‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ರುಕ್ಮಿಣಿ ವಸಂತ್‌ ನಟಿಸುತ್ತಿರುವ ಎರಡನೇ ತಮಿಳು ಸಿನಿಮಾ ಸೆಟ್ಟೇರಿದೆ. ಖ್ಯಾತ ಚಿತ್ರನಿರ್ದೇಶಕ ಎ ಆರ್‌ ಮುರುಗದಾಸ್‌ ನಿರ್ದೇಶನದ ಈ ಚಿತ್ರದ ಹೀರೋ ಶಿವಕಾರ್ತಿಕೇಯನ್‌.

ಎ ಆರ್ ಮುರುಗದಾಸ್ ನಿರ್ದೇಶಿಸುತ್ತಿರುವ ಶಿವಕಾರ್ತಿಕೇಯನ್ ನಾಯಕನಟನಾಗಿ ಅಭಿನಯಿಸುತ್ತಿರುವ ನೂತನ ತಮಿಳು ಸಿನಿಮಾ ಸೆಟ್ಟೇರಿದೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ರುಕ್ಮಿಣಿ ವಸಂತ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಹಿರಿಯ ಸಂಕಲನಕಾರ ಶ್ರೀಕರ್ ಪ್ರಸಾದ್ ಸಂಕಲನ ನಿರ್ವಹಿಸುತ್ತಿದ್ದಾರೆ. Sri Lakshmi Movies ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಅನಿರುದ್ಧ ರವಿಚಂದರ್‌ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಿನಿಮಾಗೆ ಸುದೀಪ್ ಎಲಾಮನ್ ಛಾಯಾಗ್ರಾಹಣ ಇರಲಿದೆ. ರುಕ್ಮಿಣಿ ವಸಂತ್‌ ಅವರು ವಿಜಯ್ ಸೇತುಪತಿ ನಟನೆಯ ‘ವಿಜೆಎಸ್ 51’ ತಮಿಳು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್‌ ಪೂರ್ಣಗೊಂಡಿದೆ.

LEAVE A REPLY

Connect with

Please enter your comment!
Please enter your name here