ರಾಜ್‌ ಬಿ ಶೆಟ್ಟಿ ಅಭಿನಯದ ‘ಟೋಬಿ’ ಸಿನಿಮಾದ ಮಲಯಾಳಂ ಡಬ್ಬಿಂಗ್‌ ಅವತರಣಿಕೆ ಸೆಪ್ಟೆಂಬರ್‌ 22ರಂದು ಬಿಡುಗಡೆಯಾಗುತ್ತಿದೆ. ಆಗಸ್ಟ್‌ 25ರಂದು ತೆರೆಕಂಡಿದ್ದ ಕನ್ನಡ ಅವತರಣಿಕೆಗೆ ವಿಶ್ಲೇಷಕರು ಹಾಗೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ರಾಜ್‌ ಬಿ ಶೆಟ್ಟಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದ ‘ಟೋಬಿ’ ಸಿನಿಮಾ ಆಗಸ್ಟ್‌ 25ರಂದು ರಾಜ್ಯಾದ್ಯಂತ ತೆರೆಕಂಡಿತ್ತು. ಬೇಸಿಲ್‌ ಅಲ್ಚಲಕ್ಕಲ್‌ ನಿರ್ದೇಶನದ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಪ್ರಯೋಗ. ಟಿ ಕೆ ದಯಾನಂದ ಅವರ ಮೂಲ ಕತೆಯನ್ನು ರಾಜ್‌ ಬಿ ಶೆಟ್ಟಿ ವಿಸ್ತರಿಸಿ ಚಿತ್ರಕಥೆ ಹೆಣೆದಿದ್ದರು. ಥಿಯೇಟರ್‌ಗೆ ಬಂದ ಸಿನಿಮಾಗೆ ಪ್ರೇಕ್ಷಕರು ಹಾಗೂ ವಿಶ್ಲೇಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದ ಕಲಾವಿದರ ಅಭಿನಯದ ಬಗ್ಗೆ ಮೆಚ್ಚುಗೆ ಸಿಕ್ಕಿತಾದರೂ ಸಿನಿಮಾ ಆಗಿ ಪ್ರಯೋಗಕ್ಕೆ ಸಂಪೂರ್ಣ ಮನ್ನಣೆ ಸಿಗಲಿಲ್ಲ. ಇದೀಗ ಸಿನಿಮಾದ ಮಲಯಾಳಂ ಅವತರಣಿಕೆ ತೆರೆಗೆ ಬರುತ್ತಿದೆ. ಮುಂದಿನ ವಾರ ಸೆಪ್ಟೆಂಬರ್‌ 22ರಂದು ಚಿತ್ರದ ಮಲಯಾಳಂ ಅವತರಣಿಕೆ ಬಿಡುಗಡೆಯಾಗುತ್ತಿದೆ. ನಟ ರಾಜ್‌ ಬಿ ಶೆಟ್ಟಿ ಅವರು ಬಿಡುಗಡೆ ದಿನಾಂಕ ಮತ್ತು ಚಿತ್ರದ ಮಲಯಾಳಂ ಪೋಸ್ಟರ್‌ ಅನ್ನು ಟ್ವೀಟ್‌ ಮಾಡಿದ್ದಾರೆ.

Previous article‘ಹಮ್ ತೋ ದೀವಾನೆ’ ಟೀಸರ್‌ | ಎಲ್ವಿಶ್ ಯಾದವ್, ಊರ್ವಶಿ ರೌಟೇಲಾ ಮ್ಯೂಸಿಕ್‌ ವೀಡಿಯೊ
Next articleರಾಧಾ ಭಗವತಿ ‘ವಸಂತಕಾಲದ ಹೂಗಳು’ ನಾಯಕಿ | ‘ರಾಮಾಚಾರಿ’ ಸೀರಿಯಲ್‌ ನಟಿ

LEAVE A REPLY

Connect with

Please enter your comment!
Please enter your name here