ರಾಜ್‌ & DK ನಿರ್ದೇಶನದ ‘ಗನ್ಸ್‌ ಅಂಡ್‌ ಗುಲಾಬ್ಸ್‌’ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ದುಲ್ಕರ್‌ ಸಲ್ಮಾನ್‌, ರಾಜಕುಮಾರ್‌ ರಾವ್‌, ಆದರ್ಶ್‌ ಗೌರವ್‌, ಗುಲ್ಶನ್‌ ದೇವಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್‌ 18ರಿಂದ ಸರಣಿ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ದುಲ್ಕರ್‌ ಸಲ್ಮಾನ್‌, ರಾಜಕುಮಾರ್‌ ರಾವ್‌, ಆದರ್ಶ್ ಗೌರವ್ ಮತ್ತು ಗುಲ್ಶನ್‌ ದೇವಯ್ಯ ಪ್ರಮುಖ ಪಾತ್ರಗಳಲ್ಲಿ
ನಟಿಸಿರುವ ‘ಗನ್ಸ್‌ ಅಂಡ್‌ ಗುಲಾಬ್ಸ್’‌ ಹಿಂದಿ ಕಾಮಿಡಿ ಕ್ರೈಮ್‌ ಥ್ರಿಲ್ಲರ್ ವೆಬ್ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. 90ರ ದಶಕದ ಗುಲಾಬ್‌ಗಂಜ್ ಎಂಬ ನಗರದ ಅಪರಾಧ ಮತ್ತು ಹಿಂಸಾಚಾರದ ಜಗತ್ತಿಗೆ ‘ಗನ್ಸ್ ಅಂಡ್ ಗುಲಾಬ್ಸ್‌’ ಸರಣಿಯನ್ನು ಹೊಂದಿಸಲಾಗಿದೆ. ಈ ಸರಣಿಯು 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಟ್ರೆಂಡ್‌ ಆಗಿದ್ದ ಕೆಲವು ಅಂಶಗಳನ್ನು ಮರಳಿ ತೆರೆ ಮೇಲೆ ತರಲಿದೆ. ‘ಕಾಮಿಡಿ, ಆಕ್ಷನ್‌, ಪಲ್ಪ್‌, ಥ್ರಿಲ್‌‌, ಟ್ವಿಸ್ಟ್ ಮತ್ತು ರೊಮ್ಯಾನ್ಸ್ ಇತ್ಯಾದಿ ಹಾಗೂ ಪ್ರೀತಿ ಮತ್ತು ಮುಗ್ಧತೆಯ ಕಥೆಯೊಂದನ್ನು ಒಳಗೊಂಡಿದೆ’ ಎಂದು ಸರಣಿ ಸಿನಾಪ್ಸಿಸ್‌ ಹೇಳುತ್ತದೆ. ‘The Story of Notorious Gangsters’ ಅಡಿಬರಹ ಹೊಂದಿರುವ ಸರಣಿಯ ಟ್ರೈಲರ್‌ನಲ್ಲಿ ನಾಲ್ಕು ಜನ ನಾಯಕ ನಟರು 90ರ ದಶಕದ ಕಥೆಯನ್ನು ಹೇಳಲುಹೊರಟಿದ್ದಾರೆ. ತಿಳಿಹಾಸ್ಯದ ಥ್ರಿಲ್ಲರ್‌ ಸರಣಿ ಎನ್ನುವ ಅಂಶ ಟ್ರೈಲರ್‌ನಲ್ಲಿ ದಾಖಲಾಗುತ್ತದೆ. DR Films ನಿರ್ಮಾಣದ ಸರಣಿಯನ್ನು ರಾಜ್‌ & DK ನಿರ್ದೇಶಿಸಿದ್ದಾರೆ. ಆಗಸ್ಟ್‌ 18ರಿಂದ ಸರಣಿ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಶಿವನ ಸಂದೇಶ ವಾಹಕನಾಗಿ ಅಕ್ಷಯ್‌ ಕುಮಾರ್‌ | ‘OMG 2’ ಟೈಲರ್‌ ಬಿಡುಗಡೆ
Next articleರಜಿನಿಕಾಂತ್‌ ‘ಜೈಲರ್‌’ ಟ್ರೈಲರ್‌ | ಆಗಸ್ಟ್ 10ರಂದು ಸಿನಿಮಾ ತೆರೆಗೆ

LEAVE A REPLY

Connect with

Please enter your comment!
Please enter your name here