ನಟಿ ಪರಿಣೀತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್‌ ಚಡ್ಡಾ ವಿವಾಹ ನಿನ್ನೆ (ಸೆಪ್ಟೆಂಬರ್‌ 24) ಉದಯಪುರದ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ನೆರವೇರಿದೆ. ವಿವಿಧ ಕ್ಷೇತ್ರಗಳ ಹಲವು ಖ್ಯಾತನಾಮರು ವಿವಾಹ ಮಹೋತ್ಸವದಲ್ಲಿ ಹಾಜರಿದ್ದು ದಂಪತಿಗೆ ಶುಭಹಾರೈಸಿದ್ದಾರೆ.

ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್‌ ಚಡ್ಡಾ ವಿವಾಹ ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ಜರುಗಿದೆ. ಅನೇಕ ಸೆಲೆಬ್ರಿಟಿಗಳು ಇವರ ಮದುವೆಗೆ ಹಾಜಾರಾಗಿ ನವದಂಪತಿಗೆ ಶುಭ ಹಾರೈಸಿದ್ದಾರೆ. ನಿನ್ನೆ (ಸೆಪ್ಟೆಂಬರ್ 24) ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದ ಫೋಟೋಗಳನ್ನು ಪರಿಣಿತಿ ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಸೆಪ್ಟೆಂಬರ್ 22ರಂದು ಉದಯಪುರಕ್ಕೆ ಆಗಮಿಸಿದ್ದರು. ಮದುವೆಗೂ ಮೊದಲು ಮೆಹಂದಿ, ಅರಿಶಿಣ ಶಾಸ್ತ್ರಗಳು ನಡೆದಿವೆ. ಆ ಬಳಿಕ ಮದುವೆ ಕಾರ್ಯ ನಡೆದಿದೆ. ಲೀಲಾ ಪ್ಯಾಲೇಸ್ ಹೋಟೆಲ್ ಸಮೀಪದ ಸರೋವರದ ಮಧ್ಯೆ ಈ ಮದುವೆ ನಡೆದಿದೆ. ಈ ಜೋಡಿ ಬೋಟ್ ಮೂಲಕ ಮಂಟಪಕ್ಕೆ ತೆರಳಿ, ಮಧ್ಯಾಹ್ನ 3:30ರ ಸುಮಾರಿಗೆ ಮಾಂಗಲ್ಯಧಾರಣೆ ನೆರವೇರಿದ್ದು, 4 ಗಂಟೆ ಸುಮಾರಿಗೆ ಸಪ್ತಪದಿ ತುಳಿದಿದ್ದಾರೆ. ಕ್ರಿಕೆಟರ್‌ ಹರ್ಭಜನ್ ಸಿಂಗ್, ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗ್ವಂತ್ ಮಾನ್ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ವಿವಾಹದಲ್ಲಿ ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದ್ದಾರೆ.

LEAVE A REPLY

Connect with

Please enter your comment!
Please enter your name here