‘ರಾಧೆ ಶ್ಯಾಮ್’ ಚಿತ್ರಕ್ಕೆ ಕೋಟಿ ಕೋಟಿ ಹಣ ಸುರಿಯಲಾಗಿದೆ. ಪ್ರತಿದೃಶ್ಯವನ್ನೂ ಕಣ್ಣಿಗೆ ಹಬ್ಬ ಎನ್ನುವಂತೆ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ರಿಚ್‌ನೆಸ್‌ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಆದರೆ ಒಂದು ಸಿನಿಮಾವಾಗಿ ಜನರಿಗೆ ಕನೆಕ್ಟ್ ಆಗುವಲ್ಲಿ ಸೋತಿದೆ. ಲವ್‌ಸ್ಟೋರಿಗಳಿಗೆ ಇರಬೇಕಾದ ಎಮೋಷನ್ ಚಿತ್ರದಲ್ಲಿ ಮಿಸ್ ಆಗಿದೆ.

ಪ್ರಭಾಸ್ – ಪೂಜಾ ಹೆಗಡೆ ನಟನೆಯ ರೊಮ್ಯಾಂಟಿಕ್ ಕಹಾನಿ ‘ರಾಧೆ ಶ್ಯಾಮ್’. ‘ಸಾಹೋ’ ನಂತರ ರಿಲೀಸ್ ಆಗಿರೋ ಪ್ರಭಾಸ್ ನಟನೆಯ ಮೆಗಾ ಬಜೆಟ್ ಸಿನಿಮಾ. ಅನೌನ್ಸ್ ಆದಾಗಿನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ‘ರಾಧೆ ಶ್ಯಾಮ್’ಗಾಗಿ ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿದ್ದರು. ಆ ಶುಭಗಳಿಗೆ ಈಗ ಬಂದಿದೆ. ‘ರಾಧೆ ಶ್ಯಾಮ’ನ ಲವ್ ಕಹಾನಿ ತೆರೆ ಮೇಲೆ ಅರಳಿದೆ. ಈಗಾಗಲೇ ಹೇಳಿಕೊಂಡಂತೆ ‘ರಾಧೆ ಶ್ಯಾಮ್’ ಕಂಪ್ಲೀಟ್ ಲವ್ ಸ್ಟೋರಿ. ಆಕ್ಷನ್ ಇಮೇಜ್‌ನಿಂದ ಹೊರಬಂದು ಪಕ್ಕಾ ಲವರ್ ಬಾಯ್ ಆಗಿ ಪ್ರಭಾಸ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಸಿನಿಮಾಗಳು ಅಂದ್ಮೇಲೆ ಅಲ್ಲಿ ಮಸಾಲೆ, ಕಮರ್ಷಿಯಲ್ ಅಂಶಗಳು ಇರಲೇಬೇಕು. ಆದ್ರೆ ‘ರಾಧೆ ಶ್ಯಾಮ್’ ಸಿನಿಮಾ ಒಂದು ಕ್ಲಾಸ್ ಸಿನಿಮಾ. ಮಾಸ್ ಎಲಿಮೆಂಟ್‌ಗಳಿಗೆ ಇಲ್ಲಿ ಜಾಗವಿಲ್ಲ.

‘ರಾಧೆ ಶ್ಯಾಮ್’ ಸಿನಿಮಾದ ನೋಡುಗರ ಮನಸ್ಥಿತಿಯನ್ನು ಸೆಟ್ ಮಾಡೋ ಸಲುವಾಗಿ, ರಿಲೀಸ್‌ಗೆ ಮುನ್ನವೇ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್‌ಗಳು ಇರುವುದಿಲ್ಲ ಎಂದು ಹೇಳಲಾಗಿತ್ತು. ಅದರಂತೆ ಚಿತ್ರದಲ್ಲಿ ಮೈನವಿರೇಳಿಸುವ ಆಕ್ಷನ್ ಬ್ಲಾಕ್‌ಗೆ ಅವಕಾಶವೇ ಇಲ್ಲ. ತೀರಾ ಸರಳ ಲವ್ ಸ್ಟೋರಿಯನ್ನು ಅಷ್ಟೇ ಸರಳವಾದ ಚಿತ್ರಕಥೆಯ ಮೂಲಕ ಕಟ್ಟಿಕೊಡಲಾಗಿದೆ. ರಾಧಾಕೃಷ್ಣ ಅವರ ಚಿತ್ರಕಥೆಯಲ್ಲಿ ಅಷ್ಟೇನೂ ತಿರುವುಗಳಿಲ್ಲ, ಏರಿಳಿತಗಳಿಲ್ಲ. ಸಮತಟ್ಟಾದ ರಸ್ತೆಯಲ್ಲಿ ವಾಹನ ಚಲಿಸಿದಂತೆ ಚಿತ್ರಕತೆ ಸಾಗುತ್ತೆ ಅನ್ನೋದು ‘ರಾಧೆ ಶ್ಯಾಮ್’ ಸಿನಿಮಾದ ಮೈನಸ್ ಪಾಯಿಂಟ್.

