ಹರೀಶ್‌ ರಾಜ್‌ ನಟಿಸಿ, ನಿರ್ದೇಶಿಸಿರುವ ‘ಪ್ರೇತ’ ಸಿನಿಮಾ ಫೆಬ್ರವರಿ 23ರಂದು ತೆರೆಕಾಣುತ್ತಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಹಾರರ್‌ – ಥ್ರಿಲ್ಲರ್‌ ಸಿನಿಮಾ. ಅಮೂಲ್ಯ ಭಾರದ್ವಾಜ್‌ ಮತ್ತು ಅಹಿರಾ ಶೆಟ್ಟಿ ಚಿತ್ರದ ಇಬ್ಬರು ನಾಯಕಿಯರು.

ಹರೀಶ್‌ ರಾಜ್‌ ನಟಿಸಿ, ನಿರ್ದೇಶಿಸಿರುವ ‘ಪ್ರೇತ’ ಸಿನಿಮಾ ಫೆಬ್ರವರಿ 23ರಂದು ಥಿಯೇಟರ್‌ಗೆ ಬರುತ್ತಿದೆ. ಹರೀಶ್‌ ರಾಜ್‌ ಈ ಹಿಂದೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಮೂರು ವರ್ಷಗಳ ನಂತರ ‘ಪ್ರೇತ’ ಚಿತ್ರದ ನಿರ್ದೇಶನದೊಂದಿಗೆ ಅವರು ತೆರೆಗೆ ಬರುತ್ತಿದ್ದಾರೆ. ಇದೊಂದು ಹಾರರ್‌ – ಥ್ರಿಲ್ಲರ್‌ ಸಿನಿಮಾ. ಚಿತ್ರದಲ್ಲಿ ಹರೀಶ್‌ ರಾಜ್‌ ಅವರಿಗೆ ಅಮೂಲ್ಯ ಭಾರದ್ವಾಜ್‌, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಬಿ ಎಂ ವೆಂಕಟೇಶ್‌, ಅಮಿತ್‌ ಇತರೆ ಪ್ರಮುಖ ಪಾತ್ರಧಾರಿಗಳು. ಹರೀಶ್‌ ರಾಜ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ತಯಾರಾಗಿರುವ ಚಿತ್ರಕ್ಕೆ ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನವಿದೆ. ಪ್ರಮೋದ್ ಮರವಂತೆ ಹಾಡುಗಳನ್ನು ರಚಿಸಿದ್ದಾರೆ. ಶಾಲಿನಿ ಆರ್ಟ್ಸ್‌ನಡಿ ಜಾಕ್ ಮಂಜು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here