ನಟಿ ಪ್ರಿಯಾಂಕಾ ಚೋಪ್ರಾ ಅವರು ದಕ್ಷಿಣ ಏಷ್ಯಾ ಸಿನಿಮಾ ಸೆಲೆಬ್ರೇಟ್‌ ಮಾಡುವ pre-oscar ಇವೆಂಟ್‌ ಹೋಸ್ಟ್‌ ಮಾಡಿದ್ದಾರೆ. ನಿನ್ನೆ ನಡೆದ ಇವೆಂಟ್‌ನಲ್ಲಿನ ಅವರ ಮಾತುಗಳ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಭಾರತ ಮೂಲದ ಗ್ಲೋಬಲ್‌ ಐಕಾನ್‌ ಪ್ರಿಯಾಂಕಾ ಚೋಪ್ರಾ South Asian excellence ಸೆಲೆಬ್ರೇಟ್‌ ಮಾಡುವ pre-oscar ಹೋಸ್ಟ್‌ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಲಿವುಡ್‌ನ ಬೆವೆರ್ಲಿ ಹಿಲ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮಿಂಡಿ ಕಾಲಿಂಗ್‌, ಕುಮೈಲ್‌ ನಂಜಿಯಾನಿ, ಅಂಜುಲಾ ಆಚಾರಿಯಾ, ಬೇಲಾ ಬಜಾರಿಯಾ, ಮನೀಷ್‌ ಕೆ. ಗೋಯಾ ಮತ್ತು ಶ್ರುತಿ ಗಂಗೂಲಿ ಕೂಡ ಪಾಲ್ಗೊಂಡು ಮಾತನಾಡಿದರು. ಇವೆಂಟ್‌ನಲ್ಲಿ ಮಾತನಾಡಿದ ಪ್ರಿಯಾಂಕಾ ದಶಕದ ತಮ್ಮ ಹಾಲಿವುಡ್‌ ಜರ್ನೀಯನ್ನು ಸ್ಮರಿಸಿದರು. ಕಪ್ಪು ಸೀರೆಯಲ್ಲಿ ಗಮನ ಸೆಳೆದ ಪ್ರಿಯಾಂಕಾರ ಫೋಟೊ, ವೀಡಿಯೋಗಳನ್ನು ಅವರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇವೆಂಟ್‌ನಲ್ಲಿ ಹಾಲಿವುಡ್‌ ಜರ್ನೀ ಕುರಿತು ಪ್ರಿಯಾಂಕಾ ಮಾತನಾಡುತ್ತಾ, “ದಶಕದ ಹಿಂದೆ ಹಾಲಿವುಡ್‌ನಲ್ಲಿ ಕೆಲಸ ಮಾಡಬೇಕೆಂದು ನಾನು ಇಲ್ಲಿಗೆ ಬಂದಾಗ ನನಗೆ ಅಜೀಜ್‌ ಅನ್ಸಾರಿ ಪರಿಚಿತರಾದರು. ಪಾರ್ಟಿ ಹಾಲ್‌ನಲ್ಲಿ ಎಷ್ಟು ಮಂದಿ ‘ಬ್ರೌನ್‌ ಪೀಪಲ್‌’ ಇದ್ದಾರೆಂದು ನೋಡಿದೆವು. ಅಲ್ಲಿದ್ದುದು ನಾನು ಮತ್ತು ಅಜೀಜ್‌ ಇಬ್ಬರೇ. ಪರಸ್ಪರರನ್ನು ಅಭಿನಂದಿಸಿಕೊಂಡ ಇಬ್ಬರೂ ಅಲ್ಲಿದ್ದವರನ್ನು ಪರಿಚಯಿಸಿಕೊಂಡೆವು. ಬದಲಾದ ದಿನಗಳಲ್ಲಿ ನಾನು ನಿಮ್ಮೆಲ್ಲರೊಂದಿಗೆ ನಿಂತಿದ್ದೇನೆ. ಇದೊಂದು ಭಾವುಕ ಸನ್ನಿವೇಶ” ಎಂದ ನಟಿ ತಮ್ಮ ಮಾತು ಮುಗಿಸಿ ನಟ ರಿಝ್‌ ಅಹ್ಮದ್‌ರನ್ನು ಮಾತನಾಡಲು ವೇದಿಕೆಗೆ ಆಹ್ವಾನಿಸಿದರು.

ಮತ್ತೊಂದು ವೀಡಿಯೋ ಕ್ಲಿಪಿಂಗ್‌ ಹೊರಬಿದ್ದಿದ್ದು ಅದರಲ್ಲಿ ಪ್ರಿಯಾಂಕಾ ಈ ಇವೆಂಟ್‌ ಕುರಿತಂತೆ ‘amazing Idea’ ಎಂದಿದ್ದಾರೆ. ಸೌತ್‌ ಏಷ್ಯಾ ನಾಮಿನೀಗಳನ್ನು ಅವರು ಅಭಿನಂದಿಸಿ ಶುಭಾಶಯ ಕೋರಿದ್ದಾರೆ. Best Documentary Feature ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವ ಭಾರತದ ‘Writing With Fire’ ತಂಡದ ರಿಂತು ಥಾಮಸ್‌, ಸುಶ್ಮಿತ್‌ ಘೋಷ್‌ ಮತ್ತು ಅನುರಿಮಾ ಭಾರ್ಗವ ಅವರೂ ಇವೆಂಟ್‌ನಲ್ಲಿ ಭಾಗವಹಿಸಿದ್ದರು. UTA, ದಿ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ಸ್‌ ಆರ್ಟ್ಸ್‌ ಅಂ ಸೈನ್ಸಸ್‌, ಜಾನಿ ವಾಕರ್‌, ಸೌಥ್‌ ಏಷ್ಯನ್‌ ಆರ್ಟ್ಸ್‌ ರೆಲಿಲೆನ್ಸೀ ಫಂಡ್‌ ಆಫ್‌ ದಿ ಇಂಡಿಯಾ ಸೆಂಟರ್‌ ಮತ್ತು ದಿ ಜಗ್ಗರ್‌ನಾಟ್‌ ಸಹಯೋಗದಲ್ಲಿ ಇವೆಂಟ್‌ ಆಯೋಜನೆಗೊಂಡಿತ್ತು.

Previous articleಕಲ್ಯಾಣ್‌ ದಾಸರಿ ‘ಅಧೀರ’ ಲಾಂಚ್‌; ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ‘RRR’ ಟೀಮ್‌
Next articleಪ್ರಥಮ್‌ ‘ನಟ ಭಯಂಕರ’ ಆಡಿಯೋ ಬಿಡುಗಡೆ; ಮೇ 13ರಂದು ಸಿನಿಮಾ ತೆರೆಗೆ

LEAVE A REPLY

Connect with

Please enter your comment!
Please enter your name here