ಸಚಿನ್‌ ಶೆಟ್ಟಿ ನಿರ್ದೇಶನದ ‘ವಸಂತಕಾಲದ ಹೂಗಳು’ ಚಿತ್ರದ ನಾಯಕಿಯಾಗಿ ರಾಧಾ ಭಗವತಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಕನ್ನಡ ಕಿರುತೆರೆಯ ಜನಪ್ರಿಯ ‘ರಾಮಾಚಾರಿ’ ಸೀರಿಯಲ್‌ನಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್‌ಗಳಲ್ಲೊಂದು ‘ರಾಮಾಚಾರಿ’. ಈ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ರಾಧಾ ಭಗವತಿ ವೀಕ್ಷಕರಿಗೆ ಚಿರಪರಿಚಿತರು. ರಾಧಾ ಭಗವತಿ ಅವರಿಗೆ ಸಿನಿಮಾ ಅವಕಾಶ ಒದಗಿಬಂದಿದ್ದು, ‘ವಸಂತಕಾಲದ ಹೂಗಳು’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕ ಸಚಿನ್‌ ಶೆಟ್ಟಿ ಅವರು ಚಿತ್ರದಲ್ಲಿ ಟೀನೇಜ್‌ ಪ್ರೇಮಕಥೆಯನ್ನು ಹೇಳಲು ಹೊರಟಿದ್ದಾರೆ. ಬಿಜಾಪುರ ಮೂಲದವರಾದ ರಾಧಾ ಭಗವತಿ ಈ ಚಿತ್ರದಲ್ಲಿ ‘ಸುಮಾ’ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಚಿತ್ರದ ಹೆಸರೇ ನನಗೆ ಆಪ್ತವೆನಿಸಿತು. ಇನ್ನು ಕಥೆ ಕೇಳಿದಾಗಲಂತೂ ಮೂರ್ನಾಲ್ಕು ದಿನಗಳ ಕಾಲ ಆ ಗುಂಗಿನಲ್ಲೇ ಇದ್ದೆ. ಖಂಡಿತ ಚಿತ್ರ ನೋಡಿದವರಿಗೆ ತಮ್ಮ ಕಾಲೇಜು ದಿನಗಳ ನೆನಪು ಮರುಕಳಿಸದೇ ಇರದು. ನಟನೆಗೆ ಹೆಚ್ಚು ಅವಕಾಶ ಇರುವಂಥ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಿದೆ. ಸಿನಿಪ್ರಿಯರ ಪ್ರತಿಕ್ರಿಯೆಗೆ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ರಾಧಾ ಭಗವತಿ.

Previous articleಮಲಯಾಳಂನಲ್ಲಿ ಸೆ. 22ರಿಂದ ‘ಟೋಬಿ’ | ರಾಜ್‌ ಬಿ ಶೆಟ್ಟಿ ಸಿನಿಮಾ
Next articleತರುಣ್‌ ಸುಧೀರ್‌ ‘ಕಾಟೇರ’ ಚಿತ್ರೀಕರಣ ಮುಕ್ತಾಯ | ದರ್ಶನ್‌ – ಆರಾಧನಾ ಸಿನಿಮಾ

LEAVE A REPLY

Connect with

Please enter your comment!
Please enter your name here