ಲಿಜೋ ಜೋಸ್‌ ಪೆಲ್ಲಿಸ್ಸೆರಿ ನಿರ್ದೇಶನದ ‘ಮಲೈಕೋಟ್ಟೈ ವಾಲಿಬನ್‌’ ಮಲಯಾಳಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಮೋಹನ್‌ ಲಾಲ್‌ ನಟಿಸಿರುವ ಬಹುನಿರೀಕ್ಷಿತ ಚಿತ್ರವಿದು. ಸೋನಾಲಿ ಕುಲಕರ್ಣಿ, ಕಥಾ ನಂದಿ, ಡ್ಯಾನಿಶ್ ಸೇಟ್, ಮನೋಜ್ ಮೋಸೆಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ನಾಳೆ (ಜ. 25) ತೆರೆಕಾಣಲಿದೆ.

ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮಲೈಕೋಟ್ಟೈ ವಾಲಿಬನ್’ ಮಲಯಾಳಂ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿ, ರಚಿಸಿದ್ದು, ಪಿಎಸ್ ರಫೀಕ್ ಸಹ ರಚಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡುವ ಸಾಹಸಮಯ ದೃಶ್ಯಗಳನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಹರೀಶ್ ಪೆರಾಡಿಯ ಧ್ವನಿಯಲ್ಲಿ ಕೇಳಿಬರುವ ಅಶರೀರವಾಣಿಯು ‘ಗೆಲುವಿಗಿಂತ ದೊಡ್ಡ ಸಂಭ್ರಮವಿಲ್ಲ. ನಾನು ಉಲ್ಲಾಸದಲ್ಲಿ ಕಳೆದುಹೋಗಿದ್ದೆ, ಆ ಕ್ಷಣದಲ್ಲಿ ಅಡಗಿರುವ ವಿಶ್ವಾಸಘಾತುಕತನದ ಅರಿವು ನನಗಾಗಲಿಲ್ಲ’ ಎನ್ನುತ್ತದೆ. ದಬ್ಬಾಳಿಕೆ ನಡೆಸುತ್ತಿರುವ ಬ್ರಿಟಿಷ್ ಆಡಳಿತಗಾರರು ತಮ್ಮ ವಿರುದ್ಧ ಮಾತನಾಡುವವರನ್ನು ಹೇಗೆ ಕ್ರೂರವಾಗಿ ಕಗ್ಗೊಲೆ ಮಾಡುತ್ತಾರೆ. ಎಂಬುದನ್ನು ಟ್ರೇಲರ್‌ ತೆರೆದಿಟ್ಟಿದೆ. ಇದು ಕೊನೆಯ ಹಂತಕ್ಕೆ ತಲುಪಿದಾಗ ಜನರು ಹಿಂಸೆ ತಾಳಲಾರದೆ ಅವರಿಂದ ಮುಕ್ತಿ ಹೊಂದಲು ತಮ್ಮನ್ನು ರಕ್ಷಿಸುವವನ ಕಡೆಗೆ ನೋಡುತ್ತಾರೆ. ಈ ದಂಗೆಗಳನ್ನು ಮುನ್ನಡೆಸಲು ಮೋಹನ್‌ಲಾಲ್ ಯುದ್ಧದಲ್ಲಿ ಪಾಲ್ಗೊಳ್ಳುವುದನ್ನು ಕಾಣಬಹುದು.

ಚೆನ್ನೈ ಮತ್ತು ಪುದುಚೇರಿಯಲ್ಲಿ ಸುಮಾರು 130 ದಿನಗಳ ಕಾಲ ಚಿತ್ರೀಕರಣಗೊಂಡ ಚಿತ್ರದಲ್ಲಿ ಸೋನಾಲಿ ಕುಲಕರ್ಣಿ, ಕಥಾ ನಂದಿ, ಡ್ಯಾನಿಶ್ ಸೇಟ್, ಮನೋಜ್ ಮೋಸೆಸ್ ಮತ್ತು ಮಣಿಕಂದನ್ ಆಚಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಧು ನೀಲಕಂದನ್ ಅವರ ಛಾಯಾಗ್ರಹಣ, ಪ್ರಶಾಂತ್ ಪಿಳ್ಳೈ ಸಂಗೀತ ಸಂಯೋಜನೆ ಮತ್ತು ದೀಪು ಜೋಸೆಫ್ ಸಂಕಲನ ಚಿತ್ರಕ್ಕಿದೆ. John & Mary Creative, Max Labs ಮತ್ತು Century Film ಬ್ಯಾನರ್‌ ಅಡಿಯಲ್ಲಿ ಶಿಬು ಬೇಬಿ ಜಾನ್, ಅಚ್ಚು ಬೇಬಿ ಜಾನ್, ವಿಕ್ರಮ್ ಮೆಹ್ರಾ, ಸಿದ್ಧಾರ್ಥ್ ಆನಂದ್ ಕುಮಾರ್, ಎಂಸಿ ಫಿಲಿಪ್ ಮತ್ತು ಜಾಕೋಬ್ ಬಾಬು ಚಿತ್ರ ನಿರ್ಮಿಸಿದ್ದಾರೆ. ಜನವರಿ 25ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here