ಬಿಗ್‌ಬಾಸ್‌ ಖ್ಯಾತಿಯ ಪ್ರಥಮ್‌ ನಟಿಸಿ, ನಿರ್ದೇಶಿಸಿರುವ ‘ನಟ ಭಯಂಕರ’ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ನಟ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಿನಿಮಾ ಮೇ 13ರಂದು ತೆರೆಕಾಣಲಿದೆ.

“ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎನ್ನುವುದೇ ಚಿತ್ರದ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಎಂದು ಹೇಳಬಹುದು. ಇಂದು ಆಡಿಯೋ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಅನಾವರಣಗೊಳಿಸುತ್ತೇವೆ” ಎಂದರು ಪ್ರಥಮ್‌. ಬಿಗ್‌ಬಾಸ್‌ ಶೋ ಖ್ಯಾತಿಯ ಪ್ರಥಮ್‌ ತಾವು ನಟಿಸಿ, ನಿರ್ದೇಶಿಸಿರುವ ‘ನಟ ಭಯಂಕರ’ ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಪ್ರಮುಖರಿಂದ ಪೋಸ್ಟರ್‌ ರಿಲೀಸ್‌ ಮಾಡಿಸಿದ್ದ ಅವರು ಈಗ ತಮ್ಮ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ್ದಾರೆ. ನಟ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ ಮಾಡಿ ಹಾರೈಸಿದರು. ಲಹರಿ ವೇಲು, ಚಿತ್ರಸಾಹಿತಿ ವಿ.ನಾಗೇಂದ್ರಪ್ರಸಾದ್‌, ಜಿಲ್ಲಾಧಿಕಾರಿ ದಯಾನಂದ್‌ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಟ ಶ್ರೀಮುರಳಿ ಅವರು ಮಾತನಾಡಿ, “ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ್‌ಬಾಸ್ ಆರಂಭದಲ್ಲಿ ಇವರ ಮಾತು, ವ್ಯಕ್ತಿತ್ವಕ್ಕೆ ಮಾರು ಹೋಗಿದ್ದೆ. ನಂತರ ನಾನೇ ಅವರ ಅಭಿಮಾನಿಯಾದೆ. ಈಗ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಘು ದೀಕ್ಷಿತ್ ಹಾಗೂ ಉಪ್ಪಿ ಸರ್ ಹಾಡಿರುವ ಹಾಡುಗಳು ನನಗೆ ಇಷ್ಟವಾದವು. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬ ನಂಬಿಕೆಯಿದೆ. ಪ್ರಥಮ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳಿತಾಗಲಿ” ಎಂದು ಹಾರೈಸಿದರು. ನಿಹಾರಿಕಾ, ಚಂದನ ಚಿತ್ರದ ನಾಯಕಿಯರು. ಪ್ರದ್ಯೋತನ್‌ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here