ಪಿ ವಾಸು ನಿರ್ದೇಶನದ ‘ಚಂದ್ರಮುಖಿ 2’ ತಮಿಳು ಸಿನಿಮಾದ ನೂತನ ಪೋಸ್ಟರ್‌ ರಿಲೀಸ್‌ ಆಗಿದೆ. ರಾಘವ ಲಾರೆನ್ಸ್‌ ಮತ್ತು ಕಂಗನಾ ರನಾವತ್‌ ನಟನೆಯ ಹಾರರ್‌ – ಥ್ರಿಲ್ಲರ್‌ ಚಿತ್ರವಿದು. ಸೆಪ್ಟೆಂಬರ್‌ 19ರಂದು ಸಿನಿಮಾ ತೆರೆಗೆ ಬರುವ ಸುದ್ದಿಯೂ ಹೊರಬಿದ್ದಿದೆ.

ಕಂಗನಾ ರನಾವತ್‌ ಮತ್ತು ರಾಘವ ಲಾರೆನ್ಸ್‌ ಅಭಿನಯದ ‘ಚಂದ್ರಮುಖಿ 2’ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಸುದೀರ್ಘ ಅವಧಿಯಿಂದ ಚಿತ್ರೀಕರಣಗೊಳ್ಳುತ್ತಿರುವ ಚಿತ್ರವಿದು. ಹೀರೋ ರಾಘವ ಲಾರೆನ್ಸ್‌ ಬಾಗಿಲಿನ ಸಣ್ಣ ರಂಧ್ರದಿಂದ ಇಣುಕಿ ನೋಡುತ್ತಿರುವ ಚಿತ್ರವನ್ನೊಳಗೊಂಡ ಪೋಸ್ಟರ್‌ ಬಿಡುಗಡೆಯಾಗಿದೆ. ಸಿನಿಮಾ ಸೆಪ್ಟೆಂಬರ್‌ 19ರಂದು ತೆರೆಕಾಣಲಿರುವ ಸುದ್ದಿಯೂ ಈ ಪೋಸ್ಟರ್‌ ಜೊತೆಗೆ ಹೊರಬಿದ್ದಿದೆ. ತಮ್ಮ ಮುಂದಿನ ಚಿತ್ರ ‘ಚಂದ್ರಮುಖಿ 2’ ಗಣೇಶ ಚತುರ್ಥಿಯಂದು ಬಿಡುಗಡೆಯಾಗಲಿದೆ ಎಂದು ನಾಯಕಿ ಕಂಗನಾ ತಮ್ಮ Instagram ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ʼಚಂದ್ರಮುಖಿʼ ಚಿತ್ರವು ಕನ್ನಡದ ‘ಆಪ್ತಮಿತ್ರ’ ಸಿನಿಮಾದ ರಿಮೇಕ್‌. ಇದು ಏಪ್ರಿಲ್‌ 14. 2005ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ರಜನಿಕಾಂತ್‌ ಮತ್ತು ಜ್ಯೋತಿಕಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ವಿಷ್ಣುವರ್ಧನ್‌, ರಮೇಶ್‌ ಪ್ರೇಮಾ, ಸೌಂದರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಆಪ್ತಮಿತ್ರ’ ಕನ್ನಡ ಚಿತ್ರದ ರೀಮೇಕಿದು. ‘ಚಂದ್ರಮುಖಿ’ ಚಿತ್ರವನ್ನು ನಿರ್ದೇಶಿಸಿದ್ದ ಪಿ ವಾಸು ಅವರೇ ‘ಚಂದ್ರಮುಖಿ 2’ ಚಿತ್ರದ ಸಾರಥ್ಯ ವಹಿಸಿದ್ದಾರೆ. ಲೈಕಾ ನಿರ್ಮಾಣ ಸಂಸ್ಥೆಯಡಿ ಸುಭಾಷ್‌ ಕರಣ್‌ ಸಿನಿಮಾ ನಿರ್ಮಿಸುತ್ತಿದ್ದು, ಆಸ್ಕರ್‌ ಪುರಸ್ಕೃತ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ. ಆರ್‌ ಡಿ ರಾಜಶೇಖರ್‌ ಛಾಯಾಗ್ರಹಣ, ಆಂಥೋನಿ ಸಂಕಲನ ಚಿತ್ರಕ್ಕಿದೆ. ಲಕ್ಷ್ಮಿ ಮೆನನ್‌, ಮಹಿಮಾ ನಂಬಿಯಾರ್‌, ರಾಧಿಕಾ ಶರತ್‌, ಸುರೇಶ್‌ ಮೆನನ್‌ ಮುಖ್ಯ ಪಾತ್ರಗಳಲ್ಲಿದ್ದಾರೆ. ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here