತುಪತಿ ಹಾಡಿರುವ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅರುಳ್ ವಿನ್ಸೆಂಟ್ ಛಾಯಾಗ್ರಹಣ, ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ ಸಂಗೀತ ನಿರ್ದೇಶಕ ಅಮರೀಶ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ತಮಿಳು, ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here