ರ‍್ಯಾಪರ್, ಸಿಂಗರ್​, ಕಂಪೋಸರ್​ ALL OK ‘ಹೌಸ್‌ ಪಾರ್ಟಿ’ ವೀಡಿಯೊ ಆಲ್ಬಂ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ‘ಕಿರಿಕ್​ ಶಂಕರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದು, ಹಾಡು ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.

ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್​ನಲ್ಲಿ ಸದಾ ಸುದ್ದಿಯಲ್ಲಿರುವ ರ‍್ಯಾಪರ್, ಸಿಂಗರ್​, ಕಂಪೋಸರ್​ ALL OK ಅಲಿಯಾಸ್​ ಅಲೋಕ್​ ಇದೀಗ ‘ಹೌಸ್​ ಪಾರ್ಟಿ’ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಈ ಹಾಡಿನ ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣ ಅವರದ್ದೆ. “ಕೋವಿಡ್​ ಸಮಯದಲ್ಲಿನ ಕಾನ್ಸೆಪ್ಟ್‌ವೊಂದರಿಂದ ಪ್ರೇರಣೆ ಪಡೆದು ‘ಹೌಸ್​ ಪಾರ್ಟಿ’ ಸಾಂಗ್‌ ಹೊರತಂದಿದ್ದೇನೆ. ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್​ ರೆಸಾರ್ಟ್​ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ” ಎನ್ನುತ್ತಾರೆ ಅಲೋಕ್‌.

“ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್​ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ” ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘ಕಿರಿಕ್​ ಶಂಕರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ನನ್ನ ಮೊದಲ ಆಲ್ಬಂ. ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್​ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು” ಎನ್ನುವುದು ಅದ್ವಿಕಾ ಮಾತು. ಆಕಾಶ್‌ ಜೋಷಿ ಈ ಆಲ್ಬಂ ಸಾಂಗ್‌ಗೆ ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here