ಬಾಲ್ಕಿ ನಿರ್ದೇಶನದ ‘ಘೂಮರ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನೈಜ ಘಟನೆ ಆಧರಿಸಿದ ಚಿತ್ರವಿದು. ಅಭಿಷೇಕ್‌ ಬಚ್ಚನ್‌ ಮತ್ತು ಸಯ್ಯಾಮಿ ಖೇರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಆಗಸ್ಟ್‌ 11ರಂದು ತೆರೆಕಾಣಲಿದೆ.

ಅಭಿಷೇಕ್‌ ಬಚ್ಚನ್‌ ಮತ್ತು ಸಯಾಮಿ ಖೇರ್‌ ಅಭಿನಯದ ‘ಘೂಮರ್‌’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ನೈಜ ಘಟನೆಯಾಧಾರಿತ ಚಿತ್ರವನ್ನು ಆರ್‌ ಬಾಲ್ಕಿ ನಿರ್ದೇಶಿಸಿದ್ದಾರೆ. ಹಂಗೇರಿಯನ್‌ ಬಲಗೈ ಶೂಟರ್‌ ಕರೊಲಿ ಟಕಾಕ್ಸ್‌ ಬದುಕು – ಸಾಧನೆ ಈ ಸಿನಿಮಾಗೆ ಸ್ಫೂರ್ತಿ. ಆಕಸ್ಮಿಕವೊಂದರಲ್ಲಿ ಬಲಗೈ ಕಳೆದುಕೊಂಡ ಕರೊಲಿ ಎಡಗೈ ಬಳಸಿ ಎರಡು ಬಾರಿ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಬಾಲ್ಕಿ ಅವರು ‘ಘೂಮರ್‌’ ಸಿನಿಮಾ ಕೈಗೆತ್ತಿಕೊಳ್ಳಲು ಅವರೇ ಸ್ಫೂರ್ತಿ. ಅವರು ಕರೋಲಿ ಕತೆಯನ್ನು ಕ್ರಿಕೆಟ್‌ಗೆ ಅಳವಡಿಸಿ ಕತೆ ಮಾಡಿದ್ದಾರೆ.

ಈ ಕ್ರೀಡಾ ಪ್ರಧಾನ ಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌ ಕೋಚ್‌ ಆಗಿ ಕಾಣಿಸಿಕೊಂಡಿದ್ದು, ಸಯ್ಯಾಮಿ ಖೇರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಸಯ್ಯಾಮಿ ಖೇರ್‌ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಕತೆಯಿದು. ಕಾರು ಅಪಘಾತದಲ್ಲಿ ತನ್ನ ಬಲಗೈ ಕಳೆದುಕೊಂಡ ಆಕೆಗೆ ಕೋಚ್‌ ಅಭಿಷೇಕ್‌ ಬಚ್ಚನ್‌ ಎಡಗೈ ಬಳಸಲು ತರಬೇತಿ ನೀಡುತ್ತಾನೆ. ಇದರಿಂದ ಅವಳಿಗೆ ಟೀಮ್‌ ಇಂಡಿಯಾದಲ್ಲಿ ಆಡಲು ಅವಕಾಶ ಸಿಗುತ್ತದೆ. ಚಿತ್ರದಲ್ಲಿ ಶಬಾನಾ ಅಜ್ಮಿ ಮತ್ತು ಅಂಗದ್‌ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತ್‌ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಆಗಸ್ಟ್‌ 11ರಂದು ಸಿನಿಮಾ ಬಿಡುಗಡೆಯಾಗಲಿದೆ.

Previous articleಆಗಸ್ಟ್‌ 4 | ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಿನಿಮಾ Updates
Next articleಶಿವನ ಸಂದೇಶ ವಾಹಕನಾಗಿ ಅಕ್ಷಯ್‌ ಕುಮಾರ್‌ | ‘OMG 2’ ಟೈಲರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here