ಲೋಹಿತ್‌ ಎಚ್‌ ನಿರ್ದೇಶನದ ‘ಮಾಫಿಯಾ’ ಆಕ್ಷನ್‌ ಸಿನಿಮಾ ಜುಲೈ 26ರಂದು ತೆರೆಕಾಣಲಿದೆ. ಬೆಂಗಳೂರು ಕುಮಾರ್‌ ನಿರ್ಮಾಣದ ಚಿತ್ರದ ನಾಯಕಿ ಅದಿತಿ ಪ್ರಭುದೇವ. ಚಿತ್ರಕ್ಕೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಹೀರೋ ಆಗಿ ನಟಿಸಿರುವ ‘ಮಾಫಿಯಾ’ ಆಕ್ಷನ್‌ ಸಿನಿಮಾ ಜುಲೈ 26ರಂದು ತೆರೆಕಾಣಲಿದೆ. ಲೋಹಿತ್‌ ಎಚ್‌ ನಿರ್ದೇಶನದ ಚಿತ್ರದಲ್ಲಿ ಭರ್ಜರಿ ಆಕ್ಷನ್‌ ಸನ್ನಿವೇಶಗಳಿವೆ. ಸಿನಿಮಾದ ಟೀಸರ್‌ ಇದರ ಸೂಚನೆ ನೀಡುತ್ತದೆ. ಬಹಳ ದಿನಗಳ ನಂತರ ಪ್ರಜ್ವಲ್‌ ದೇವರಾಜ್‌ ಸಿನಿಮಾ ತೆರೆಕಾಣುತ್ತಿದ್ದು, ಆಕ್ಷನ್‌ ಸಿನಿಮಾ ಪ್ರೇಮಿಗಳಿಗೆ ಇದು ಸಂತಸ ತಂದಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಸಿನಿಮಾ ನಿರ್ಮಿಸಿದ್ದಾರೆ. ಬೆಂಗಳೂರು, ಮೈಸೂರು, ಹೈದರಾಬಾದ್‌ನಲ್ಲಿ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಅದಿತಿ ಪ್ರಭುದೇವ ಸಿನಿಮಾದ ನಾಯಕನಟಿ. ‘ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದೆ. ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು. ಅನೂಪ್‌ ಸಿಳೀನ್‌ ಸಂಗೀತ, ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ದೇವರಾಜ್, ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here