ನಾಸಿರುದ್ದೀನ್‌ ಷಾ ನಿರ್ದೇಶನದ ‘Man Woman Man Woman’ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಎರಡು ತಲೆಮಾರುಗಳ ಪ್ರೀತಿ, ವಿರಸ, ಭಾವನೆಗಳ ಅಭಿವ್ಯಕ್ತಿಯಿದು. ಷಾ ಅವರ ಪತ್ನಿ ರತ್ನಾ ಪಾಠಕ್‌, ಪುತ್ರ ವಿವಾನ್‌ ಷಾ ಜೊತೆ ನಟರಾದ ತರುಣ್‌ ಧನರಾಜಗಿರ್‌ ಮತ್ತು ಸಾಬಾ ಅಜಾದ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹಿರಿಯ ನಟ, ನಿರ್ದೇಶಕ ನಾಸಿರುದ್ದೀನ್ ಶಾ ಅವರು 17 ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಅವರು ‘Man Woman Man Woman’ ಶೀರ್ಷಿಕೆಯ ಹಿಂದಿ ಕಿರುಚಿತ್ರ ನಿರ್ದೇಶಿಸಿದ್ದಾರೆ. ಇದು ಎರಡು ತಲೆಮಾರುಗಳ ಪ್ರೀತಿ, ವಿರಸ, ಭಾವನೆಗಳ ಅಭಿವ್ಯಕ್ತಿ. ಷಾ ರಚಿಸಿರುವ 26 ನಿಮಿಷಗಳ ಈ ಕಿರುಚಿತ್ರವನ್ನು Royal Stag Barrel Select Large Short Filmsನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆಧುನಿಕ ಜಗತ್ತಿನ ಸಂಬಂಧಗಳ ಸಂಕೀರ್ಣತೆಗಳ ಸುತ್ತ ಈ ಕಿರುಚಿತ್ರದ ಕತೆ ಸುತ್ತುತ್ತದೆ. ಷಾ ಅವರ ಪತ್ನಿ ರತ್ನಾ ಪಾಠಕ್ ಷಾ ಮತ್ತು ಮಗ ವಿವಾನ್ ಷಾ ಜೊತೆಗೆ ನಟರಾದ ತರುಣ್ ಧನರಾಜಗಿರ್ ಮತ್ತು ಸಬಾ ಅಜಾದ್ ಕಿರುಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಿರುಚಿತ್ರದ ಬಗ್ಗೆ ಮಾತನಾಡುವ ಷಾ, ‘ಈ ಚಿತ್ರವು ಎರಡು ವಿಭಿನ್ನ ತಲೆಮಾರು ಜೋಡಿಗಳ ಡೇಟಿಂಗ್ ಜೀವನವನ್ನು ತೋರಿಸಲಿದೆ. ಜೋಡಿಗಳಿಬ್ಬರು ಸಾಕಷ್ಟು ಹೊಂದಾಣಿಕೆಯೊಂದಿರುತ್ತಾರೆ. ಆದರೆ ಅಂತಿಮವಾಗಿ ತಮ್ಮನ್ನು ತಾವು ಕಂಡುಕೊಳ್ಳಲು ವಿಫಲರಾಗುತ್ತಾರೆ. ಚಿತ್ರವು ಪ್ರೀತಿ, ಪ್ರಣಯ ಮತ್ತು ಕುಟುಂಬದ ಸಾರವನ್ನು ಒಳಗೊಂಡಿದೆ. ಜೊತೆಗೆ ಹಾಸ್ಯದ ಸಂಭಾಷಣೆಗಳೂ ಇದರಲ್ಲಿವೆ’ ಎಂದಿದ್ದಾರೆ. ನಟಿ ರತ್ನಾ ಪಾಠಕ್ ಷಾ ಅವರು, ‘ಪತಿಯ ನಿರ್ದೇಶನದ ಯೋಜನೆಯ ಭಾಗವಾಗಿದ್ದು ಖುಷಿ ತಂದಿದೆ. ಅವರು ಕತೆಯು ಹೀಗೆಯೇ ಮೂಡಿಬರಲಿದೆ ಎಂಬುದರ ಬಗ್ಗೆ ಸ್ಪಷ್ಟ ಆಲೋಚನೆ ಹೊಂದಿದ್ದರು ಮತ್ತು ನಾವೆಲ್ಲರೂ ಅದೇ ಉದ್ದೇಶದೆಡೆಗೆ ಕೆಲಸ ಮಾಡಿದ್ದೇವೆ. ಕಿರುಚಿತ್ರವು ಆಧುನಿಕ ಸಂಬಂಧಗಳಲ್ಲಿನ ಸುಂದರ ಚಿತ್ರಣವಾಗಿದೆ’ ಎಂದಿದ್ದಾರೆ. ತಮ್ಮ ಪ್ರೇಯಸಿ ಸಬಾ ಅಜಾದ್‌ ನಟಿಸಿರುವ ಈ ಕಿರುಚಿತ್ರದ ಟ್ರೈಲರ್‌ ಹಂಚಿಕೊಂಡಿರುವ ನಟ ಹೃತಿಕ್‌ ರೋಷನ್‌, ‘ಅದರ ಪ್ರತಿ ಬಿಟ್ ಅನ್ನು ಆನಂದಿಸಿದ್ದೇನೆ’ ಎಂದು ತಮ್ಮ Instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here