ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಜೂನಿಯರ್‌ NTR ನಟಿಸುತ್ತಿರುವ ತೆಲುಗು ಸಿನಿಮಾಗೆ ಚಾಲನೆ ಸಿಕ್ಕಿದೆ. ನಿನ್ನೆ ಹೈದರಾಬಾದ್‌ನಲ್ಲಿ ಹೆಚ್ಚು ಸದ್ದಿಲ್ಲದೆ ಮುಹೂರ್ತ ಸಮಾರಂಭ ನೆರವೇರಿದೆ. ರಿಲೀಸ್‌ ದಿನಾಂಕವೂ ಘೋಷಣೆಯಾಗಿದ್ದು, 2026ರ ಜನವರಿ 9ರಂದು ಸಿನಿಮಾ ತೆರೆಕಾಣಲಿದೆ.

‘KGF2’ ಸಿನಿಮಾ ತೆರೆಕಂಡ ನಂತರದ ದಿನಗಳಲ್ಲೇ ಘೋಷಣೆಯಾಗಿದ್ದ ಸಿನಿಮಾ ಇದು. ‘KGF’ ಸರಣಿ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ಪ್ರಶಾಂತ್‌ ನೀಲ್‌ ಅವರು ಜೂನಿಯರ್‌ NTR ಗೆ ಸಿನಿಮಾ ಮಾಡುವ ವಿಷಯ ಘೋಷಣೆಯಾಗಿತ್ತು. ಇದೀಗ ವರ್ಷಗಳ ನಂತರ ಸಿನಿಮಾಗೆ ಮುಹೂರ್ತ ನೆರವೇರಿದೆ. ಪ್ರಶಾಂತ್‌ ನೀಲ್‌ ಅವರೇ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿದ್ದಾರೆ. ಚಿತ್ರವನ್ನು ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿಕೃಷ್ಣ ಕೊಸರಾಜು ಅವರು ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಕೆಜಿಎಫ್‌, ಸಲಾರ್‌ ಖ್ಯಾತಿಯ ಭುವನ್ ಗೌಡ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಪಾತ್ರವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ಚಿತ್ರದ ರಿಲೀಸ್‌ ದಿನಾಂಕವೂ ಘೋಷಣೆಯಾಗಿದ್ದು, 2026ರ ಸಂಕ್ರಾಂತಿಯಂದು ಜನವರಿ 9ಕ್ಕೆ ಸಿನಿಮಾ ತೆರೆಕಾಣಲಿದೆ. ಮೂಲ ತೆಲುಗು ಜತೆಗೆ, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here