ಟಿನು ಸುರೇಶ್‌ ದೇಸಾಯಿ ನಿರ್ದೇಶನದ ‘ಮಿಷನ್ ರಾಣಿಗಂಜ್’ ಹಿಂದಿ ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್‌ ನಾಮನಿರ್ದೇಶನಕ್ಕೆ ಸಲ್ಲಿಸಲಾಗಿದೆ. ಅಕ್ಷಯ್‌ ಕುಮಾರ್‌ ಮುಖ್ಯಪಾತ್ರದಲ್ಲಿರುವ ಚಿತ್ರ 1989ರ ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಗಾರಿಕೆ ದುರಂತ ಆಧರಿಸಿದ ಕಥಾಹಂದರ ಹೊಂದಿದೆ.

ಅಕ್ಷಯ್ ಕುಮಾರ್ ಅಭಿನಯದ ‘ಮಿಷನ್ ರಾಣಿಗಂಜ್’ ಹಿಂದಿ ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್ ನಾಮನಿರ್ದೇಶನಕ್ಕೆ ಸಲ್ಲಿಸಲಾಗಿದೆ. ವಿಮರ್ಶಕರ ಮೆಚ್ಚುಗೆ ಪಡೆದ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಸಿಕ್ಕಿತ್ತು. ಇದು 1989ರಲ್ಲಿ ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಗಾರಿಕೆ ದುರಂತವನ್ನು ಆಧರಿಸಿದ ಸಿನಿಮಾ. ಕಾರ್ಮಿಕರು ಗಣಿಯಲ್ಲಿ ಸಿಲುಕಿದಾಗ ಎಂಜಿನಿಯರ್‌ ಅವರನ್ನು ರಕ್ಷಿಸಿತ ಸಾಹಸಗಾಥೆ. A Pooja Entertainment Production ಬ್ಯಾನರ್ ಅಡಿ ವಶು ಭಗ್ನಾನಿ ಚಿತ್ರ ನಿರ್ಮಿಸಿದ್ದಾರೆ. ವಿಪುಲ್‌ ಕೆ ರಾವಲ್‌ ಚಿತ್ರಕಥೆ, ಆರಿಫ್‌ ಶೇಖ್‌ ಸಂಕಲನ, ಅಸೀಮ್‌ ಮಿಶ್ರಾ ಛಾಯಾಗ್ರಹಣ ಚಿತ್ರಕ್ಕಿದೆ. ಟಿನು ಸುರೇಶ್ ದೇಸಾಯಿ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಪರಿಣೀತಿ ಚೋಪ್ರಾ, ವರುಣ್ ಬಡೋಲಾ, ದಿಬ್ಯೇಂದು ಭಟ್ಟಾಚಾರ್ಯ, ರಾಜೇಶ್ ಶರ್ಮಾ, ಮತ್ತು ವೀರೇಂದ್ರ ಸಕ್ಸೇನಾ ಇದ್ದಾರೆ.

ಇತ್ತೀಚಿನ ದಿನಗಳಲ್ಲಿ ‘ಗಲ್ಲಿ ಬಾಯ್’, ‘ಲಾಸ್ಟ್ ಫಿಲ್ಮ್ ಶೋ’, ‘ಪೆಬಲ್ಸ್’, ‘ಜಲ್ಲಿಕಟ್ಟು’ ಚಲನಚಿತ್ರಗಳು ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನಗೊಂಡಿದ್ದವು. ಕಳೆದ ವರ್ಷದ ಆಸ್ಕರ್‌ನಲ್ಲಿ ‘RRR’ ತೆಲುಗು ಸಿನಿಮಾದ ಗೀತೆಯು ‘ಅತ್ಯುತ್ತಮ ಮೂಲ ಗೀತೆ’ಗಾಗಿ ಅಕಾಡೆಮಿ ಪ್ರಶಸ್ತಿ ಗೆದ್ದುಕೊಂಡಿತು. ಇತಿಹಾಸದಲ್ಲಿ ಕೇವಲ ಮೂರು ಭಾರತೀಯ ಚಲನಚಿತ್ರಗಳು (‘ಮದರ್ ಇಂಡಿಯಾ’, ‘ಸಲಾಮ್ ಬಾಂಬೆ’, ‘ಲಗಾನ್’) ಆಸ್ಕರ್‌ ಅಂತಿಮ ಹಂತದಲ್ಲಿ ಗಮನ ಸೆಳೆದಿದ್ದವು. ‘ರೈಟಿಂಗ್ ವಿತ್ ಫೈರ್’, ಮತ್ತು ‘ಆಲ್ ದಟ್ ಬ್ರೀತ್ಸ್’ ಸಾಕ್ಷ್ಯಚಿತ್ರಗಳಿಗೂ ಈ ಗೌರವ ಸಂದಿತ್ತು. ಕಳೆದ ವರ್ಷ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರಶಸ್ತಿ ಪಡೆದಿದೆ.

LEAVE A REPLY

Connect with

Please enter your comment!
Please enter your name here