ಧ್ರುವ ವಿಕ್ರಂ ಮತ್ತು ಅನುಪಮಾ ಪರಮೇಶ್ವರನ್‌ ಕ್ರೀಡೆಯ ಹಿನ್ನೆಲೆಯ ಕಥಾವಸ್ತುವಿನ ತಮಿಳು ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಜನಪ್ರಿಯ ಕಾಲಿವುಡ್‌ ನಿರ್ದೇಶಕ ಮಾರಿ ಸೆಲ್ವರಾಜ್‌ ನಿರ್ದೇಶಿಸಲಿರುವ ಚಿತ್ರವನ್ನು ಬಾಲಿವುಡ್ ಮೂಲದ Applause Entertainment ಮತ್ತು ಪಾ ರಂಜಿತ್‌ ಒಡೆತನದ Neelam Studios ಜೊತೆಗೂಡಿ ನಿರ್ಮಿಸುತ್ತಿವೆ.

ಮಾರಿ ಸೆಲ್ವರಾಜ್ ನಿರ್ದೇಶಿಸಲಿರುವ ನೂತನ ತಮಿಳು ಸಿನಿಮಾದಲ್ಲಿ ಧ್ರುವ ವಿಕ್ರಂ ಮತ್ತು ಅನುಪಮಾ ಪರಮೇಶ್ವರನ್ ಜೊತೆಯಾಗಿ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಈ ಯೋಜನೆಯನ್ನು ಬಾಲಿವುಡ್ ಮೂಲದ Applause Entertainment, Neelam Studiosನ ಸಹಕಾರದೊಂದಿಗೆ ನಿರ್ಮಿಸುತ್ತಿದೆ. ಈ ಸಿನಿಮಾ ಕ್ರೀಡೆಯ ಕುರಿತಾಗಿದೆ. ವರದಿಗಳ ಪ್ರಕಾರ ಕಬ್ಬಡಿಯನ್ನು ಆಧರಿಸಿದ ಈ ಸಿನಿಮಾ ಒಬ್ಬ ಯುವಕನ ಜೀವನದ ಧೈರ್ಯ ಮತ್ತು ಸಾಹಸದ ಕಥೆಯಾಗಿದೆ. ಅವನು ಯಾರೂ ಯೋಚಿಸದಿದ್ದನ್ನು ಸಾಧಿಸಲು, ಬಂದೂಕಿನ ಬದಲು ಕ್ರೀಡೆಯನ್ನು ಆಯ್ಕೆ ಮಾಡಲು, ಹಿಂಸೆಯ ಬದಲು ಶಾಂತಿಯತ್ತ ನಡೆಯುವ ವ್ಯಕ್ತಿಯೊಬ್ಬನ ಕಥಾಹಂದರ. Applause Entertainment ಈ ಹಿಂದೆ ‘ಪೋರ್ ಥೋಝಿಲ್’ ತಮಿಳು ಚಿತ್ರದೊಂದಿಗೆ ಕಾಲಿವುಡ್‌ ಪ್ರವೇಶಿಸಿತ್ತು. ಇದೀಗ Neelam Studios ಜೊತೆಗೂಡಿ ನೂತನ ಸಿನಿಮಾ ನಿರ್ಮಿಸುತ್ತಿದೆ. Neelam Studios ಪಾ ರಂಜಿತ್ ಮತ್ತು ಅದಿತಿ ಆನಂದ್ ಅವರ ಒಡೆತನದ ನಿರ್ಮಾಣ ಸಂಸ್ಥೆ.

LEAVE A REPLY

Connect with

Please enter your comment!
Please enter your name here