‘ಬಾಹುಬಲಿ’ ಸಿರೀಸ್ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ‘ಸಾಹೋ’ ಮೂಲಕ ಅದನ್ನು ಉಳಿಸಿಕೊಂಡಿದ್ರು. ಅವರ ಸ್ಟಾರ್ ಇಮೇಜ್‌ನ ಬಂಡವಾಳವಾಗಿಸಿಕೊಂಡೇ ‘ರಾಧೆ ಶ್ಯಾಮ್’ ಚಿತ್ರಕ್ಕೆ ಕೋಟಿ ಕೋಟಿ ಹಣ ಸುರಿಯಲಾಗಿದೆ. ಪ್ರತಿದೃಶ್ಯವನ್ನೂ ಕಣ್ಣಿಗೆ ಹಬ್ಬ ಎನ್ನುವಂತೆ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಇಟಲಿಯ ಸುಂದರ ತಾಣಗಳು ಕಣ್ಣುಕೋರೈಸುವಂತಿವೆ. ‘ರಾಧೆ ಶ್ಯಾಮ್’ ನಿಜಕ್ಕೂ ರಿಚ್‌ನೆಸ್‌ನ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಆದರೆ ಒಂದು ಸಿನಿಮಾವಾಗಿ ಜನರಿಗೆ ಕನೆಕ್ಟ್ ಆಗುವಲ್ಲಿ ಸೋತಿದೆ. ಲವ್‌ಸ್ಟೋರಿಗಳಿಗೆ ಇರಬೇಕಾದ ಎಮೋಷನ್ ಚಿತ್ರದಲ್ಲಿ ಮಿಸ್ ಆಗಿದೆ. ನಾಯಕ ಪ್ರಭಾಸ್, ನಾಯಕಿ ಪೂಜಾ ಹೆಗಡೆ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ರೂ, ಜೋಡಿಯಾಗಿ ಅವರಿಬ್ಬರ ಕೆಮಿಸ್ಟ್ರೀ ವರ್ಕೌಟ್ ಆಗಿಲ್ಲ. ಇಬ್ಬರ ಪ್ರೇಮದಲ್ಲಿ ಆ ಡೀಪ್‌ನೆಸ್ ಇಲ್ಲ. ಪ್ಯೂರ್ ಲವ್ ಸ್ಟೋರಿಯನ್ನು ಒಳಗೊಂಡಿದ್ರೂ ಸಹ ಎಲ್ಲೂ ಕಾಡುವಂತಹ ದೃಶ್ಯಗಳಿಲ್ಲ. ಥಿಯೇಟರ್‌ನಿಂದ ಆಚೆ ಬಂದ ಮೇಲೆ ನೆನಪಲ್ಲಿ ಉಳಿಯೋ ದೃಶ್ಯಗಳಿಲ್ಲ. ಅಷ್ಟೇ ಏಕೆ ಥಿಯೇಟರ್‌ನಲ್ಲಿದ್ದಷ್ಟು ಹೊತ್ತು ಎಂಟರ್‌ಟೇನ್‌ ಮಾಡೋ ಅಂಶಗಳು ಸಹ ಸಿನಿಮಾದಲ್ಲಿ ಸಾಕಷ್ಟಿಲ್ಲ.

