ಪರಶುರಾಮ್‌ ಪೆಟ್ಲ ನಿರ್ದೇಶನದ ‘ಫ್ಯಾಮಿಲಿ ಸ್ಟಾರ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ವಿಜಯ್‌ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಮುಖ್ಯಪಾತ್ರಗಳಲ್ಲಿ ನಟಿಸಿರುವ ಚಿತ್ರವಿದು.

ವಿಜಯ್ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಫ್ಯಾಮಿಲಿ ಸ್ಟಾರ್’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಪರುಶುರಾಮ್‌ ಪೆಟ್ಲ ನಿರ್ದೇಶಿಸಿದ್ದಾರೆ. ಟೀಸರ್‌ನಲ್ಲಿ ಮಕ್ಕಳನ್ನು ಶಾಲೆಗೆ ಬಿಡುತ್ತಿರುವ, ಅಡುಗೆ ಕೆಲಸ ಮಾಡುತ್ತಿರುವ ವಿಜಯ್‌ ಪಾತ್ರವನ್ನು ನೋಡಬಹುದು. ಮನೆಗೆಲಸ ಮಾಡುತ್ತಿರುವುದಕ್ಕೆ ಅವನ ಪುರುಷತ್ವವನ್ನು ಪ್ರಶ್ನಿಸುವ ವ್ಯಕ್ತಿಗೆ, ‘ಮಕ್ಕಳನ್ನು ಶಾಲೆಗೆ ತಯಾರು ಮಾಡುವುದರಿಂದ ಪುರುಷನ ಬೆಲೆ ಕಡಿಮೆಯಾಗುತ್ತದೆಯೇ? ಏನು ಮಾತಾಡ್ತಿದ್ದೀರಾ ನೀವು? ಬ್ಬಿಣದ ರಾಡ್‌ ಮುರಿಯುವುದರಿಂದ ಪುರುಷತ್ವ ಸಾಬೀತಾಗುತ್ತದೆಯೇ’ ಎಂದು ಕಬ್ಬಿಣದ ರಾಡನ್ನು ಮುರಿದು ವ್ಯಕ್ತಿಯೊಬ್ಬನಿಗೆ ಥಳಿಸುತ್ತಾನೆ.

ಈ ಚಿತ್ರದ ಮೂಲಕ ವಿಜಯ್‌ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ರಾಜು ಮತ್ತು ಶಿರೀಷ್ ಸಹನಿರ್ಮಾಣ ಮಾಡಿದ್ದಾರೆ. ಗೋಪಿಸುಂದರ್ ಸಂಗೀತ ಸಂಯೋಜನೆ, ಎ ಎಸ್ ಪ್ರಕಾಶ್ ಕಲಾ ನಿರ್ದೇಶನ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಚಿತ್ರಕ್ಕಿದೆ.‌ ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವಿಜಯ್ ದೇವರಕೊಂಡ ಈ ಹಿಂದೆ ‘ಖುಶಿ’ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮೃಣಾಲ್‌ ಠಾಕೂರ್‌ ‘ಹಾಯ್‌ ನಾನ್ನಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನಿ ಈ ಸಿನಿಮಾದ ಹೀರೋ.

LEAVE A REPLY

Connect with

Please enter your comment!
Please enter your name here