ತರುಣ್‌ ಭಾಸ್ಕರ್‌ ಮತ್ತು ಬ್ರಹ್ಮಾನಂದಂ ಪ್ರಮುಖ ಪಾತ್ರಗಳಲ್ಲಿರುವ ಕ್ರೈಂ – ಕಾಮಿಡಿ ‘ಕೀಡಾ ಕೋಲಾ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ. ಚಿತ್ರದ ಹೀರೋ ತರುಣ್‌ ಭಾಸ್ಕರ್‌ ಅವರೇ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸಿನಿಮಾ ಹಲವು ಭಾಷೆಗಳಲ್ಲಿ ತೆರೆಕಾಣಲಿದೆ.

ತರುಣ್ ಭಾಸ್ಕರ್ ನಟಿಸಿ, ನಿರ್ದೇಶಿಸಿರುವ ‘ಕೀಡಾ ಕೋಲಾ’ ತೆಲುಗು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಿನಿಮಾವು ಕ್ರೈಮ್‌ ಹಿನ್ನೆಲೆಯಲ್ಲಿ ನಡೆಯುವ ಹಾಸ್ಯಮಯ ಕಥಾ ಹಂದರ. ‘ಪೆಳ್ಳಿ ಚೂಪುಲು’, ‘ಈ ನಾಗರನಿಕಿ ಈಮೈಂದಿ’, ಮತ್ತು ‘ಪಿತ್ತ ಕಥೆಗಳು’ ಸಿನಿಮಾಗಳಿಂದ ಹೆಸರು ಮಾಡಿರುವ ನಿರ್ದೇಶಕ ತರುಣ್ ಭಾಸ್ಕರ್ ಹಾಗೂ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ನಿರೀಕ್ಷೆ ಮೂಡಿಸಿದೆ. ವಿ ಜಿ ಸೈನ್ಮಾ ಬ್ಯಾನರ್‌ ಅಡಿ ಭರತ್‌ ಕುಮಾರ್‌, ಶ್ರೀಪಾದ್‌ ನಂದಿರಾಜ್‌ ಕೌಶಿಕ್‌, ಸಾಯಿಕೃಷ್ಣ ಗದ್ವಾಲ್‌ ಮತ್ತು ವಿಜಯಕುಮಾರ್ ಚಿತ್ರ ನಿರ್ಮಿಸಿದ್ದಾರೆ. ತರುಣ್‌ ಭಾಸ್ಕರ್‌ ತಮ್ಮ Instagamನಲ್ಲಿ ಟೀಸರ್‌ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕೋಕೋ ಕೋಲಾ ಬಾಟಲಿಯು ಹೆಚ್ಚಾಗಿ ಕಾಣಿಸುತ್ತದೆ. ಪ್ರಣಯ್ ಕೊಪ್ಪಳ, ರಮ್ಯಾ ಕಾಕುಮನು ಮತ್ತು ಶಾಂತನ್ ರಾಜ್ ಚಿತ್ರಕ್ಕೆ ಕತೆ ಬರೆದಿದ್ದಾರೆ. ಮೂಲ ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

LEAVE A REPLY

Connect with

Please enter your comment!
Please enter your name here