ಬಹುನಿರೀಕ್ಷಿತ ‘ಚಂದ್ರಮುಖಿ 2’ ತಮಿಳು ಸಿನಿಮಾದಲ್ಲಿನ ಕಂಗನಾ ರನಾವತ್‌ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಪಿ ವಾಸು ನಿರ್ದೇಶನದ ಈ ಚಿತ್ರದ ಹೀರೋ ರಾಘವ ಲಾರೆನ್ಸ್‌. 2005ರ ಸೂಪರ್‌ ಹಿಟ್‌ ‘ಚಂದ್ರಮುಖಿ’ ಸಿನಿಮಾದ ಸರಣಿಯಿದು. ಗಣೇಶನ ಹಬ್ಬಕ್ಕೆ ಸಿನಿಮಾ ತೆರೆಕಾಣಲಿದೆ.

ಪಿ ವಾಸು ನಿರ್ದೇಶನದ ‘ಚಂದ್ರಮುಖಿ 2’ ತಮಿಳು ಸಿನಿಮಾದಲ್ಲಿನ ಕಂಗನಾ ರನಾವತ್‌ ಪಾತ್ರದ ಲುಕ್‌ ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ಬಂಗಾರದ ಆಭರಣೆಗಳಲ್ಲಿ ಕಂಗನಾ ಕಂಗೊಳಿಸಿದ್ದಾರೆ. ಕಳೆದ ವಾರವಷ್ಟೇ ಹಿರಿಯ ನಟ ರಜನಿಕಾಂತ್ ಅವರು ಚಿತ್ರದ ಹೀರೋ ರಾಘವ ಲಾರೆನ್ಸ್ ಲುಕ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದರು. ರಾಘವ ಲಾರೆನ್ಸ್‌ ಚಿತ್ರದಲ್ಲಿ ವೆಟ್ಟೈಯನ್‌ ರಾಜನಾಗಿ ಕಾಣಿಸಕೊಂಡಿದ್ದಾರೆ. ಇದೀಗ ಶೀರ್ಷಿಕೆ ಪಾತ್ರಧಾರಿ ಕಂಗನಾ ಲುಕ್‌ ಹೊರಬಿದ್ದಿದ್ದು, ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ಮೊಲದ ವೀಡಿಯೋ ಸಾಂಗ್‌ ರಿಲೀಸ್‌ ಆಗಲಿದ್ದು, ಇದರ glimpses ಬಿಡುಗಡೆಯಾಗಿದೆ.

2005ರಲ್ಲಿ ಬಿಡುಗಡೆಯಾಗಿದ್ದ ‘ಚಂದ್ರಮುಖಿ’ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ರಜನಿಕಾಂತ್ ನಟಿಸಿದ್ದ ಸಿನಿಮಾ ಹಿಟ್‌ ಲಿಸ್ಟ್‌ಗೆ ಸೇರ್ಪಡೆಗೊಂಡಿತ್ತು. ಹದಿನೆಂಟು ವರ್ಷಗಳ ಬಳಿಕ ಚಂದ್ರಮುಖಿ ಸೀಕ್ವೆಲ್ ಬರುತ್ತಿದ್ದು, ನಿರೀಕ್ಷೆ ಹೆಚ್ಚಿಸಿದೆ. ಲೈಕಾ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ಆಸ್ಕರ್‌ ಪುರಸ್ಕೃತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಸಂಗೀತ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನವಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗೌರಿ – ಗಣೇಶ ಹಬ್ಬಕ್ಕೆ ಸಿನಿಮಾ ತೆರೆಕಾಣಲಿದೆ.

Previous article‘ವುಲ್ಫ್‌’ ಟೀಸರ್‌ | ಪ್ರಭುದೇವ ನಟನೆಯ supernatural horror film
Next articleಸಮಾಜದ ಅಂಕುಡೊಂಕುಗಳ ಮೇಲೆ ಬೆಳಕು ಚೆಲ್ಲುವ ‘ಕಾಲ್‌ಕೂಟ್‌’

LEAVE A REPLY

Connect with

Please enter your comment!
Please enter your name here