ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್‌’ ತಮಿಳು ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಟ್ರೈಲರ್‌ನಲ್ಲಿ ರಜನಿ ಪಾತ್ರದ ಪರಿಚಯವಿದ್ದು, ಅವರು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್‌ 10ರಂದು ಸಿನಿಮಾ ತೆರೆಕಾಣಲಿದೆ.

ರಜನೀಕಾಂತ್‌ ಅಭಿನಯದ ಬಹುನಿರೀಕ್ಷಿತ ‘ಜೈಲರ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಾಯಕನಟನಿಗಿರುವ ವಿಚಿತ್ರ ಕಾಯಿಲೆಯ ಬಗ್ಗೆ ಡಾಕ್ಟರ್‌ ವಿವರಿಸುವುದರೊಂದಿಗೆ ಟ್ರೈಲರ್‌ ಆರಂಭವಾಗುತ್ತದೆ. ‘ಇಂತಹ ರೋಗ ಇರುವವರು ನೋಡಲು ಅಮಾಯಕ ಬೆಕ್ಕಿನಂತೆ ಕಾಣುತ್ತಾರೆ. ಆದರೆ ದಿಢೀರನೆ ಹುಲಿಯಂತೆ ಘರ್ಜಿಸುತ್ತಾರೆ’ ಎಂದು ವಿವರಿಸುತ್ತಾ ನಟನ ಪರಿಚಯ ಮಾಡಿಕೊಡಲಾಗಿದೆ. ಮನೆಯಲ್ಲಿ ಮುಗ್ಧನಂತೆ ಕಾಣುವ ನಾಯಕ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶೂರನಾಗಿ ಕಾಣಿಸುತ್ತಾನೆ. ಚಿತ್ರದಲ್ಲಿ ನಟ ರಜನೀಕಾಂತ್‌ ಮೂರ್ನಾಲ್ಕು ಗೆಟಪ್‌ಗಳಲ್ಲಿದ್ದಾರೆ.

ಸಿನಿಮಾದಲ್ಲಿ ಆಕ್ಷನ್‌ ಜೊತೆಗೆ, ಭಾವನಾತ್ಮಕ ಸನ್ನಿವೇಶಗಳು ಕೂಡಾ ಇವೆ. ಇವುಗಳ ಜೊತೆಗೆ ನಟಿ ರಮ್ಯಕೃಷ್ಣ, ರಜಿನಿಕಾಂತ್‌ ಪತ್ನಿಯಾಗಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ನಟಿಸಿರುವ ನಟ ಶಿವರಾಜಕುಮಾರ್‌ ಮತ್ತು ಮಾಲಿವುಡ್‌ ನಟ ಮೋಹನ್‌ಲಾಲ್‌ರನ್ನು ಟ್ರೈಲರ್‌ನಲ್ಲಿ ತೋರಿಸಿಲ್ಲ ಈ ಮೂಲಕ ನಿರ್ದೇಶಕರು ನಟರ ಪಾತ್ರಗಳನ್ನು ಗೌಪ್ಯವಾಗಿಟ್ಟು ಕುತೂಹಲ ಮೂಡಿಸಿದ್ದಾರೆ. ಸನ್‌ ಪಿಕ್ಚರ್ಸ್‌ ನಿರ್ಮಾಣದ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ. ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ಸುನೀಲ್, ರೆಡಿನ್ ಕಿಂಗ್‌ಸ್ಲೀ, ವಿನಾಯಕನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿರುದ್ಧ ರವಿಂದ್ರನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Previous article‘ಗನ್ಸ್‌ ಅಂಡ್‌ ಗುಲಾಬ್ಸ್‌’ ಟ್ರೈಲರ್‌ | Netflix ಸರಣಿ ಆಗಸ್ಟ್‌ 18ರಿಂದ
Next article‘ಸಂಜೆ ಮೇಲೆ ಹಂಗೆ ಸುಮ್ನೆ ಫೋನು ಮಾಡ್ಲ ನಿಂಗೆ?’ | ‘ಮ್ಯಾಟ್ನಿ’ ಸಿನಿಮಾ ಸಾಂಗ್‌

LEAVE A REPLY

Connect with

Please enter your comment!
Please enter your name here