ಹಿಂದಿ ಕಿರುತೆರೆಯ ಜನಪ್ರಿಯ ನಟ ಶಾಹೀರ್‌ ಶೇಖ್‌ ‘ದೋ ಪಟ್ಟಿ’ ಚಿತ್ರದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕಾಜೋಲ್‌ ಮತ್ತು ಕೃತಿ ಸನೂನ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ಶಶಾಂಕ್‌ ಚತುರ್ವೇದಿ ನಿರ್ದೇಶನದ ಸಿನಿಮಾ ಮುಂದಿನ ವರ್ಷ ತೆರೆಕಾಣಲಿದೆ.

ಹಿಂದಿ ಕಿರುತೆರೆಯ ಜನಪ್ರಿಯ ಕಲಾವಿದ ಶಾಹೀರ್‌ ಶೇಖ್‌ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. Netflix ಇತ್ತೀಚೆಗಷ್ಟೇ ಅನಾವರಣಗೊಳಿಸಿದ್ದ ‘ದೋ ಪಟ್ಟಿ’ ಚಿತ್ರದಲ್ಲಿ ಶಾಹಿರ್‌ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕೃತಿ ಸನೋನ್‌ ಮತ್ತು ಕಾಜೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಶಾಹೀರ್‌ ಈ ಕುರಿತು ಮಾಹಿತಿ ತಿಳಿಸಿದ್ದು, ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ಲೇಖಕಿ ಕನ್ನಿಕಾ ಧಿಲ್ಲೋನ್ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಶಾಹಿರ್‌ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ಶಾಹಿರ್‌ ಈ ಚಿತ್ರದಲ್ಲಿ ನಟಿಸಲಿದ್ದಾರೆಯೇ ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಈಗ ಸ್ವತಃ ಶಾಹಿರ್‌ ಖಚಿತಪಡಿಸಿದ್ದಾರೆ. ಚಿತ್ರದಲ್ಲಿ ಕಾಜೋಲ್‌ ದಿಟ್ಟ ಮಹಿಳೆ ಪಾತ್ರದಲ್ಲಿ ನಟಿಸಿದ್ದರೆ, ಕೃತಿ ಸುಳ್ಳಿನ ಜಾಲದಲ್ಲಿ ಸಿಕ್ಕಿಬಿದ್ದ ಯುವತಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಚಿತ್ರೀಕರಣವನ್ನು ಪ್ರಾರಂಭಿಸಿರುವ ನಟ, ಕನ್ನಿಕಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಅವರನ್ನು ‘ಅದ್ಭುತ ಕಥೆಗಾರ್ತಿ. ಶಶಾಂಕ್ ಚತುರ್ವೇದಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ Blue Butterfly Films ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದೆ’ ಎಂದಿದ್ದಾರೆ. ಸಸ್ಪೆನ್ಸ್ – ಥ್ರಿಲ್ಲರ್ ಸಿನಿಮಾ ಮುಂದಿನ ವರ್ಷ ತೆರೆಕಾಣಲಿದೆ. ಶಾಹೀರ್ ಹಿಂದಿ ಕಿರುತೆರೆ ನಟನಾಗಿ ಮನೆಮಾತಾಗಿದ್ದಾರೆ. ‘ವೋ ತೋ ಹೈ ಅಲ್ಬೆಲಾ’ದಲ್ಲಿ ಕಾಣಿಸಿಕೊಂಡಿದ್ದರು. ‘ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ’ ಟೀವಿ ಶೋನಿಂದ ಹೆಚ್ಚು ಜನಪ್ರಿಯತೆ ಗಳಿಸಿದರು. ಶಾಹೀರ್ ಮತ್ತು ಎರಿಕಾ ಫೆರ್ನಾಂಡಿಸ್ ಅವರ ಕೆಮಿಸ್ಟ್ರಿಯು ಹೆಚ್ಚು ಜನಪ್ರಿಯತೆ ಗಳಿಸಿತು. 2009ರಲ್ಲಿ ‘ಕ್ಯಾ ಮಸ್ತ್ ಹೈ ಲೈಫ್’ ಮೂಲಕ ಟೀವಿಗೆ ಪದಾರ್ಪಣೆ ಮಾಡಿದ ಶಾಹಿರ್ 2013ರ ‘ಮಹಾಭಾರತ’ ಧಾರಾವಾಹಿಯಲ್ಲಿ ‘ಅರ್ಜುನ’ನ ಪಾತ್ರ ನಿರ್ವಹಿಸಿದ್ದರು.

LEAVE A REPLY

Connect with

Please enter your comment!
Please enter your name here