ಜನಪ್ರಿಯ ತೆಲುಗು ನಟ ಪ್ರಭಾಸ್ ತಮ್ಮ 25ನೇ ಸಿನಿಮಾ ಘೋಷಿಸಿದ್ದಾರೆ. ‘ಅರ್ಜುನ್‌ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶಿಸಲಿರುವ ಚಿತ್ರಕ್ಕೆ ‘ಸ್ಪಿರಿಟ್‌’ ಎಂದು ನಾಮಕರಣವಾಗಿದೆ.

‘ಬಾಹುಬಲಿ’ ಸರಣಿ ಸಿನಿಮಾಗಳ ನಂತರ ಪ್ರಭಾಸ್‌ ನ್ಯಾಷನಲ್ ಹೀರೋ ಆದರು. ಅವರ ಚಿತ್ರಗಳೀಗ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿವೆ. ಸದ್ಯ ಮೂರು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್‌ ತಮ್ಮ ನಟನೆಯ 25ನೇ ಸಿನಿಮಾ ಘೋಷಿಸಿದ್ದಾರೆ. ಫೇಸ್‌ಬುಕ್‌ ಪೇಜ್‌ನಲ್ಲಿ ತಮ್ಮ ಹೊಸ ಚಿತ್ರದ ಶೀರ್ಷಿಕೆ ಹಾಕಿಕೊಂಡು, ‘Kickstarting my journey with SPIRIT’ ಎಂದಿದ್ದಾರೆ. ಹಿಂದಿ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಸೂಪರ್ ಹಿಟ್‌ ಎನಿಸಿತ್ತು. ಇದರ ಹಿಂದಿ ಅವತರಣಿಕೆ ‘ಕಬೀರ್ ಸಿಂಗ್‌’ ಚಿತ್ರವನ್ನೂ ಸಂದೀಪ್ ಅವರೇ ನಿರ್ದೇಶಿಸಿದ್ದರು. ಇದೀಗ ‘ಸ್ಪಿರಿಟ್‌’ ಚಿತ್ರದೊಂದಿಗೆ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಇನ್ನು ಪ್ರಭಾಸ್‌ ಸದ್ಯ ‘ಸಲಾರ್‌’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ‘ಕೆಜಿಎಫ್‌’ ಖ್ಯಾತಿಯ ಕನ್ನಡಿಗ ಪ್ರಶಾಂತ್ ನೀಲ್‌ ನಿರ್ದೇಶನದ ಚಿತ್ರದ ನಾಯಕಿ ಶ್ರುತಿ ಹಾಸನ್‌. ಮುಂದಿನ ವರ್ಷ ಏಪ್ರಿಲ್‌ 14ಕ್ಕೆ ಈ ಸಿನಿಮಾ ತೆರೆಕಾಣಲಿದೆ. ಇದರ ಜೊತೆಗೆ ಮೈಥಾಲಾಜಿಕಲ್ ಡ್ರಾಮಾ ‘ಆದಿಪುರುಷ್‌’ ಚಿತ್ರದಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ. ಸೈಂಟಿಫಿಕ್ ಫಿಕ್ಷನ್ ಡ್ರಾಮಾ ‘ಪ್ರಾಜೆಕ್ಟ್‌ ಕೆ’ ಅವರ ಮತ್ತೊಂದು ಸಿನಿಮಾ. ಬಹುಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಹಿರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

LEAVE A REPLY

Connect with

Please enter your comment!
Please enter your name here