ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ‘ಟೋಬಿ’ ಸಿನಿಮಾದಲ್ಲಿನ ರಾಜ್‌ ಬಿ ಶೆಟ್ಟಿ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಟಿ ಕೆ ದಯಾನಂದ್‌ ಕತೆಗೆ ರಾಜ್‌ ಶೆಟ್ಟಿ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಬೇಸಿಲ್‌ ಅಲ್ಚಕ್ಕಲ್‌ ನಿರ್ದೇಶಿಸುತ್ತಿರುವ ಸಿನಿಮಾ ಆಗಸ್ಟ್‌ 25ರಂದು ತೆರೆಕಾಣಲಿದೆ.

‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ತಣ್ಣನೆಯ ಭೂಗತ ಜಗತ್ತಿನ ಕತೆ ಹೇಳಿದ ರಾಜ್‌ ಬಿ ಶೆಟ್ಟಿ ಈಗ ‘ಟೋಬಿ’ ಚಿತ್ರದೊಂದಿಗೆ ತೆರೆಗೆ ಬರುತ್ತಿದ್ದಾರೆ. ಚಿತ್ರದ ಬಗ್ಗೆ ಅವರು ಹೆಚ್ಚೇನೂ ಮಾಹಿತಿ ಬಿಟ್ಟುಕೊಡುತ್ತಿಲ್ಲ. ನೈಜ ಘಟನೆ ಆಧರಿಸಿ ಟಿ ಕೆ ದಯಾನಂದ್‌ ಅವರು ರಚಿಸಿರುವ ಕತೆ ಸಿನಿಮಾ ಆಗುತ್ತಿದೆ. ರಾಜ್‌ ಶೆಟ್ಟಿ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದು ನಿರ್ದೇಶನದ ಹೊಣೆಯನ್ನು ಬೇಸಿಲ್‌ ಅಲ್ಚಕ್ಕಲ್‌ ಅವರ ಹೆಗಲಿಗೆ ಹೊರಿಸಿದ್ದಾರೆ. ಚಿತ್ರದ ಶೀರ್ಷಿಕೆ ಮೂಲಕ ಗಮನ ಸೆಳೆದಿದ್ದ ಅವರು ಈಗ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಗೊಳಿಸಿದ್ದಾರೆ. ಬಳೆಯಷ್ಟು ದೊಡ್ಡದ ಮೂಗುತಿ ಧರಿಸಿ, ಬೆಂಕಿಯುಗುಳುವ ಕಣ್ಗಳ ಭಯಂಕರ ಲುಕ್‌ನಲ್ಲಿ ರಾಜ್‌ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಚಿತ್ರದ ಬಗ್ಗೆ ತಾವು ದೊಡ್ಡ ನಿರೀಕ್ಷೆ ಹೊಂದಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಆಗಸ್ಟ್‌ 25ರಂದು ಸಿನಿಮಾ ತೆರೆಕಾಣಲಿದೆ.

ಚಿತ್ರದಲ್ಲಿ ನಾಯಕಿಯರಾಗಿ ಸಂಯುಕ್ತಾ ಹೊರನಾಡು, ಚೈತ್ರಾ ಜೆ ಆಚಾರ್‌ ನಟಿಸುತ್ತಿದ್ದಾರೆ. ಮಿಥುನ್‌ ಮುಕುಂದನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಜ್‌ ಬಿ ಶೆಟ್ಟಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ‘ಟೋಬಿ’ ಮೇಕಿಂಗ್‌ ವೀಡಿಯೋಗಳು ಗಮನ ಸೆಳೆಯುತ್ತಿವೆ. ಅವರು ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ತೆರೆಗೆ ಸಿದ್ಧವಾಗುತ್ತಿದೆ. ನಟಿ ರಮ್ಯ ನಿರ್ಮಾಣದ ಚಿತ್ರವಿದು. ರಾಜ್‌ ಶೆಟ್ಟಿ ಅವರ ಮತ್ತೊಂದು ಸಿನಿಮಾ ‘ರುಧಿರಂ’ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಮಲಯಾಳಂ ಚಿತ್ರದ ನಾಯಕಿಯಾಗಿ ಅಪರ್ಣಾ ಬಾಲಮುರಳಿ ಅಭಿನಯಿಸಿದ್ದಾರೆ.

Previous article‘ಕೀಡಾ ಕೋಲಾ’ ಟೀಸರ್‌ | ತರುಣ್‌ ಭಾಸ್ಕರ್‌ ಮತ್ತು ಬ್ರಹ್ಮಾನಂದಂ ಕ್ರೈಂ – ಕಾಮಿಡಿ
Next article‘ಚಂದ್ರಮುಖಿ 2’ ನೂತನ ಪೋಸ್ಟರ್‌ | ರಾಘವ ಲಾರೆನ್ಸ್‌ – ಕಂಗನಾ ಸಿನಿಮಾ ಸೆಪ್ಟೆಂಬರ್‌ 19ಕ್ಕೆ

LEAVE A REPLY

Connect with

Please enter your comment!
Please enter your name here