ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ನಟಿಸಿರುವ ‘UT69’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರಾಜ್‌ ಕುಂದ್ರಾ ಬದುಕಿನ ನೈಜ ಘಟನೆಗಳೇ ಚಿತ್ರದ ಕಥಾವಸ್ತು. ಸದ್ದಿಲ್ಲದೆ ತಯಾರಾಗಿರುವ ಈ ಸಿನಿಮಾದ ನಿರ್ದೇಶಕಿ ಫರ್ಹಾ ಖಾನ್‌. ಇದೇ ನವೆಂಬರ್‌ 3ರಂದು ಸಿನಿಮಾ ತೆರೆಕಾಣಲಿದೆ.

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ನಟಿಸಿರುವ ಹೊಸ ಹಿಂದಿ ಚಿತ್ರ ‘UT69’ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವು ರಾಜ್‌ ಕುಂದ್ರಾ ಅವರ ನೈಜ ಜೀವನವನ್ನು ಆಧರಿಸಿದ್ದು, ಅವರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಫರ್ಹಾ ಖಾನ್ ನಿರ್ದೇಶಿಸಿದ್ದಾರೆ. 2021ರಲ್ಲಿ ರಾಜ್ ಬಂಧನದ ಬಗ್ಗೆ ಬ್ರೇಕಿಂಗ್ ನ್ಯೂಸ್ ಪ್ರಸಾರವಾಗುವುದರೊಂದಿಗೆ ಟ್ರೇಲರ್‌ ಆರಂಭವಾಗುತ್ತದೆ. ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಕ್ಕಾಗಿ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ರಾಜ್ ಅನುಭವಿಸಿದ ಅನುಭವವನ್ನು ತೋರಿಸಲಾಗಿದೆ. ಶಿಲ್ಪಾ ಶೆಟ್ಟಿ ಪತಿ ಹಾಗೂ ‘ಬಿಗ್ ಬಾಸ್ ಸ್ಪರ್ಧಿ’ ಎಂದು ಗುರುತಿಸಲ್ಪಟ್ಟ ರಾಜ್, ಜೈಲಿನೊಳಗಿನ ಇತರ ಕೈದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಿಂದ ನಿರಂತರ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಅಲ್ಲಿನ ಪರಿಸ್ಥಿತಿ ಮತ್ತು ಜನಗಳಿಗೆ ರಾಜ್‌ ಹೊಂದಿಕೊಳ್ಳಲು ಹರಸಾಹಸ ಪಡುತ್ತಿರುವುದನ್ನೂ ಸಹ ಕಾಣಬಹುದು.

ಅಶ್ಲೀಲ ರೆಕಾರ್ಡಿಂಗ್ ಮಾಡಿದ ಶಂಕೆಯ ಮೇಲೆ ರಾಜ್‌ ಅವರನ್ನು 2021ರಲ್ಲಿ ಬಂಧಿಸಲಾಗಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಅವರಿಗೆ ಜಾಮೀನು ನೀಡಲಾಯಿತು. ಮಾಹಿತಿ ತಂತ್ರಜ್ಞಾನ ಕಾಯಿದೆ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಾಜ್‌ ಬಂಧಿಯಾಗಿದ್ದರು. ಈ ಚಿತ್ರವನ್ನು SVS Studios ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗಿದ್ದು, The Bigger Picture Films ಸಹನಿರ್ಮಾಣವಿದೆ. ಚಿತ್ರಕ್ಕೆ ರಾಜ್‌ ಕುಂದ್ರಾ ಅವರೇ ಕಥೆ ರಚಿಸಿದ್ದಾರೆ. ಶಹನವಾಜ್ ಅಲಿ ಸಂಕಲನ ಮಾಡಿದ್ದಾರೆ. ನವೆಂಬರ್ 3, 2023ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here