‘ನಿಳಲ್ ತರುಂ’ ನಿರ್ದೇಶಕ ರಿಚರ್ಡ್ ಅಂಟೋನಿಯು ಕಿರುಚಿತ್ರದಲ್ಲಿ ಕಟ್ಟಿಕೊಳ್ಳಬೇಕಾದ ಶಿಸ್ತುಬದ್ಧ ಚಿತ್ರಕತೆ ಮತ್ತು ಅದಕ್ಕೆ ಮೋಸವಾಗದಂತೆ ಹೇಳಬೇಕಾದ ನಿಪುಣತೆ ಎರಡನ್ನೂ ಪ್ರದರ್ಶಿಸಿದ್ದಾರೆ – ‘Putham Pudhu Kaalai Vidiyaadhaa’ ತಮಿಳು ಆಂಥಾಲಜಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಮೊದಲ ಬಾರಿ ಸಾಹಸಕ್ಕೆ ಕೈಹಾಕಿ ಅದು ವಿಫಲವಾದರೆ ಮತ್ತೊಂದಕ್ಕೆ ಕೈ ಹಾಕುವುದಿಲ್ಲ. ಅಥವಾ ಎರಡನೇ ಪ್ರಯತ್ನದಲ್ಲಿ ಎಚ್ಚರಿಕೆಯಿಂದ ಪ್ರಯೋಗ ಮಾಡುತ್ತಾರೆ. ಅಲ್ಲಿಯೂ ಎಡವಿದರೆ? putham pudhu kaalai vidiyaadha ಲಾಕ್‌ಡೌನ್‌ ಕಾಲದ ಕತೆಗಳನ್ನುಳ್ಳ ಎರಡನೇ ಕಥಾ ಸಂಗಮವೂ ಸೋತಿದೆ. ಮೊದಲನೆಯ ಸರಣಿಯ ದೋಷಗಳಿಂದ ಇವರು ಪಾಠ ಕಲಿತಂತಿಲ್ಲ.

ಆದರೆ ಇಲ್ಲಿನ ‘ಲೋನರ್ಸ್’ ಅಧ್ಯಾಯದಲ್ಲಿ ಅಭಿನಯಿಸಿರುವ ಲಿಜ್ ಮೋಲ್ ಜೋಸ್ (‘ಜೈ ಭೀಮ್’ ಸಿನಿಮಾದ ಸೆಂಗಣ್ಣಿ ನೆನಪಿಯದೆಯೇ) ಮತ್ತು ನಾಲ್ಕನೇ ಅಧ್ಯಾಯ ‘ನಿಳಲ್ ತರುಂ ಇದಂ’ನಲ್ಲಿ ಐಶ್ವರ್ಯಾ ಲಕ್ಷ್ಮಿ ಈ ಬಾರಿಯ ಪ್ರಯೋಗ ತಿರಸ್ಕಾರಗೊಳ್ಳದಂತೆ ಕಾಪಾಡಿದ್ದಾರೆ. ಇವರಿಬ್ಬರೂ ಇಲ್ಲದೇ ಹೋಗಿದ್ದರೆ ಆಂಥಾಲಜಿ ನೀರಸವಾಗುತ್ತಿತ್ತು. ಲಿಜ್ ಮೋಲ್ ಮತ್ತೊಮ್ಮೆ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಪಾರ್ವತಿ, ಮಂಜು ವಾರಿಯರ್‌ರಂತಹ ನಟಿಯರನ್ನು ಹಿಂದಿಕ್ಕಬಲ್ಲರು.

‘ನಿಳಲ್ ತರುಂ’ ನಿರ್ದೇಶಕ ರಿಚರ್ಡ್ ಅಂಟೋನಿಯು ಕಿರುಚಿತ್ರದಲ್ಲಿ ಕಟ್ಟಿಕೊಳ್ಳಬೇಕಾದ ಶಿಸ್ತುಬದ್ಧ ಚಿತ್ರಕತೆ ಮತ್ತು ಅದಕ್ಕೆ ಮೋಸವಾಗದಂತೆ ಹೇಳಬೇಕಾದ ನಿಪುಣತೆ ಎರಡನ್ನೂ ಪ್ರದರ್ಶಿಸಿದ್ದಾರೆ. ಮನಸ್ಸಿನ ಒಳಗಿನ ಪಯಣ ಮತ್ತು ಲೌಕಿಕ ಬದುಕಿನ ಪಯಣ ಎರಡೂ ಸಾಮ್ಯವನ್ನು ಹೊಂದಿಲ್ಲದಿದ್ದರೆ ಉಂಟಾಗುವ ಪರಸ್ಪರ ಡಿಕ್ಕಿ ಹೊಡೆಯುವ ಆ ತುಮುಲಗಳನ್ನು ಮೂವತ್ತು ನಿಮಿಷಗಳಲ್ಲಿ ಹೇಳಿರುವುದು ಚೆಂದವೆನಿಸುತ್ತದೆ. ಪ್ರಯತ್ನಿಸಿದ್ದರೆ ಉತ್ತಮ ಪ್ರಯೋಗವಾಗಬಹುದಾಗಿತ್ತು ಎನ್ನುವ ಭಾವನೆ ಮೂಡುವುದು ಸಹ ಆ ಪ್ರಯತ್ನದ ಗೆಲವು. ಹೀಗಾಗಿ ರಿಚರ್ಡ್, Putham Pudhu Kaalai Vidiyaadhaa ವನ್ನು ಗುಟುಕು ಗುಟುಕು ನೀರು ಕೊಟ್ಟು ಕೋಮಾದಿಂದ ಪಾರುಮಾಡಿದ್ದಾರೆ.

Previous articleಒಂದಾನೊಂದು ಕಾಲದಲ್ಲಿ ಇಬ್ಬರು ರಾಜರಿದ್ದರು…
Next articleಅಗ್ನಿ ಶ್ರೀಧರ್ ಸಾರಥ್ಯದ ಸಿನಿಮಾ ‘ಕ್ರೀಂ’; ಸಂಯುಕ್ತ ಹೆಗಡೆ ಹಿರೋಯಿನ್‌

LEAVE A REPLY

Connect with

Please enter your comment!
Please enter your name here