ಇನ್ನು ಲವ್‌ಸ್ಟೋರಿ ಅಂದ್ಮೇಲೆ ಮ್ಯೂಸಿಕ್‌ಗೆ ಇಂಪಾರ್ಟೆನ್ಸ್ ಇರುತ್ತೆ. ಶಾರುಖ್‌ – ಕಾಜೋಲ್‌ರ ‘ಡಿಡಿಎಲ್‌ಜೆ’ಯಿಂದ ಹಿಡಿದು ಕನ್ನಡದ ‘ಮುಂಗಾರು ಮಳೆ’ ತನಕ ಎಲ್ಲಾ ಲವ್‌ಸ್ಟೋರಿಗಳು ಗೆದ್ದಿರೋದು ಸುಂದರ ಸುಮಧುರ ಹಾಡುಗಳಿಂದ್ಲೇ. ಆದ್ರೆ ಈ ಚಿತ್ರದಲ್ಲಿ ಒಂದೇ ಒಂದು ಹಾಡು ಕೂಡ ಮಧುರ, ಅತಿಮಧುರ ಎಂದು ಗುನುಗುವಂತಿಲ್ಲ. ಥಿಯೇಟರ್‌ನಿಂದ ಆಚೆ ಬಂದ ಮೇಲೂ ಕಾಡುವಷ್ಟು ಇಂಪ್ಯಾಕ್ಟ್ ಮಾಡೋದಿಲ್ಲ. ಹೀಗಾಗಿ ‘ರಾಧೆ ಶ್ಯಾಮ್’ ಎಲ್ಲಾ ವರ್ಗವನ್ನೂ ಮೆಚ್ಚಿಸೋದು ತುಂಬಾ ಕಷ್ಟ. ಹಾಗಂತ ಬಾಲ್ಕನಿ ಆಡಿಯೆನ್ಸ್‌ಗೂ ಸಹ ಇದು ಫುಲ್ ಮೀಲ್ಸ್ ಏನಲ್ಲ. 350 ಕೋಟಿ ರೂಪಾಯಿ ಭಾರಿ ಬಜೆಟ್‌ನ ಈ ಸಿನಿಮಾದಲ್ಲಿ ಕ್ಯಾಮೆರಾ ವರ್ಕ್ ಹಾಗೂ ಸೆಟ್ ವರ್ಕ್ ಅಷ್ಟೇ ಅದ್ಭುತ ಅನಿಸೋದು. ಆದ್ರೆ ಒಂದೊಳ್ಳೆಯ ಸಿನಿಮಾಗೆ ಬೇಕಾಗಿರೋ ಮೇನ್‌ ಎಲಿಮೆಂಟ್ಸೇ ಮಿಸ್ ಆಗಿರೋದ್ರಿಂದ ಮನೋಜ್ ಅವರ ಕ್ಯಾಮೆರಾ ಕೆಲಸ, ಕಲಾ ನಿರ್ದೇಶಕ ರವೀಂದರ್ ಕಲಾ ಕೌಶಲ್ಯ ಸಹ ಈ ಸಿನಿಮಾವನ್ನು ಕಾಪಾಡೋದಿಲ್ಲ. ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡೋಕೆ ಸಹಕಾರಿಯಾಗೋದಿಲ್ಲ.

ಹ್ಯಾಂಡ್‌ಸಮ್ ಹಂಕ್, ಆರಡಿ ಅಜಾನುಬಾಹು ಪ್ರಭಾಸ್ ಇಲ್ಲಿ ಪಕ್ಕಾ ಕೂಲ್, ಸ್ಟೈಲಿಶ್ ಅವತಾರದಲ್ಲಿ ಕಂಗೊಳಿಸಿದ್ದಾರೆ. ಆಕ್ಷನ್ ಇಮೇಜ್‌ನಲ್ಲಿ ಅಬ್ಬರಿಸಿದ್ದ, ಬಾಹುಬಲ ತೋರಿಸಿದ್ದ ಅಮರೇಂದ್ರ ಬಾಹುಬಲಿ ಇಲ್ಲಿ ಕೂಲ್ ಲವರ್ ಬಾಯ್ ಆಗಿ ಕ್ಲಾಸ್ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಭಿಮಾನಿಗಳಿಗೆ ಇದು ಖುಷಿ ಕೊಡೋದಕ್ಕಿಂತ ಬೇಸರ ತರಿಸೋದೆ ಹೆಚ್ಚು. ಸಪೂರ ಸುಂದರಿ ಪೂಜಾ ಹೆಗಡೆ ಗ್ಲಾಮರ್‌ಗಷ್ಟೇ ಸೀಮಿತಾವಾಗಿಲ್ಲ.. ಪ್ರೇರಣಾ ಪಾತ್ರಕ್ಕೆ ಸಾಕಷ್ಟು ತೂಕ ಇದೆ. ಇಡೀ ಸಿನಿಮಾದುದ್ದಕ್ಕೂ ಕಾಣಿಸಿಕೊಳ್ಳುವಷ್ಟು ಸ್ಪೇಸ್ ಇದೆ. ಪರ್ಫಾಮೆನ್ಸ್ ತೋರಿಸೋಕೆ ಸ್ಕೋಪ್ ಇದೆ. ಪೂಜಾ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಕೂಡ. ಆದರೆ ಇಡೀ ಸಿನಿಮಾದಲ್ಲಿ ಇವರಿಬ್ಬರನ್ನು ಬಿಟ್ಟು ಯಾರಿದ್ದಾರೆ ಅಂದ್ರೆ ಟೈಟಲ್ ಕಾರ್ಡ್ ನೋಡಿ ಖುಷಿಪಡಬೇಕು ಅಷ್ಟೇ. ಯಾಕೆಂದರೆ ಯಾರ ಪಾತ್ರಕ್ಕೂ ಅಂತಹ ಸ್ಕೋಪ್ ಇಲ್ಲ. ತೆರೆಮೇಲೆ ಸ್ಪೇಸ್ ಇಲ್ಲ.

LEAVE A REPLY

Connect with

Please enter your comment!
Please enter your name here