ಮಲ್ಟಿಪ್ಲೆಕ್ಸ್‌ಗಳಿಗೆ ಜನರನ್ನು ಸೆಳೆಯಲು PVR INOX ಹೊಸದೊಂದು ಯೋಜನೆ ಆರಂಭಿಸಿದೆ. ‘PVR INOX Passport’ ಶೀರ್ಷಿಕೆಯಡಿಯ ಈ ಯೋಜನೆಯಲ್ಲಿ ಒಂದು ತಿಂಗಳಲ್ಲಿ 699 ರೂಪಾಯಿಗೆ 10 ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. ಇದಕ್ಕೆ ಹಲವು ಷರತ್ತುಗಳೂ ಇವೆ.

PVR INOX Passport 699 ರೂಪಾಯಿಗೆ 10 ಸಿನಿಮಾ ನೋಡುವ ಆಫರ್‌ ನೀಡಿದೆ. ಆದರೆ ಈ ಪಾಸ್‌ಪೋರ್ಟ್‌ಗೆ ಇರುವ ಷರತ್ತುಗಳನ್ನು ನೋಡಿದಾಗ ಇದು ಎಷ್ಟು ಉಪಯುಕ್ತ ಎನ್ನುವ ಪ್ರಶ್ನೆಯೂ ಮೂಡಿದೆ. PVR INOX ನಂತಹ ಮಲ್ಟಿಫ್ಲೆಕ್ಸ್‌ಗಳಲ್ಲಿ ತಿಂಗಳಿಗೊಮ್ಮೆ ಅಥವಾ ಅಪರೂಪಕ್ಕೊಮ್ಮೆ ಸಿನಿಮಾ ನೋಡುವ ಅಭ್ಯಾಸ ಸಾಕಷ್ಟು ಜನರಿಗಿದೆ. ಆದರೆ ಅಲ್ಲಿ ಟಿಕೆಟ್‌, ಆಹಾರ, ಪಾನೀಯ ಎಲ್ಲವೂ ದುಬಾರಿ. ಅಲ್ಲದೆ ಇತ್ತೀಚೆಗೆ OTTಯಲ್ಲೇ ಸಾಕಷ್ಟು ಹೊಸ ಸಿನಿಮಾಗಳು ದೊರಯುತ್ತಿರುವುದರಿಂದ ಸಾಕಷ್ಟು ಜನರು ಚಿತ್ರಮಂದಿರಗಳಿಂದ ದೂರ ಉಳಿಯುತ್ತಿದ್ದಾರೆ. ಈ ರೀತಿ ಚಿತ್ರಮಂದಿರದಿಂದ ದೂರ ಉಳಿಯುವ ಗ್ರಾಹಕರನ್ನು ಸೆಳೆಯಲು PVR ಹೊಸ ಯೋಜನೆಯೊಂದನ್ನು ರೂಪಿಸಿದೆ. ಅದರ ಹೆಸರು PVR INOX Passport.‌ ಅಂದರೆ OTT ಚಂದಾದಾರಿಕೆಯಂತೆ ಇದು ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ನೋಡಲು ಚಂದಾದಾರಿಕೆ ಯೋಜನೆಯಾಗಿದೆ.

ಈ ಯೋಜನೆಯ ಷರತ್ತು ಅನ್ವಯಗಳು ಹೀಗಿವೆ..
1) ಈ ಯೋಜನೆ ವೀಕೆಂಡ್ಸ್‌ಗೆ ಅನ್ವಯವಾಗುವುದಿಲ್ಲ. ಸೋಮವಾರದಿಂದ ಶುಕ್ರವಾರದವರೆಗಿನ ಸಿನಿಮಾ
ಪ್ರದರ್ಶನಗಳಿಗೆ ಮಾತ್ರ ಅನ್ವಯವಾಗಲಿದೆ.
2) ಈ ಚಂದಾದಾರಿಕೆ ಯೋಜನೆ ಪಡೆದವರಿಗೆ Imax, Gold, Lux ಮತ್ತು Directors Cut ಮುಂತಾದ
ಪ್ರೀಮೀಯಂ ಸೇವೆಗಳು ದೊರಕುವುದಿಲ್ಲ.
3) ಈ ಚಂದಾದಾರಿಕೆ ಪಾಸ್‌ಪೋರ್ಟ್‌ ಅನ್ನು ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡುವಂತಿಲ್ಲ. ಯಾವ
ಗ್ರಾಹಕ ಖರೀದಿಸಿದ್ದಾನೋ ಆತ ಮಾತ್ರ ಈ ಸೇವೆ ಪಡೆಯಬಹುದು. ಇದಕ್ಕಾಗಿ ಸಬ್‌ಸ್ಕ್ರಿಪ್ಷನ್‌ ಪ್ಲ್ಯಾನ್‌
ಖರೀದಿಸುವಾಗ ಮತ್ತು ಸಿನಿಮಾ ಹಾಲ್‌ ಪ್ರವೇಶಿಸಿದಾಗ ಸರಕಾರ ನೀಡಿದ ಯಾವುದಾದರೂ ಗುರುತಿನ
ಚೀಟಿಯನ್ನು ಪ್ರದರ್ಶಿಸಬೇಕಾಗುತ್ತದೆ.
4) ಈ ಯೋಜನೆಯು 350 ರೂಪಾಯಿಗಿಂತ ಕಡಿಮೆ ದರದ ಟಿಕೆಟ್‌ಗಳಿಗೆ ಮಾತ್ರ ಅನ್ವಯವಾಗಲಿದೆ. ಅದಕ್ಕಿಂತ
ಹೆಚ್ಚು ದರದ ಟಿಕೆಟ್‌ ಖರೀದಿಸಿದರೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ ಎಂದು PVR INOX ತನ್ನ
ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಿದೆ.
5) ಈ ರೀತಿ ಚಂದಾದಾರಿಕೆ ಪಡೆದವರಿಗೆ ವಿವಿಧ ಫುಡ್‌ ಕಾಂಬೋಗಳಲ್ಲಿಯೂ ಆಫರ್‌ ದೊರಕಲಿದೆ. ಈ ಆಫರ್‌
ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅನ್ವಯವಾಗಲಿದೆ.

LEAVE A REPLY

Connect with

Please enter your comment!
Please enter your name here