ಇತ್ತೀಚೆಗೆ ಬಿಡುಗಡೆಯಾದ ‘ದಿ ಮ್ಯಾಟ್ರಿಕ್ಸ್‌ ರಿಸರಕ್ಷನ್ಸ್‌’ ಇಂಗ್ಲಿಷ್‌ ಚಿತ್ರದ ಟ್ರೈಲರ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿದ್ದರು. ಅವರ ಪಾತ್ರದ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ನಿರ್ಮಾಣ ಸಂಸ್ಥೆ ಪೋಸ್ಟರ್ ರಿಲೀಸ್ ಮಾಡಿದ್ದು, ಪ್ರಿಯಾಂಕಾ ಚಿತ್ರದಲ್ಲಿನ ಮಹತ್ವದ ‘ಸ್ಯಾಟಿ’ ಪಾತ್ರ ನಿರ್ವಹಿಸುತ್ತಿರುವುದು ಖಚಿತವಾಗಿದೆ.

ವಾರ್ನರ್ ಬ್ರದರ್ಸ್‌ ಸಂಸ್ಥೆ ಇಂದು ‘ದಿ ಮ್ಯಾಟ್ರಿಕ್ಸ್‌ ರಿಸರಕ್ಷನ್ಸ್‌’ ಕೊರಿಯನ್‌ ಅವತರಣಿಕೆಯ ಪೋಸ್ಟರ್ ಬಿಡುಗಡೆ ಮಾಡಿದೆ. ಇದು ಚಿತ್ರದಲ್ಲಿನ ಪ್ರಿಯಾಂಕಾ ಚೋಪ್ರಾ ಕ್ಯಾರಕ್ಟರ್ ಪೋಸ್ಟರ್‌. ಪೋಸ್ಟರ್ ಪ್ರಕಾರ ಚಿತ್ರದಲ್ಲಿ ಪ್ರಿಯಾಂಕಾ ಅವರು ಸ್ಯಾಟಿ ಪಾತ್ರ ನಿರ್ವಹಿಸುವುದು ಖಾತ್ರಿಯಾಗಿದೆ. 2003ರ ‘ದಿ ಮ್ಯಾಟ್ರಿಕ್ ರೆವಲ್ಯೂಷನ್ಸ್‌’ನಲ್ಲಿ ಬಾಲೆಯಾಗಿದ್ದ ‘ಸ್ಯಾಟಿ’ ಈ ಸರಣಿಯಲ್ಲೀಗ ಹರೆಯದ ಯುವತಿ (ಪ್ರಿಯಾಂಕಾ). ಈ ಮೊದಲು ಅವರ ಪಾತ್ರವನ್ನು ಗೋಪ್ಯವಾಗಿಡಲಾಗಿತ್ತು. ಚಿತ್ರದ ಟ್ರೈಲರ್ ವೀಕ್ಷಿಸಿದ ಸಿನಿಪ್ರಿಯರು ಈ ಬಗ್ಗೆ ಚರ್ಚೆ ನಡೆಸಿದ್ದರು. ಪ್ರಿಯಾಂಕಾ ಕೂಡ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಪೋಸ್ಟರ್ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಈ ಸೈನ್ಸ್ ಫಿಕ್ಷನ್ ಸರಣಿಯ ಮೊದಲ ಮೂರು ಚಿತ್ರಗಳನ್ನು ಲಾನಾ ಮತ್ತು ಲಿಲ್ಲಿ ನಿರ್ದೇಶಿಸಿದ್ದರು. ವಾರ್ನರ್ ಬ್ರದರ್ಸ್ ನಿರ್ಮಾಣದ ಈ ಸರಣಿಯ ಕೊನೆಯ ‘ದಿ ಮ್ಯಾಟ್ರಿಕ್ಸ್‌ ರಿಸರಕ್ಷನ್ಸ್‌’ ಚಿತ್ರವನ್ನು ವಾಕೋಸ್ಕಿ ನಿರ್ದೇಶಿಸಿದ್ದಾರೆ. ಯಾಹ್ಯಾ ಅಬ್ದುಲ್, ಕ್ಯಾರಿ ಅನ್ನೇ ಮಾಸ್‌, ಜೆಸ್ಸಿಕಾ ಹೆನ್ವಿಕ್‌, ಜೊನಾಥನ್‌ ಗ್ರಾಫ್‌, ನೀಲ್ ಪ್ಯಾಟ್ರಿಕ್ ಹ್ಯಾರಿಸ್‌, ಜೇಡ್ ಪಿಂಕೆಟ್ ಸ್ಮಿತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Previous articleಟೀಸರ್ | ಗ್ಯಾಂಗ್‌ಸ್ಟರ್‌ ಶಾನ್ವಿ ಶ್ರೀವಾತ್ಸವ್, ‘ಡ್ಯಾಡಿ’ ರಘು ದೀಕ್ಷಿತ್; ಇದು ಆಕ್ಷನ್ – ಥ್ರಿಲ್ಲರ್ ಸಿನಿಮಾ
Next articleಟ್ರೈಲರ್ | ಮೋಹನ್‌ಲಾಲ್ ‘ಮರಕ್ಕರ್’; ಐತಿಹಾಸಿಕ ಸಿನಿಮಾದ ಅಗಾಧತೆಯನ್ನು ಸಾರುವ ದೃಶ್ಯಾವಳಿ

LEAVE A REPLY

Connect with

Please enter your comment!
Please enter your name here