ಮಹೇಶ್‌ ಬಾಬು ನಟನೆಯ ಬಹುನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪರಶುರಾಮ್‌ ನಿರ್ದೇಶನದ ಸಿನಿಮಾದ ನಾಯಕಿ ಕೀರ್ತಿ ಸುರೇಶ್‌. ಮೇ 12ರಂದು ಸಿನಿಮಾ ತೆರೆಕಾಣಲಿದೆ.

“ನೀನು ನನ್ನ ಪ್ರೀತಿಯನ್ನು ಕದಿಯಬಹುದು, ನನ್ನ ಸ್ನೇಹವನ್ನು ಕದಿಯಬಹುದು, ಆದರೆ ನನ್ನ ದುಡ್ಡನ್ನು ಕದಿಯಲು ಸಾಧ್ಯವಿಲ್ಲ” ಎನ್ನುವ ಮಹೇಶ್‌ ಬಾಬು ಸಂಭಾಷಣೆಯೊಂದಿಗೆ ‘ಸರ್ಕಾರು ವಾರಿ ಪಾಟ’ ಟ್ರೈಲರ್‌ ಶುರುವಾಗುತ್ತದೆ. ಚಿತ್ರದಲ್ಲಿ ಹಣಕ್ಕಾಗಿ ಹಪಹಪಿಸುವ ವ್ಯಕ್ತಿಯ ಪಾತ್ರದಲ್ಲಿ ಮಹೇಶ್‌ ಬಾಬು ನಟಿಸಿರುವಂತಿದೆ. ಮಹೇಶ್‌ ಬಾಬು ಅವರ ಅಭಿಮಾನಿಗಳು ಅಪೇಕ್ಷಿಸುವ ಸ್ಟೈಲ್‌, ಆಕ್ಷನ್‌, ರೊಮ್ಯಾನ್ಸ್‌ ಟ್ರೈಲರ್‌ನಲ್ಲಿ ಕಾಣಿಸುತ್ತದೆ. ಇನ್ನು ನಟಿ ಕೀರ್ತಿ ಸುರೇಶ್‌ ಮುದ್ದಾಗಿ ಕಾಣಿಸುತ್ತಿದ್ದು, ಇದು ಅವರ ವೃತ್ತಿಬದುಕಿನ ಪ್ರಮುಖ ಚಿತ್ರವಾಗಬಹುದು. ಮೇ 12ರಂದು ಸಿನಿಮಾ ತೆರೆಕಾಣಲಿದೆ.

ಹಾಗೆ ನೋಡಿದರೆ ಈ ಸಿನಿಮಾ ಕಳೆದ ಸಕ್ರಾಂತಿಗೇ ತೆರೆಗೆ ಬರಬೇಕಿತ್ತು. ಕೋವಿಡ್‌ನಿಂದಾಗಿ ಮೂರ್ನಾಲ್ಕು ಬಾರಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಯ್ತು. ‘ಗೀತ ಗೋವಿಂದಂ’ ತೆಲುಗು ಸಿನಿಮಾ ಖ್ಯಾತಿಯ ನಿರ್ದೇಶಕ ಪರಶುರಾಮ್ ಪೆಟ್ಲಾ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ವೆನ್ನಲ ಕಿಶೋರ್, ಸುಬ್ಬರಾಜು ಅಭಿನಯಿಸಿದ್ದಾರೆ. ಇನ್ನು ಮಹೇಶ್ ಬಾಬು ಅವರ ಮುಂದಿನ ಸಿನಿಮಾ ನಿರ್ದೇಶಕ ತ್ರಿವಿಕ್ರಮ್ ಅವರದ್ದು. ಈಗಾಗಲೇ ಚಿತ್ರಿಕರಣ ಆರಂಭವಾಗಿದೆ. ಮಹೇಶ್ ಬಾಬು ಅವರೊಂದಿಗೆ ತ್ರಿವಿಕ್ರಮ್‌ಗೆ ಇದು ಮೂರನೇ ಸಿನಿಮಾ. ‘ಮಹರ್ಷಿ’ ಸಿನಿಮಾ ನಂತರ ಮಹೇಶ್ ಬಾಬು ಅವರಿಗೆ ಎರಡನೇ ಬಾರಿ ಪೂಜಾ ಹೆಗ್ಡೆ ಇಲ್ಲಿ ಜೋಡಿಯಾಗುತ್ತಿದ್ದಾರೆ. ಹಾರಿಕಾ ಹಾಸೈನ್ ಕ್ರಿಯೇಷನ್ಸ್‌ ಚಿತ್ರ ನಿರ್ಮಿಸುತ್ತಿದ್ದು, ಥಮನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಾದ ನಂತರ ಮಹೇಶ್ ಬಾಬು ಅವರು ‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Previous articleಅಮೇಜಾನ್‌ ಪ್ರೈಮ್‌ ‘ಪಂಚಾಯತ್‌ 2’ ಬಿಡುಗಡೆ ದಿನಾಂಕ ಘೋಷಣೆ
Next articleಸೆಟ್ಟೇರಿದ ‘ಅರಿಹ’; ಶ್ರೀ, ಸನತ್‌, ಕಾಜಲ್‌ ಕುಂದರ್‌ ಸಿನಿಮಾ

LEAVE A REPLY

Connect with

Please enter your comment!
Please enter your name here